ಆ್ಯಪ್ನಗರ

ಜಿಗಿಶಾ ಕೊಲೆ: ಇಬ್ಬರಿಗೆ ಗಲ್ಲು ಶಿಕ್ಷೆ

ಐಟಿ ಎಕ್ಸಿಕ್ಯೂಟಿವ್ ಜಿಗಿಶಾ ಘೋಷ್ ಕೊಲಗೈದ ಹಂತಕರಲ್ಲಿ ಇಬ್ಬರಿಗೆ ದಿಲ್ಲಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ್ದು, ಮತ್ತೊಬ್ಬ ದೋಷಿಗೆ ಜೀವವಾಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಏಜೆನ್ಸೀಸ್ 22 Aug 2016, 1:12 pm
ಹೊಸದಿಲ್ಲಿ: ಐಟಿ ಎಕ್ಸಿಕ್ಯೂಟಿವ್ ಜಿಗಿಶಾ ಘೋಷ್ ಕೊಲಗೈದ ಹಂತಕರಲ್ಲಿ ಇಬ್ಬರಿಗೆ ದಿಲ್ಲಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ್ದು, ಮತ್ತೊಬ್ಬ ದೋಷಿಗೆ ಜೀವವಾಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Vijaya Karnataka Web jigisha murder case two convicts get death sentence 1 gets life in jail
ಜಿಗಿಶಾ ಕೊಲೆ: ಇಬ್ಬರಿಗೆ ಗಲ್ಲು ಶಿಕ್ಷೆ


ಅಪಹರಣ ಹಾಗೂ ಕೊಲೆ ಆರೋಪದಡಿ ರವಿ ಕಪೂರ್, ಅಮಿತ್ ಶುಕ್ಲಾ ಮತ್ತು ಬಲ್ಜೀತ್ ಸಿಂಗ್ ಮಲಿಕ್ ಅವರನ್ನು ದೋಷಿ ಎಂದು ಜುಲೈ 14ರಂದೇ ಕೋರ್ಟ್ ತೀರ್ಮಾನಿಸಿತ್ತು. ಕಪೂರ್ ಹಾಗೂ ಶುಕ್ಲಾಗೆ ಇದೀಗ ಗಲ್ಲು ಶಿಕ್ಷೆ ವಿಧಿಸಿದೆ. ಇದೇ ದೋಷಿಗಳು ಇಂಡಿಯಾ ಟುಡೇ ಗ್ರೂಪ್ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹಾಗೂ ಟ್ಯಾಕ್ಸಿ ಡ್ರೈವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ವಿಚಾರಣೆ ಎದುರಿಸುತ್ತಿದ್ದಾರೆ.

28 ವರ್ಷದ ಜಿಗಿಶಾ ಹೆವಿಟ್ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಆಪರೇಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಕೆಯನ್ನು ದಕ್ಷಿಣ ದಿಲ್ಲಿಯ ವಸಂತ್ ವಿಹಾರ್ ಪ್ರದೇಶದಲ್ಲಿ ಕಚೇರಿ ಕ್ಯಾಬ್ ಮಾರ್ಚ್ 18, 2009ರಂದು ಡ್ರಾಪ್ ನೀಡಿದ ನಂತರ, ಅಪಹರಿಸಿ ಹತ್ಯೆಗೈಯಲಾಗಿತ್ತು. ಆಕೆಯ ಮೃತದೇಹ ಮಾರ್ಚ್ 20 ರಂದು ಹರಿಯಾಣದ ಸೂರಜ್‌ಖುಂಡ್‌ನಲ್ಲಿ ಪತ್ತೆಯಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ