ನ್ಯೂಯಾರ್ಕ್ : ಅಂತಾರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಮಂಡಳಿಗೆ (ಐಎನ್ಸಿಬಿ) ಮಾಜಿ ಐಆರ್ಎಸ್ ಅಧಿಕಾರಿ ಜಗ್ಜೀತ್ ಪವಾಡಿಯಾ ಮರುಆಯ್ಕೆ ಆಗಿದ್ದಾರೆ. 2015ರಿಂದ ಮಂಡಳಿಯ ಸದಸ್ಯರಾಗಿರುವ ಜಗ್ಜೀತ್ ಈ ಬಾರಿ ಚುನಾವಣೆಯಲ್ಲಿ ಅತಿಹೆಚ್ಚು ಮತಗಳನ್ನು ಗಳಿಸಿದ್ದಾರೆ. ಒಟ್ಟು ಐದು ಸದಸ್ಯರ ಆಯ್ಕೆಗೆ ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಆಯೋಗ ಗೌಪ್ಯ ಬ್ಯಾಲೆಟ್ ಚುನಾವಣೆ ನಡೆಸಿತ್ತು. 54 ಸದಸ್ಯರು ಮತ ಚಲಾಯಿಸಿದರು. ಗೆಲುವಿಗೆ 28 ಮತಗಳ ಅವಶ್ಯಕತೆ ಇತ್ತು. ಪವಾಡಿಯಾಗೆ 44 ಮತಗಳು ಸಿಕ್ಕಿವೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಸಯ್ಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಸದ್ಯ ಮಂಡಳಿಯಲ್ಲಿರುವ ಪವಾಡಿಯಾ ಅವರ ಸದಸ್ಯತ್ವ ಅವಧಿ 2020ರವರೆಗೆ ಇದೆ. ಪುನರ್ ಆಯ್ಕೆ ಆಗಿರುವುದರಿಂದ 2025ರ ಮಾ.1ರವರೆಗೆ ಅವರು ಮಂಡಳಿಯಲ್ಲಿ ಇರಲಿದ್ದಾರೆ. ಸದಸ್ಯಯೆಯಾಗಿ ನನಗೆ ನೀಡಲಾಗುವ ಎಲ್ಲ ಜವಾಬ್ದಾರಿಗಳನ್ನು ನಿಷ್ಪಕ್ಷಷಪಾತವಾಗಿ ನಿರ್ವಹಿಸುವೆ. ನನ್ನ ಮೇಲೆ ವಿಶ್ವಾಸ ಇರಿಸಿದ ಮಂಡಳಿ ಸದಸ್ಯರಿಗೆ ಧನ್ಯವಾದ ಎಂದು ವಿಡಿಯೋ ಸಂದೇಶದಲ್ಲಿ ಪವಾಡಿಯಾ ತಿಳಿಸಿದ್ದಾರೆ.
ಮಾದಕವಸ್ತು ನಿಯಂತ್ರಣ ಮಂಡಳಿಗೆ ಜಗ್ಜೀತ್ ಮರುಆಯ್ಕೆ
ಒಟ್ಟು ಐದು ಸದಸ್ಯರ ಆಯ್ಕೆಗೆ ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಆಯೋಗ ಗೌಪ್ಯ ಬ್ಯಾಲೆಟ್ ಚುನಾವಣೆ ನಡೆಸಿತ್ತು. 54 ಸದಸ್ಯರು ಮತ ಚಲಾಯಿಸಿದರು. ಗೆಲುವಿಗೆ 28 ಮತಗಳ ಅವಶ್ಯಕತೆ ಇತ್ತು. ಪವಾಡಿಯಾಗೆ 44 ಮತಗಳು ಸಿಕ್ಕಿವೆ.
Vijaya Karnataka 9 May 2019, 5:00 am