ಆ್ಯಪ್ನಗರ

2ನೇ ಸುತ್ತಿನ ಕಕ್ಷೆ ಬದಲಾವಣೆ ಯಶಸ್ವಿ

ಚಂದ್ರನ ಕಕ್ಷೆ ಸೇರಿದ ವ್ಯೋಮ ನೌಕೆಯನ್ನು ಹಂತಹಂತವಾಗಿ ಕೆಳ ಕಕ್ಷೆಗಳಿಗೆ ಇಳಿಸಿ ಅಂತಿಮವಾಗಿ ಸೆಪ್ಟೆಂಬರ್‌ 7ರಂದು ತಿಂಗಳನ ಅಂಗಳಕ್ಕೆ ಪದಾರ್ಪಣೆ ಮಾಡಿಸಲಾಗುತ್ತದೆ.

PTI 22 Aug 2019, 5:00 am
ಬೆಂಗಳೂರು: ಮಂಗಳವಾರವಷ್ಟೇ ಚಂದ್ರನ ಕಕ್ಷೆಯನ್ನು ಸೇರಿದ್ದ ಚಂದ್ರಯಾನ-2 ವ್ಯೋಮ ನೌಕೆಯನ್ನು ಚಂದ್ರನಿಗೆ ಇನ್ನಷ್ಟು ಹತ್ತಿರವಾಗುವಂತೆ ಕೆಳಗಿನ ಕಕ್ಷೆಗೆ ಇಳಿಸುವ ಪ್ರಕ್ರಿಯೆ ಬುಧವಾರ ಅತ್ಯಂತ ಯಶಸ್ವಿಯಾಗಿ ನಡೆಯಿತು.ಚಂದ್ರನ ಕಕ್ಷೆ ಸೇರಿದ ವ್ಯೋಮ ನೌಕೆಯನ್ನು ಹಂತಹಂತವಾಗಿ ಕೆಳ ಕಕ್ಷೆಗಳಿಗೆ ಇಳಿಸಿ ಅಂತಿಮವಾಗಿ ಸೆಪ್ಟೆಂಬರ್‌ 7ರಂದು ತಿಂಗಳನ ಅಂಗಳಕ್ಕೆ ಪದಾರ್ಪಣೆ ಮಾಡಿಸಲಾಗುತ್ತದೆ. ಬುಧವಾರ ಮೊದಲ ಹಂತದ ಕಕ್ಷೆ ಇಳಿಸುವಿಕೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಬೆಂಗಳೂರಿನಲ್ಲಿರುವ ಇಸ್ರೊ ಪ್ರಧಾನ ಕಚೇರಿ ತಿಳಿಸಿದೆ. ಮಧ್ಯಾಹ್ನ 12.50ಕ್ಕೆ ಪೂರ್ವಯೋಜಿತ ರೀತಿಯಲ್ಲಿ ವ್ಯೋಮ ನೌಕೆಯಲ್ಲಿರುವ ಇಂಧನ ವ್ಯವಸ್ಥೆಯನ್ನು ಬಳಸಿ ಕಕ್ಷಾವತರಣ ನಡೆಸಲಾಗಿದೆ.
Vijaya Karnataka Web moon


1228 ಸೆಕೆಂಡ್‌
ಕಾರ್ಯಾಚರಣೆ ಅವಧಿ

118 ಕಿ.ಮೀ* 4412 ಕಿ.ಮೀ.
ಈಗ ವ್ಯೋಮ ನೌಕೆ ಇರುವ ಕಕ್ಷೆ

ಆಗಸ್ಟ್‌ 28, 2019
ಮುಂದಿನ ಕಕ್ಷಾವತರಣ ದಿನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ