ಆ್ಯಪ್ನಗರ

ಹೆಚ್ಚಾಗುತ್ತಿದೆ ಉಗ್ರವಾದದತ್ತ ಕಾಶ್ಮೀರ ಯುವಕರ ಸೆಳೆತ

ಜಮ್ಮು ಕಾಶ್ಮೀರ್‌ದಲ್ಲಿ ಉಗ್ರವಾದದತ್ತ ಆಕರ್ಷಿತರಾಗುತ್ತಿರುವ ಸ್ಥಳೀಯರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ತಿಳಿದು ಬಂದಿದೆ.

ಟೈಮ್ಸ್ ಆಫ್ ಇಂಡಿಯಾ 24 Feb 2017, 11:34 am
ಹೊಸ ದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದದತ್ತ ಸ್ಥಳೀಯರು ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ ಎನ್ನುವ ಆತಂಕದ ವಿಷಯ ಬಹಿರಂಗಗೊಂಡಿದೆ.
Vijaya Karnataka Web jammu kashmir sees rise in number of locals joining militancy
ಹೆಚ್ಚಾಗುತ್ತಿದೆ ಉಗ್ರವಾದದತ್ತ ಕಾಶ್ಮೀರ ಯುವಕರ ಸೆಳೆತ


ಗುರುವಾರ ನಡೆದ ಉಗ್ರರ ದಾಳಿ ಬಳಿಕ ಶ್ರೀನಗರಕ್ಕೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಗಡಿ ಭದ್ರತೆಯನ್ನು ಅವಲೋಕಿಸಿದರು.

ಉತ್ತರ ಸೇನಾಪಡೆಯ ಕಮ್ಯಾಂಡರ್‌ಗಳು, 'ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ಪಾಕಿಸ್ತಾನ ಪ್ರಾಯೋಜಿತ ಉಗ್ರವಾದ ಸಂಘಟನೆಗಳ ದುಷ್ಕೃತ್ಯ ನಮ್ಮ ಸಾಮರ್ಥ್ಯವನ್ನು ಪ್ರೋತ್ಸಾಹಿಸುತ್ತಿದೆ,' ಎಂದು ಹೇಳಿಕೊಂಡಿದ್ದಾರೆ.

ಅಲ್ಲದೇ ಯೋಧರು ಹುತಾತ್ಮರಾದ ಈ ಘಟನೆ 'ಪೂರ್ವಯೋಜಿತವಲ್ಲ' ಎಂದು ಸೇನೆ ಹೇಳುತ್ತಿದ್ದರೂ, ಇಂಥ ಘಟನೆಗಳನ್ನು ಬೆಂಬಲಿಸುತ್ತಿರುವ ಸ್ಥಳೀಯರ ಕುಮ್ಮಕ್ಕು ಇರುವುದನ್ನು ತಳ್ಳಿ ಹಾಕುತ್ತಿಲ್ಲ.

ಕಾಶ್ಮೀರ ಯುವಕರ ಒಲವು ಉಗ್ರವಾದದತ್ತ

ಸುಮಾರು 450 ಉಗ್ರರು ಕಾಶ್ಮೀರದಲ್ಲಿ ಬಿಡುಬಿಟ್ಟಿದ್ದು, ಅವರಲ್ಲಿ 350ಕ್ಕೂ ಅಧಿಕ ಉಗ್ರರು ಉತ್ತರ ಪೀರ್ ಪಂಜಾಲ್ ಅಥವಾ ಕಾಶ್ಮೀರದಲ್ಲಿ ನೆಲೆಯೂರಿದ್ದಾರೆ ಎನ್ನಲಾಗುತ್ತಿದೆ.

ಜನದಟ್ಟಣಿ ಪ್ರದೇಶದಿಂದ ದೂರವಿರುವ ವಿದೇಶಿ ಭಯೋತ್ಪಾದಕರ ವಿರುದ್ಧ ಕೌಂಟರ್ ಟೆರರ್ ಕಾರ್ಯಾಚರಣೆ ನಡೆಸುವುದು ಸುಲಭ. ಆದರೆ, ಭಯೋತ್ವಾದಕ ಸಂಘಟನೆಗಳಿಗೆ ಸ್ಥಳೀಯರು ಹೆಚ್ಚೆಚ್ಚು ಸೇರಿಕೊಳ್ಳುತ್ತಿರುವುದರಿಂದ ಇಂಥ ಉಗ್ರವಾದವನ್ನು ಹತ್ತಿಕ್ಕುವುದು ಕಷ್ಟವೆಂದು ಸೇನಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಜಮ್ಮು ಕಾಶ್ಮೀರದ ಸೋಪಿಯಾನ್ ಜಿಲ್ಲೆಯ ಕುಂಗೂ ಹಳ್ಳಿಯಲ್ಲಿ ಗಸ್ತು ನಡೆಸುತ್ತಿದ್ದ ಯೋಧರ ವಾಹನದ ಮೇಲೆ ಉಗ್ರರು ಗುರುವಾರ ಮರೆಯಿಂದ ಗುಂಡಿನ ಮಳೆಗೈದಿದ್ದರು. ಈ ವೇಳೆ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ