ಆ್ಯಪ್ನಗರ

ಇಂದು 31 ಉಪಗ್ರಹ ಕಕ್ಷೆಗೆ ಸೇರಿಸಲಿರುವ ಇಸ್ರೊ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪನೆಗೆ ಸಜ್ಜಾಗಿದೆ...

Vijaya Karnataka 29 Nov 2018, 6:30 am
ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪನೆಗೆ ಸಜ್ಜಾಗಿದೆ. ಎಂಟು ದೇಶಗಳ ಒಟ್ಟು 31 ಉಪಗ್ರಹಗಳನ್ನು ಇಸ್ರೊ ಗುರುವಾರ ಕಕ್ಷೆಗೆ ಸೇರಿಸಲಿದೆ.
Vijaya Karnataka Web ಇಸ್ರೊ
ಇಸ್ರೊ


'ಹೈಸಿಸ್ಲಾಂಗ್‌' ಹಾಗೂ ಇತರ 30 ಪುಟ್ಟ ಉಪಗ್ರಹಗಳನ್ನು ಹೊತ್ತ 'ಪಿಎಸ್‌ಎಲ್‌ವಿ-ಸಿ43' ಉಡ್ಡಯನ ವಾಹನ ಆಂಧ್ರ ಪ್ರದೇಶದ ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ಬೆಳಗ್ಗೆ.9.58ಕ್ಕೆ ನಭಕ್ಕೆ ಚಿಮ್ಮಲಿದೆ.

'ಹೈಸಿಸ್ಲಾಂಗ್‌', ಭೂ ಪರಿವೀಕ್ಷಣಾ ಉಪಗ್ರಹವಾಗಿದ್ದು, ಐದು ವರ್ಷಗಳ ಆಯುಸ್ಸು ಹೊಂದಿದೆ.

ಭೂ ಮೇಲ್ಮೈಅನ್ನು ಇನ್‌ಫ್ರಾರೆಡ್‌ ಮತ್ತು ಶಾರ್ಟ್‌ವೇರ್‌ ಇನ್‌ಫ್ರಾರೆಡ್‌ ಕಿರಣಗಳ ನೆರವಿನಿಂದ ಹತ್ತಿರದಿಂದ ಪರಿಶೀಲಿಸುವುದು ಖುದ್ದು ಇಸ್ರೊ ಅಭಿವೃದ್ಧಿಪಡಿಸಿರುವ ಈ ಉಪಗ್ರಹದ ಉದ್ದೇಶವಾಗಿದೆ. ಇದು ಉಡ್ಡಯನದ ಪ್ರಧಾನ ಉಪಗ್ರಹವಾಗಿದ್ದು, ಇದರ ಜೊತೆಗೆ ಇತರ ದೇಶಗಳ 30 ಪುಟ್ಟ ಉಪಗ್ರಹಗಳು ಕಕ್ಷೆಗೆ ಸೇರಲಿವೆ. ರಾಕೆಟ್‌ನ ಒಟ್ಟು ತೂಕ 380 ಕೆ.ಜಿ. ಇರಲಿದೆ. ಉಪಗ್ರಹವನ್ನು ಭೂಮಿಯಿಂದ 636 ಕಿ.ಮೀ. ಎತ್ತರದ ಕಕ್ಷೆಗೆ ಸೇರಿಸಲಾಗುವುದು.

ಈ ತಿಂಗಳಲ್ಲಿ ಇಸ್ರೊ ನಡೆಸುತ್ತಿರುವ 2ನೇ ಉಡ್ಡಯನ ಇದಾಗಿದೆ. ನ.14ರಂದು ಜಿಸ್ಯಾಟ್‌-29 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ