ಆ್ಯಪ್ನಗರ

ಜೈಷ್‌ ಉಗ್ರ ನೈಕೂ ಬಂಧನ

ಕಾಶ್ಮೀರದಲ್ಲಿ ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆಗಳು ಹೊಂಚುಹಾಕಿರುವ ದಾಳಿಗಳು, ಯುವಕರ ಪ್ರಚೋದನೆ ಹಾಗೂ ಇತರ ಕೃತ್ಯಗಳ ಕುರಿತು ನೈಕೂ ವಿಚಾರಣೆ ವೇಳೆ ಮಹತ್ವದ ಸುಳಿವು ಸಿಗುವ ವಿಶ್ವಾಸವಿದೆ ಎಂದು ಪೊಲೀಸರು ಹೇಳಿದ್ದಾರೆ.

Vijaya Karnataka 14 May 2019, 5:00 am
ಶ್ರೀನಗರ : ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೋಮವಾರ ಕಾರ್ಯಾಚರಣೆ ನಡೆಸಿ ಜೈಷ್‌-ಎ-ಮೊಹಮ್ಮದ್‌ ಸಂಘಟನೆಯ ಉಗ್ರ ಹಿಲಾಲ್‌ ನೈಕೂನನ್ನು ಬಂಧಿಸಿದ್ದಾರೆ. ಉಗ್ರನಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ದೂರೂ ಪ್ರದೇಶದಲ್ಲಿ ಉಗ್ರ ನೈಕೂ ಅಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Vijaya Karnataka Web jammu and kashmir police arrest jaish militant hilal naikoo
ಜೈಷ್‌ ಉಗ್ರ ನೈಕೂ ಬಂಧನ


ಕಾಶ್ಮೀರದಲ್ಲಿ ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆಗಳು ಹೊಂಚುಹಾಕಿರುವ ದಾಳಿಗಳು, ಯುವಕರ ಪ್ರಚೋದನೆ ಹಾಗೂ ಇತರ ಕೃತ್ಯಗಳ ಕುರಿತು ನೈಕೂ ವಿಚಾರಣೆ ವೇಳೆ ಮಹತ್ವದ ಸುಳಿವು ಸಿಗುವ ವಿಶ್ವಾಸವಿದೆ ಎಂದು ಪೊಲೀಸರು ಹೇಳಿದ್ದಾರೆ. ಕಣಿವೆಯಲ್ಲಿ ಅಡಗಿರುವ ನೈಕೂ ಸಹಚರರ ಬಗ್ಗೆಯೂ ತನಿಖೆ ವೇಳೆ ಬಹಿರಂಗಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರರನ್ನು ಸೆರೆಹಿಡಿಯಲಾಗುವುದು ಎಂದು ಟ್ವೀಟ್‌ನಲ್ಲಿ ಪೊಲೀಸರು ತಿಳಿಸಿದ್ದಾರೆ.

ಮತ್ತೊಂದೆಡೆ, ಜಮ್ಮುವಿನ ರಾಮ್‌ಬನ್‌ ಜಿಲ್ಲೆಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆವಂತಿಪೊರಾದ ಶೌಕತ್‌ ಅಹ್ಮದ್‌ ಮತ್ತು ಕುಲ್ಗಾಮ್‌ನ ತೌಫೀಕ್‌ ಅಹ್ಮದ್‌ ಎಂದು ಬಂಧಿತರನ್ನು ಗುರುತಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ