ಆ್ಯಪ್ನಗರ

ಕೇಂದ್ರ ಮಾಜಿ ಸಚಿವ ದಿಲೀಪ್‌ ಜೈಲು ಶಿಕ್ಷೆಗೆ ದೆಹಲಿ ಹೈಕೋರ್ಟ್‌ ತಡೆ, ಏನು ಹೇಳಿತು ಕೋರ್ಟ್‌!

ಸಿಬಿಐ ಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ರಾಯ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಒಪ್ಪಿದ ನ್ಯಾ. ಸುರೇಶ್‌ ಕುಮಾರ್‌ ಕೈತ್‌ ಅವರ ಏಕಸದಸ್ಯ ಪೀಠ, ''ಸದ್ಯದ ಮಟ್ಟಿಗೆ ಶಿಕ್ಷೆ ಅಮಾನತಿನಲ್ಲಿ ಇರಿಸಲಾಗುವುದು. ನ.23ಕ್ಕೆ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ,'' ಎಂದಿದ್ದಾರೆ.

Vijaya Karnataka Web 28 Oct 2020, 9:09 am
ಹೊಸದಿಲ್ಲಿ: ಕಲ್ಲಿದ್ದಲು ಗಣಿಗಾರಿಕೆಗೆ ಹಗರಣದಲ್ಲಿ ಅಪರಾಧಿ ಎಂದು ಪರಿಗಣಿಸಿ ಮಾಜಿ ಕೇಂದ್ರ ಸಚಿವ ದಿಲೀಪ್‌ ರಾಯ್‌ಗೆ ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆ ದಿಲ್ಲಿ ಹೈಕೋರ್ಟ್‌ ತಡೆ ನೀಡಿದೆ. ಸಿಬಿಐ ಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ರಾಯ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಒಪ್ಪಿದ ನ್ಯಾ. ಸುರೇಶ್‌ ಕುಮಾರ್‌ ಕೈತ್‌ ಅವರ ಏಕಸದಸ್ಯ ಪೀಠ, ''ಸದ್ಯದ ಮಟ್ಟಿಗೆ ಶಿಕ್ಷೆ ಅಮಾನತಿನಲ್ಲಿ ಇರಿಸಲಾಗುವುದು. ನ.23ಕ್ಕೆ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ,'' ಎಂದಿದ್ದಾರೆ.
Vijaya Karnataka Web Dilip Ray​


1999ರಲ್ಲಿ ಈ ಹಗರಣ ನಡೆದಿತ್ತು. ಜಾರ್ಖಂಡ್‌ನ 105 ಹೆಕ್ಟೇರ್‌ ಪ್ರದೇಶವನ್ನು ಕಂಪನಿಯೊಂದಕ್ಕೆ ಗುತ್ತಿಗೆ ನೀಡಿದ ಪ್ರಕರಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸಿಬಿಐ ತನಿಖೆ ನಡೆಸಿ, ದೋಷಾರೋಪ ಸಲ್ಲಿಸಿತ್ತು. ಇದರಲ್ಲಿ ದಿಲೀಪ್‌ ರಾಯ್‌ ನೇರ ಭಾಗಿಯಾಗಿದ್ದಾರೆ ಎನ್ನುವುದನ್ನು ಸಿಬಿಐ ತನಿಖೆ ದೃಢಪಡಿಸಿತ್ತು. ತಮ್ಮ ಅಧಿಕಾರ ದುರ್ಬಳಕೆ ಮೂಲಕ ಸರಕಾರದ ನೀತಿಗಳನ್ನು ಸಡಿಲಿಸಿ ಕಲ್ಲಿದ್ದಲು ಗಣಿಗಾರಿಕೆಗೆ ಅನುವು ಮಾಡಿಕೊಟ್ಟಿದ್ದರು ಎಂದು ಸೋಮವಾರ ಸಿಬಿಐ ಕೋರ್ಟ್‌ ತೀರ್ಪು ಪ್ರಕಟಿಸಿ ರಾಯ್‌ಗೆ ಶಿಕ್ಷೆ ವಿಧಿಸಿತ್ತು.

ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ರಾಯ್‌ ಅವರು ಕಲ್ಲಿದ್ದಲು ಖಾತೆ ಸಹಾಯಕ ಸಚಿವರಾಗಿದ್ದರು. ಸೋಮವಾರ ಸಿಬಿಐ ಕೋರ್ಟ್‌ ಇವರನ್ನು ದೋಷಿ ಎಂದು ಘೋಷಿಸಿತ್ತು. ಅವರಿಗೆ ಮೂರು ವರ್ಷ ಶಿಕ್ಷೆ ಕೂಡ ವಿಧಿಸಿತ್ತು. ಇದೀಗ ಈ ಶಿಕ್ಷೆಯನ್ನು ಅಮಾನತಿನಲ್ಲಿಡಲಾಗಿದೆ.

ಬಿಹಾರ ಚುನಾವಣೆ ಲೈವ್‌: ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭ, 2 ಐಇಡಿ ಪತ್ತೆ, ಮತದಾರರಿಗೆ ಪ್ರಧಾನಿ ಮೋದಿ ಮನವಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ