ಆ್ಯಪ್ನಗರ

ಜಯಲಲಿತಾ, ಈಗ ಬಿಜೆಪಿಗೂ ಅಮ್ಮ !

ಭಾನುವಾರ, ಜಯಲಲಿತಾ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅಮಿತ್ ಶಾ, ಅವರ ಸದಾ ಪ್ರೀತಿಯ ಅಮ್ಮನಾಗಿಯೇ ಸ್ಮರಿಸಲ್ಪಡುತ್ತಾರೆ ಎಂದು ಬರೆದಿದ್ದಾರೆ.

TIMESOFINDIA.COM 25 Feb 2019, 3:38 pm
ಚೆನ್ನೈ: ಎಐಎಡಿಎಂಕೆ ಮುಖಂಡರು ಮತ್ತು ಕಾರ್ಯಕರ್ತರು ಅವರ ನಾಯಕಿ, ಮಾಜಿ ಸಿಎಂ ಜೆ ಜಯಲಲಿತಾ ಅವರನ್ನು ಗೌರವ ಪೂರ್ವಕವಾಗಿ "ಅಮ್ಮ" ಎಂದು ಸಂಬೋಧಿಸುತ್ತಾರೆ. ಮತ್ತೀಗ ತಮಿಳುನಾಡಿನಲ್ಲಿ ಪಕ್ಷದ ವ್ಯವಹಾರಗಳ ಉಸ್ತುವಾರಿ ವಹಿಸಿಕೊಂಡಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪಿಯೂಷ್ ಗೋಯಲ್ ಅವರು ಸಹ ತಮ್ಮ ಮಿತ್ರ ಪಕ್ಷದ ದಿವಂಗತ ನಾಯಕಿಯನ್ನು ಅಮ್ಮ ಎಂದು ಉಲ್ಲೇಖಿಸುತ್ತಿದ್ದಾರೆ.
Vijaya Karnataka Web Jayalalithaa


ಭಾನುವಾರ, ಜಯಲಲಿತಾ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅಮಿತ್ ಶಾ, ಅವರ ಸದಾ ಪ್ರೀತಿಯ ಅಮ್ಮನಾಗಿಯೇ ಸ್ಮರಿಸಲ್ಪಡುತ್ತಾರೆ ಎಂದು ಬರೆದಿದ್ದಾರೆ.

ಬಡ ಮತ್ತು ಬಡತನದ ಅಂಚಿನಲ್ಲಿರುವ ಜನರ ಸೇವೆಗೆಗಾಗಿ ಎಐಎಡಿಎಂಕೆ ನಾಯಕಿ ಹೊಂದಿದ್ದ "ಉತ್ಸಾಹ ಮತ್ತು ಬದ್ಧತೆ" ಲಕ್ಷಾಂತರ ಜನರ ಬದುಕಿಗೆ ಬೆಳಕಾಯಿತು. ಶತ ಶತಮಾನಗಳವರೆಗೆ ಅವರು ಪ್ರೀತಿಯ ಅಮ್ಮನಾಗಿ ನೆನಪಾಗುತ್ತಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಗೋಯಲ್ ಅವರು ಶಾಗಿಂತ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಚೆನ್ನೈನಲ್ಲಿ ರೈತರ ಆದಾಯ ಬೆಂಬಲ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಪದೇ ಪದೇ ಜಯಲಲಿತಾ ಅವರನ್ನು ಅಮ್ಮ ಎಂದು ಉಲ್ಲೇಖಿಸಿದರು. ಅವರನ್ನು ಅಪಾರವಾಗಿ ಹೊಗಳುತ್ತ ಜಯಲಲಿತಾ ತಮಿಳುನಾಡಿನ ಉಕ್ಕಿನ ಮಹಿಳೆ ಎಂದರು.

ಆಡಳಿತಾರೂಢ ಎಐಡಿಎಂಕೆ ಮತ್ತು ಬಿಜೆಪಿ ಮೈತ್ರಿ ಅಮ್ಮ ಜನ್ಮದಿನದಂದೇ (ಜನ್ಮ ನಕ್ಷತ್ರದ ಪ್ರಕಾರ ಫೆಬ್ರವರಿ 19) ಅಧಿಕೃತವಾಗಿದ್ದು ಕಾಕತಾಳೀಯ ಎಂದು ಅವರು ಹೇಳಿದ್ದಾರೆ. ಈ ದಿನದಂದೇ ದೇಶಾದ್ಯಂತ ರೈತರ ಆದಾಯ ಬೆಂಬಲ ಯೋಜನೆಯನ್ನು ಆರಂಭಿಸಿದ್ದಕ್ಕೆ ಅವರು ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದರು. ಇದು ಅಮ್ಮನಿಗೆ ಸಂದ ಉತ್ತಮ ಗೌರವ ಎಂದವರು ಪ್ರತಿಪಾದಿಸಿದ್ದಾರೆ.

ಜಯಲಲಿತಾ ಜೀ ಎಂದು ಉಲ್ಲೇಖಿಸಿರುವ ಪ್ರಧಾನಿ ಮೋದಿ, ತಮಿಳುನಾಡಿನ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಎಐಎಡಿಎಂಕೆ ಕಾರ್ಯಕರ್ತರು ಸಹ ತಮ್ಮ ಪಕ್ಷದ ಕಚೇರಿಯಲ್ಲಿ ಮೋದಿ ಮತ್ತು ಜಯಲಲಿತಾ ಜತೆಗಿರುವ ಛಾಯಾಚಿತ್ರಗಳನ್ನು ಅಂಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ