ಆ್ಯಪ್ನಗರ

ಕೇಂದ್ರ ಸರಕಾರದ ವಿರುದ್ಧ ಸಿಡಿದೆದ್ದು ಪಕ್ಷ ಸ್ಥಾಪಿಸಿದ್ದ ಶಾ ಫೈಜಲ್‌ ರಾಜಕೀಯ ನಿವೃತ್ತಿ..!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಸಿಡಿದೆದ್ದು ಭಾರತೀಯ ಆಡಳಿತ ಸೇವೆಗೆ ರಾಜೀನಾಮೆ ಸಲ್ಲಿಸಿ ಜಮ್ಮು ಕಾಶ್ಮೀರದಲ್ಲಿ ಹೊಸ ಪಕ್ಷ ಹುಟ್ಟುಹಾಕಿದ್ದ ಶಾ ಫೈಸಲ್‌ ಸೋಮವಾರ ರಾಜಕೀಯದಿಂದ ನಿವೃತ್ತಿಯಾಗಿದ್ದಾರೆ.

Agencies 10 Aug 2020, 10:10 pm
ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಸಿಡಿದೆದ್ದು ಭಾರತೀಯ ಆಡಳಿತ ಸೇವೆಗೆ ರಾಜೀನಾಮೆ ಸಲ್ಲಿಸಿ ಜಮ್ಮು ಕಾಶ್ಮೀರದಲ್ಲಿ ಹೊಸ ಪಕ್ಷ ಹುಟ್ಟುಹಾಕಿದ್ದ ಶಾ ಫೈಸಲ್‌ ಸೋಮವಾರ ರಾಜಕೀಯದಿಂದ ನಿವೃತ್ತಿಯಾಗಿದ್ದಾರೆ. ಇದರೊಂದಿಗೆ ವಾಪಸ್‌ ಆಡಳಿತಾಂಗಕ್ಕೆ ಫೈಸಲ್‌ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
Vijaya Karnataka Web j k leader shah faesal steps down from top post of his party
ಕೇಂದ್ರ ಸರಕಾರದ ವಿರುದ್ಧ ಸಿಡಿದೆದ್ದು ಪಕ್ಷ ಸ್ಥಾಪಿಸಿದ್ದ ಶಾ ಫೈಜಲ್‌ ರಾಜಕೀಯ ನಿವೃತ್ತಿ..!


ಕಳೆದ ವರ್ಷ ಶಾ ಫೈಸಲ್‌ ಕಣಿವೆ ರಾಜ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್‌ ಮೂವ್‌ಮೆಂಟ್‌ ಸ್ಥಾಪಿಸಿದ್ದರು. ಡಾ.ಶಾ ಪೈಸಲ್‌ ಸದ್ಯಕ್ಕೆ ರಾಜಕೀಯ ಕಾರ್ಯಗಳನ್ನು ಮುಂದುವರಿಸುವ ಸ್ಥಿತಿಯಲ್ಲಿಲ್ಲ ಮತ್ತು ಸಂಘಟನೆಯ ಜವಾಬ್ದಾರಿಗಳಿಂದ ಮುಕ್ತರಾಗಲು ಬಯಸುತ್ತೇನೆ ಎಂದು ಪಕ್ಷದ ಕಾರ್ಯನಿರ್ವಾಹಕ ಸದಸ್ಯರಿಗೆ ತಿಳಿಸಿದ್ದರು ಎಂದು ಪಕ್ಷ ಹೇಳಿದೆ.

ಫೈಸಲ್‌ ಅವರ ಮನವಿಯನ್ನು ಗಮನದಲ್ಲಿಟ್ಟುಕೊಂಡು, ಅವರ ವಿನಂತಿಯನ್ನು ಸ್ವೀಕರಿಸಲು ನಿರ್ಧರಿಸಲಾಗಿದೆ. ಇದರಿಂದ ಅವರು ತಮ್ಮ ಜೀವನವನ್ನು ಉತ್ತಮವಾಗಿ ಮುಂದುವರೆಸಬಹುದು. ಅವರು ಆಯ್ಕೆಮಾಡಿಕೊಳ್ಳುವ ಯಾವುದೇ ರೀತಿಯಲ್ಲಿಯೂ ಜನರಿಗೆ ಕೊಡುಗೆ ನೀಡಬಹುದು ಎಂದು ಪಕ್ಷ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರಾಜಸ್ಥಾನ ಕಾಂಗ್ರೆಸ್ ಕಾಕ್‌ಪಿಟ್ ಸೇರುವರೇ ಪೈಲಟ್? ಹೊಡೆಯುವುದೇ ಜಾಕ್‌ಪಾಟ್?

ಶಾ ಫೈಸಲ್‌ ಅವರ ಮುಂದಿನ ಯೋಜನೆಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ, ಸ್ಥಳೀಯ ಮಾಧ್ಯಮಗಳಲ್ಲಿ ಅವರು ಮತ್ತೆ ಆಡಳಿತಾಂಗಕ್ಕೆ ಸೇರಬಹುದು ಎಂದು ಹೇಳಿದೆ. 2010ರ ಯುಪಿಎಸ್‌ಸಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದ ಫೈಸಲ್‌, ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು. 37 ವರ್ಷದ ಫೈಸಲ್‌ 2019ರ ಜನವರಿಯಲ್ಲಿ ತಮ್ಮ ಕೆಲಸ ತ್ಯಜಿಸಿದ್ದರು.

'ನಾನು ಅಶೋಕ್ ಗೆಹ್ಲೋಟ್ ಜೊತೆಗಿದ್ದೇನೆ' - ಪೈಲಟ್‌ ಬಣದ ಬಂಡಾಯ ಶಾಸಕನಿಂದ ಯೂ-ಟರ್ನ್‌!

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಕೇಂದ್ರದ ಕ್ರಮವನ್ನು ಅತ್ಯಂತ ತೀವ್ರವಾಗಿ ಟೀಕಿಸಿದವರಲ್ಲಿ ಫೈಸಲ್‌ ಕೂಡ ಒಬ್ಬರಾಗಿದ್ದರು. ಅವರನ್ನು ಕಳೆದ ವರ್ಷ ನೂರಾರು ಇತರ ರಾಜಕೀಯ ಮುಖಂಡರೊಂದಿಗೆ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಕಳೆದ ತಿಂಗಳು ಅವರನ್ನು ಬಿಡುಗಡೆ ಮಾಡಲಾಗಿತ್ತು.

ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಬಂಧನದ ಅವಧಿ ಮತ್ತೆ 3 ತಿಂಗಳು ವಿಸ್ತರಣೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ