ಆ್ಯಪ್ನಗರ

ಪ್ರಜಾಪ್ರಭುತ & ಸಂವಿಧಾನಕ್ಕೆ ಮೋದಿ ಕಂಟಕ: ಜಿಗ್ನೇಶ್‌ ಮೇವಾನಿ

ಮೋದಿಜಿ ನಾನು ನಿಮ್ಮ ಫಾಲೋ ಮಾಡುತ್ತಿರುವ ಗುಜರಾತಿ, ಇವಾಗ ಶಾಸಕನಾಗಿ, ನಮಗೆ ಭ್ರಷ್ಟಾಚಾರದ ಎಲ್ಲ ದಾಖಲೆಗಳು ಸಿಗುತ್ತವೆ.

TNN 9 Jan 2018, 7:18 pm
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ರಾಷ್ಟ್ರದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಕಂಟಕ ಎಂದು ದಲಿತ ನಾಯಕ, ಗುಜರಾತ್‌ನ ಶಾಸಕ ಜಿಗ್ನೇಶ್‌ ಮೇವಾನಿ ಆರೋಪಿಸಿದ್ದಾರೆ. ದಿಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದರೂ, ಸಂಸತ್ತಿನ ಬೀದಿಯಲ್ಲಿ ಕಾಣಿಸಿಕೊಂಡ ಮೇವಾನಿ ಮತ್ತು 18 ಕಾಲೇಜು ವಿದ್ಯಾರ್ಥಿಗಳು 'ಯುವ ಹೂಂಗಾರ' ರ‍್ಯಾಲಿ ನಡೆಸಲು ಯತ್ನಿಸಿದರು.
Vijaya Karnataka Web jignesh mevani targets pm modi at yuva hunkar rally
ಪ್ರಜಾಪ್ರಭುತ & ಸಂವಿಧಾನಕ್ಕೆ ಮೋದಿ ಕಂಟಕ: ಜಿಗ್ನೇಶ್‌ ಮೇವಾನಿ


ಗುಜರಾತ್‌ ವಡಗಾಮ್‌ ಕ್ಷೇತ್ರದಿಂದ ಆಯ್ಕೆಯಾಗಿರುವ ಮೇವಾನಿ ನೇತೃತ್ವದ 'ಯುವ ಹೂಂಕಾರ' ರ‍್ಯಾಲಿಗೆ ದಿಲ್ಲಿ ಪೊಲೀಸರು ಅನುಮತಿ ನೀಡಿರಲಿಲ್ಲ. ಸಂಸತ್‌ ಭವನದ ರಸ್ತೆಯಲ್ಲಿ 'ಗುಜರಾತ್‌ ಮಾದರಿ ರಾಜಕೀಯ' ಮಾದರಿ ಎಂಬ ವಿಚಾರವನ್ನಿಟ್ಟುಕೊಂಡು ರ‍್ಯಾಲಿ ನಡೆಸಲು ಮುಂದಾಗಿದ್ದರು. ಗಣರಾಜ್ಯೋತ್ಸವ ಹಿನ್ನೆಲೆ ಅಹಿತಕರ ಘಟನೆ ಸಂಭವಿಸದಂತೆ ನಿಗಾ ವಹಿಸಲು ಅರೆ ಸೇನಾ ಪಡೆ ಯೋಧರು ಸೇರಿದಂತೆ ಸುಮಾರು 2,000 ಭದ್ರತಾ ಸಿಬ್ಬಂದಿಯನ್ನು ದಿಲ್ಲಿಯಲ್ಲಿ ನೇಮಿಸಲಾಗಿದೆ.

'ಮೋದಿಜಿ ನಾನು ನಿಮ್ಮ ಫಾಲೋ ಮಾಡುತ್ತಿರುವ ಗುಜರಾತಿ, ಇವಾಗ ಶಾಸಕನಾಗಿ, ನಮಗೆ ಭ್ರಷ್ಟಾಚಾರದ ಎಲ್ಲ ದಾಖಲೆಗಳು ಸಿಗುತ್ತವೆ. ಭೀಮ ಸೇನೆ ಸ್ಥಾಪಕ ಚಂದ್ರಶೇಖರ್‌ ಆಜಾದ್‌ ಅವರನ್ನು ಜೈಲಿನಿಂದ ಬಿಡುಗಡೆ ಯಾಕೆ ಮಾಡಿಲ್ಲ ಎಂಬುದನ್ನು ತಿಳಿಸಬೇಕು. ಭ್ರಷ್ಟಾಚಾರ, ಬಡತನ, ನಿರುದ್ಯೋಗಳಂತಹ ನಿಜವಾದ ಸಮಸ್ಯೆಗಳನ್ನು ಮ್ಯಾಟ್‌ನ ಕೆಳಗೆ ಹಾಕಿಕೊಂಡು ಘರ್‌ ವಾಪ್ಸಿ, ಲವ್‌ ಜಿಹಾದ್‌ ಮತ್ತು ಗೋವುಗಳ ವಿಚಾರಗಳಿಗೆ ಮಹತ್ವ ನೀಡುತ್ತಿದ್ದೀರಿ. ನಾವು ಇಂತಹ ನಡೆಗೆ ವಿರುದ್ಧವಾಗಿದ್ದೇವೆ' ಎಂದು ಮೇವಾನಿ ಹೇಳಿದ್ದಾರೆ.

ಸಂಸತ್ತಿನ ಬೀದಿಯಲ್ಲೇ ಮೇವಾನಿ ಅವರನ್ನು ತಡೆದಿದ್ದೇವೆ. ಗಣರಾಜ್ಯೋತ್ಸವದ ಹಿನ್ನೆಲೆ ಸಂಸತ್ತಿಗೆ ಬಿಗಿಭದ್ರತೆ ನೀಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಶಹರಾನ್‌ಪುರ ಜಿಲ್ಲೆಯಲ್ಲಿ ಸಂಭವಿಸಿದ ಠಾಕೂರ್‌-ದಲಿತ ಸಂಘರ್ಷದ ಹಿಂದೆ ಚಂದ್ರಶೇಖರ್‌ ಆಜಾದ್‌ (30) ಕೈವಾಡ ಇರುವ ಆರೋಪದ ಹಿನ್ನೆಲೆ ಕಳೆದ ವರ್ಷ ಜೂನ್‌ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಬಂಧಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ