ಆ್ಯಪ್ನಗರ

ಜಾಟ್‌ ಕೋಟಾ ಪ್ರಚೋದನಕಾರಿ ಸಂದೇಶ: ಎಫ್‌ಐಆರ್ ದಾಖಲು

ಜಾಟ್ ಮೀಸಲಾತಿ ಪ್ರತಿಭಟನೆಗೆ ಸಂಬಂಧಿಸಿ ದಂತೆ ಪ್ರಚೋದನಕಾರಿ ಸಂದೇಶ ಕಳಿಸಿದವರ ವಿರುದ್ಧ ಪ್ರಕರಣ.

ಏಜೆನ್ಸೀಸ್ 4 Jun 2016, 3:27 pm
ಚಂಡೀಗಢ: ಜಾಟ್ ಮೀಸಲಾತಿ ಪ್ರತಿಭಟನೆಗೆ ಸಂಬಂಧಿಸಿದಂತೆ ವಾಟ್ಸಾಪ್‌ನಲ್ಲಿ ಪ್ರಚೋದನಕಾರಿ ಸಂದೇಶ ವಿನಿಮಯ ಮಾಡಿದವರ ವಿರುದ್ಧ ಹರಿಯಾಣಾ ಪೊಲೀಸರು ದೇಶದ್ರೋಹ ಕಾನೂನಿನಡಿ ಪ್ರಕರಣ ದಾಖಲಿಸುವ ಮೂಲಕ ಕಠಿಣ ಕ್ರಮ ಕೈಗೊಂಡಿದ್ದಾರೆ.
Vijaya Karnataka Web jat quota whatsapp text invites sedition charge
ಜಾಟ್‌ ಕೋಟಾ ಪ್ರಚೋದನಕಾರಿ ಸಂದೇಶ: ಎಫ್‌ಐಆರ್ ದಾಖಲು


ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳು ಪ್ರಸಾರವಾಗುವುದನ್ನು ತಡೆಯುವ ಮೂಲಕ ಉದ್ವಿಗ್ನತೆ ನಿವಾರಣೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೆಲವು ಕಿಡಿಗೇಡಿಗಳು ಮೀಸಲಾತಿಗೆ ಆಗ್ರಹಿಸುವ ಪ್ರತಿಭಟನೆಗೆ ಸಂಬಂಧಿಸಿದಂತೆ ತಪ್ಪಾಗಿ ವದಂತಿಗಳನ್ನು ಹರಿಯಬಿಡುತ್ತಾರೆ. ಇದು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತದೆ. ಹೀಗಾಗಿ ಹಿಸ್ಸಾರ್‌ನಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತು ದೇಶದ್ರೋಹ ಕಾನೂನಿನಡಿ ಪ್ರಕರಣ ದಾಖಲಿಸಿರುವುದಾಗಿ ನಗರ ಠಾಣೆಯ ಮುಖ್ಯಾಧಿಕಾರಿ ಮನ್‌ದೀಪ್‌ ಸಿಂಗ್‌ ಹೇಳಿದ್ದಾರೆ.
ಜಾಟ್‌ ಮೀಸಲಾತಿ ಪ್ರತಿಭಟನೆ ಆರಂಭಗೊಳ್ಳಲಿದ್ದು, ಆಹಾರ ಸಾಮಗ್ರಿ ಸಂಗ್ರಹಿಸಿಟ್ಟುಕೊಳ್ಳುವಂತೆ ಹೇಳುವ ಸಂದೇಶವನ್ನು ವ್ಯಕ್ತಿಯೊಬ್ಬ ವಾಟ್ಸಾಪ್‌ನಲ್ಲಿ ಕಳಿಸಿದ್ದಾನೆ. ಈ ಸಂದೇಶ ಉತ್ತರ ರಾಜ್ಯಗಳಲ್ಲಿ ಬಹಳಷ್ಟು ಕೋಲಾಹಲ್ಕಕೆ ಕಾರಣವಾಗಲಿದೆ. ಈ ನಿಟ್ಟಿನಲ್ಲಿ ಸಂದೇಶದ ಮೂಲಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವುದಾಗಿ ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ