ಆ್ಯಪ್ನಗರ

ಜಾರ್ಖಂಡ್‌ ನಿರ್ಭಯಾ ಆರೋಪಿಯೂ ದೋಷಿ, ಸಿಬಿಐ ನ್ಯಾಯಾಲಯ ಮಹತ್ವದ ತೀರ್ಪು

ಜಾರ್ಖಂಡ್‌ನ ರಾಂಚಿಯಲ್ಲಿ2016­ರಲ್ಲಿನಡೆದಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿಸಿಬಿಐ ವಿಶೇಷ ನ್ಯಾಯಾಲಯ ಪ್ರಮುಖ ಆರೋಪಿಯನ್ನು ದೋಷಿ ಎಂದು ಶುಕ್ರವಾರ ತೀರ್ಪು ನೀಡಿದೆ.

Vijaya Karnataka Web 21 Dec 2019, 9:23 am
ಹೊಸದಿಲ್ಲಿ: ಜಾರ್ಖಂಡ್‌ನ ರಾಂಚಿಯಲ್ಲಿ 2016ರಲ್ಲಿ ನಡೆದಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಪ್ರಮುಖ ಆರೋಪಿಯನ್ನು ದೋಷಿ ಎಂದು ಶುಕ್ರವಾರ ತೀರ್ಪು ನೀಡಿದೆ.
Vijaya Karnataka Web rahul raj


ನವೆಂಬರ್‌ ಮಧ್ಯಭಾಗದಲ್ಲಿ ವಿಚಾರಣೆ ಆರಂಭಿಸಿದ್ದ ಕೋರ್ಟ್‌ ಡಿಸೆಂಬರ್‌ ಮಧ್ಯಭಾಗದ ಹೊತ್ತಿಗೆ ತೀರ್ಪು ನೀಡಿ ತ್ವರಿತಗತಿ­ಯಲ್ಲಿ ನ್ಯಾಯದಾನ ಮಾಡಿದೆ. ದಿಲ್ಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ನಾಲ್ಕು ವರ್ಷ ಸಂದ ಸಂದರ್ಭದಲ್ಲಿ ಅಂದರೆ 2016ರ ಡಿಸೆಂಬರ್‌ 15-­16ರ ಮಧ್ಯರಾತ್ರಿಯಲ್ಲಿ ರಾಂಚಿಯಲ್ಲಿ ಎಂಜಿನಿ­ಯರಿಂಗ್‌ ವಿದ್ಯಾರ್ಥಿ ಮೇಲೆ ಇದೇ ರೀತಿಯ ಸಾಮೂಹಿಕ ಅತ್ಯಾಚಾರ ನಡೆದಿತ್ತು.

ಹಾಗಾಗಿ ಇದು ರಾಂಚಿಯ ನಿರ್ಭಯಾ ಅತ್ಯಾಚಾರ ಪ್ರಕರಣ ಎಂದೇ ಗಮನ ಸೆಳೆದಿತ್ತು. ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ರಾಹುಲ್‌ ರಾಜ್‌ನನ್ನು ಸಿಬಿಐ ತನಿಖಾ ತಂಡ ಈ ವರ್ಷದ ಜೂನ್‌ನಲ್ಲಿ ಲಖನೌದಿಂದ ಜೈಲಿನಿಂದ ಘಟನಾ ಸ್ಥಳಕ್ಕೆ ಕರೆತಂದು ವಿಚಾರಣೆ ನಡೆಸಿತ್ತು. ಅತ್ಯಾಚಾರ ಪ್ರಕರಣದಲ್ಲಿ ಈತ ತಲೆಮರೆಸಿಕೊಂಡಿ­ದ್ದರೂ ಬೇರೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ. ಆದರೆ ಸಿಬಿಐ ಬಹಳ ನಾಜೂಕಿನಿಂದ 'ಡಿಎನ್‌ಎ ಲೈನೇಜ್‌' ವಿಧಾನ ಬಳಸಿ ತನಿಖೆ ನಡೆಸಿ ಸಿಕ್ಕ ಪುರಾವೆಗಳನ್ನು ಆಧರಿಸಿ ರಾಜ್‌ನನ್ನು ಕರೆತಂದು ವಿಚಾರಣೆಗೊಳ­ಪಡಿಸಿದಾಗ ಆತ ಅಪರಾಧ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ