ಆ್ಯಪ್ನಗರ

ಕೊನೆ ಕ್ಷಣದಲ್ಲಿ ಬಸ್ ಇಳಿದು ಸಾವಿನಿಂದ ಪಾರಾದ ಯೋಧ

ಹೀಗೆ ಅದೃಷ್ಟವಶಾತ್ ಸಾವನ್ನು ತಪ್ಪಿಸಿಕೊಂಡ ಸಿಆರ್‌ಪಿಎಫ್ ಜವಾನ ಮುಂಬಯಿ ನಿವಾಸಿ ಥಾಕಾ ಬೆಲ್ಕರ್‌. ಇದೇ ತಿಂಗಳ 24 ರಂದು ಆತನಿಗೆ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ ಆತ ಮನೆಗೆ ತೆರಳಲು ರಜೆಗೆ ಅರ್ಜಿ ಸಲ್ಲಿಸಿದ್ದ. ಆದರೆ ರಜೆ ಮಂಜೂರಾಗದಿದ್ದರಿಂದ ಕರ್ತವ್ಯಕ್ಕೆ ತೆರಳಲು ಸಜ್ಜಾಗಿ ಬಸ್ ಏರಿದ್ದ. ಇನ್ನೇನು ಬಸ್ ಹೊರಡಬೇಕು ಅನ್ನುವಷ್ಟರಲ್ಲಿ ಆತನ ರಜೆಗೆ ಒಪ್ಪಿಗೆ ನೀಡಲಾಗಿತ್ತು.

TIMESOFINDIA.COM 19 Feb 2019, 3:13 pm
ಮುಂಬಯಿ: ಆತನ ಆಯುಷ್ಯ ಗಟ್ಟಿ ಇತ್ತು. ಸಾವಿನ ಕಡೆ ಮುಖ ಮಾಡಿ ಹೊರಟ ಬಸ್ ಏರಿದ್ದ ಆತ ಕೊನೆ ಕ್ಷಣದಲ್ಲಿ ಪ್ರಯಾಣವನ್ನು ಮೊಟಕುಗೊಳಿಸಿ ಬಸ್‌ನಿಂದ ಇಳಿದುಕೊಂಡಿದ್ದ. ಹಿಂತಿರುಗಿ ತಾನು ನೆಲೆಸಿದ್ದ ಕೋಣೆಗೆ ಬಂದು ಮನೆಗೆ ಹೋಗುವ ತಯಾರಿ ನಡೆಸುತ್ತಿದ್ದವನಿಗೆ ಬರಸಿಡಿಲಂತೆ ಸುದ್ದಿಯೊಂದು ಹರಿದು ಬಂದಿತ್ತು. ಅವನು ಏರಿದ್ದ ಬಸ್ ಆತ್ಮಾಹುತಿ ಬಾಂಬ್ ದಾಳಿಗೊಳಲಾಗಿ ಅದರಲ್ಲಿದ್ದ ಆತನ ಸಹೋದ್ಯೋಗಿಗಳು ಹುತಾತ್ಮರಾಗಿದ್ದರು. ಎದೆ ಝಲ್ ಎಂದಿತು. ಸಾವು ಎದುರಿಂದ ಹಾದಿ ಹೋಯಿತೆನ್ನಿಸಿತು. ವಾರವಾಗುತ್ತ ಬಂದರೂ ಆ ಆಘಾತದಿಂದ ಆತ ಹೊರಬಂದಿಲ್ಲ.
Vijaya Karnataka Web crpf


ಹೀಗೆ ಅದೃಷ್ಟವಶಾತ್ ಸಾವನ್ನು ತಪ್ಪಿಸಿಕೊಂಡ ಸಿಆರ್‌ಪಿಎಫ್ ಜವಾನ ಮುಂಬಯಿ ನಿವಾಸಿ ಥಾಕಾ ಬೆಲ್ಕರ್‌. ಇದೇ ತಿಂಗಳ 24 ರಂದು ಆತನಿಗೆ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ ಆತ ಮನೆಗೆ ತೆರಳಲು ರಜೆಗೆ ಅರ್ಜಿ ಸಲ್ಲಿಸಿದ್ದ. ಆದರೆ ರಜೆ ಮಂಜೂರಾಗದಿದ್ದರಿಂದ ಕರ್ತವ್ಯಕ್ಕೆ ತೆರಳಲು ಸಜ್ಜಾಗಿ ಬಸ್ ಏರಿದ್ದ. ಇನ್ನೇನು ಬಸ್ ಹೊರಡಬೇಕು ಅನ್ನುವಷ್ಟರಲ್ಲಿ ಆತನ ರಜೆಗೆ ಒಪ್ಪಿಗೆ ನೀಡಲಾಗಿತ್ತು.

ಪಾರ್ನರ್ ತಾಲ್ಲೂಕಿನಲ್ಲಿರುವ ಮಹೋಸೊಬಾ ಝಾಪ್ ಗ್ರಾಮದ ನಿವಾಸಿಯಾಗಿರುವ ಅವರು ಭಾನುವಾರ ರಾತ್ರಿ ಮನೆಗೆ ತಲುಪಿದ್ದಾರೆ. ಆದರೆ ತೀವ್ರ ಆಘಾತದಲ್ಲಿರುವ ಅವರು ಹೆಚ್ಚು ಮಾತನಾಡುತ್ತಿಲ್ಲ, ಎಂದು ಅವರ ಸೋದರಸಂಬಂಧಿ ಅರುಣ್ ಬೆಲ್ಕರ್ ಹೇಳಿದ್ದಾರೆ.

78 ಬಸ್‌ಗಳಲ್ಲಿ 2500 ಸೈನಿಕರು ಗುರುವಾರ ಜಮ್ಮುವಿನಿಂದ ಶ್ರೀನಗರದತ್ತ ಹೊರಟಿದ್ದರು. ಥಾಕಾ ಕೂಡ ತನಗೆ ನಿಗದಿಯಾಗಿದ್ದ ಬಸ್ ಏರಿದ್ದರು. ಇನ್ನೇನು ಬಸ್ ಹೊರಡಬೇಕು ಅನ್ನುವಷ್ಟರಲ್ಲಿ ನಿಮ್ಮ ರಜೆ ಮಂಜೂರಾಗಿದ್ದು, ನೀವಿನ್ನು ಹೋಗಬಹುದು ಎಂದು ಸೂಚನೆ ನೀಡಲಾಯಿತು. ಗೆಳೆಯ ವಿವಾಹ ಸಂಭ್ರಮದಲ್ಲಿ ಊರಿಗೆ ಹೊರಟಿದ್ದಕ್ಕೆ ಖುಷಿ ಪಟ್ಟ ಸಹೋದ್ಯೋಗಿಗಳು ದೊಡ್ಡಕ್ಕೆ ಚೀರುತ್ತ ಆತನಿಗೆ ಅಭಿನಂದನೆ ಹೇಳಿದರು. ಬಳಿಕ ತಬ್ಬಿಕೊಂಡು ಬೀಳ್ಕೊಟ್ಟರು, ಎಂದು ಅರುಣ್ ತಮ್ಮ ಸಹೋದರ ಮೌನಕ್ಕೆ ಜಾರಿರುವುದರ ಹಿಂದಿನ ಕಾರಣವನ್ನು ಬಿಚ್ಚಿಡುತ್ತಾನೆ.


ತಮ್ಮ ಬ್ಯಾಗ್‌ನ್ನು ಬೆನ್ನಿಗೆ ಹಾಕಿಕೊಂಡು ಬಸ್ ಇಳಿದ ಥಾಕಾ ಇತರ ಎಲ್ಲಾ ಸೈನಿಕರಿಗೂ ಗುಡ್ ಬೈ ಹೇಳಿ ಬೇಸ್ ಕ್ಯಾಂಪ್‌ಗೆ ಮರಳಿದರು. ಆದರೆ ಅದು ಮನೆಗೆ ಹೋಗುತ್ತಿದ್ದ ತಮಗೆ ಕೋರುತ್ತಿರುವ ವಿದಾಯವಲ್ಲ, ಬದಲಾಗಿ ತನ್ನ ಸಂಗಾತಿಗಳಾಗಿದ್ದ ಪ್ರೀತಿಯ ಸ್ನೇಹಿತರಿಗೆ ತಾನು ಹೇಳುತ್ತಿರುವ ಅಂತಿಮ ವಿದಾಯ ಎಂಬ ಕಲ್ಪನೆ ಅವರಿಗಿರಲಿಲ್ಲ. ಕೆಲವು ಗಂಟೆಗಳ ಬಳಿಕ ಅವರು ಹತ್ತಿದ್ದ ಬಸ್‌ನಲ್ಲಿದ್ದ ಎಲ್ಲ ಸೈನಿಕರು ಹುತಾತ್ಮರಾದರು ಎಂಬ ಸುದ್ದಿ ಹರಿದು ಬಂತು.

ಅವರ ಮಗ ಸುರಕ್ಷಿತವಾಗಿ ಹಿಂತಿರುಗಿರಬಹುದು. ಆದರೆ ಪರಿವಾರ ಮಗನೊಂದಿಗಿದ್ದ ಇತರರು ಎಂದಿಗೂ ಮರಳಲಾರರು ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಿದೆ. ನಾನು ನನ್ನ ಮಗ ಸುರಕ್ಷಿತವಾಗಿ ಮರಳಿದ್ದಾನೆಂಬುದನ್ನು ಸಂಭ್ರಮಿಸುತ್ತಿಲ್ಲ. ದಾಳಿಯಲ್ಲಿ ಕೊಲ್ಲಲ್ಪಟ್ಟ ಎಲ್ಲರೂ ನನ್ನ ಮಕ್ಕಳೇ ಎಂದು ಆತನ ತಂದೆ ಬಾಬಾಜಿ ಗದ್ಗದಿತರಾಗುತ್ತಾರೆ. ಮದುವೆ ಮುಗಿದ ಮೇಲೆ ಆತ ಜಮ್ಮುವಿಗೆ ಹಿಂತಿರುಗಲಿದ್ದಾನೆ ಎಂದವರು ತಿಳಿಸಿದ್ದಾರೆ.

ನಮಗೆ ಉಗ್ರ ದಾಳಿ ಬಗ್ಗೆ ಗೊತ್ತಿರಲಿಲ್ಲ. ಈ ವಿಷಯ ತಿಳಿದು ಉದ್ವಿಗ್ನರಾದ ಸಂಬಂಧಿಕರು ನಮಗೆ ಫೋನ್ ಕರೆ ಮಾಡಿದರು. ತಕ್ಷಣ ನಾನು ಮಗನಿಗೆ ಫೋನ್ ಮಾಡಿದೆ. ಆತ ನಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿದ. ಮತ್ತೇನು ಮಾತನಾಡಲಿಲ್ಲ ಎಂದು ಬಾಬಾಜಿ ಹೇಳಿದ್ದಾರೆ.

ರೈತ ಬಾಬಾಜಿಯ ಏಕೈಕ ಪುತ್ರನಾಗಿರುವ ಥಾಕಾ ಕಳೆದ ನಾಲ್ಕು ವರ್ಷದ ಹಿಂದೆ ಸೈನ್ಯ ಸೇರಿದ್ದ. ಕಳೆದ 8 ತಿಂಗಳ ಹಿಂದೆ ಆತನ ವಿವಾಹ ನಿಶ್ಚಯವಾಗಿತ್ತು. ದಾಳಿಗಿಂತ ಕೆಲ ದಿನಗಳ ಹಿಂದ ಆತ ರಜೆಗಾಗಿ ಅರ್ಜಿ ಸಲ್ಲಿಸಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ