ಆ್ಯಪ್ನಗರ

ಜಮ್ಮು ಕಾಶ್ಮೀರ: ಉಗ್ರರ ಸದೆ ಬಡಿಯುತ್ತಿರುವ ಸೇನೆ

ಜಮ್ಮು ಕಾಶ್ಮೀರದ ಗಡಿ ಭಾಗದಿಂದ ನುಸುಳುಕೋರರ ಸಂಖ್ಯೆ ಹಾಗೂ ಉಗ್ರರ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಸೇನಾ ಕಾರ್ಯಾಚರಣೆ ಮುಖ್ಯವಾಗಿದೆ.

ಟೈಮ್ಸ್ ಆಫ್ ಇಂಡಿಯಾ 21 Aug 2017, 2:18 pm
ಹೊಸದಿಲ್ಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಕಳೆದ ಒಂದು ವರ್ಷಕ್ಕೆ ಹೋಲಿಸಿದರೆ ಉಗ್ರರ ಸಂಖ್ಯೆ ಕಡಿಮೆಯಾಗಿದೆ.
Vijaya Karnataka Web jk more terrorists die than are recruited
ಜಮ್ಮು ಕಾಶ್ಮೀರ: ಉಗ್ರರ ಸದೆ ಬಡಿಯುತ್ತಿರುವ ಸೇನೆ


ಇದಕ್ಕೆ ಮುಖ್ಯ ಕಾರಣ ಗುಪ್ತಚರ ಇಲಾಖೆ, ಸೇನೆ ಹಾಗೂ ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆ.

ಕಳೆದ ವರ್ಷ ಜಮ್ಮು ಕಾಶ್ಮೀರದ ಗಡಿ ಭಾಗದಿಂದ 130ಕ್ಕೂ ಹೆಚ್ಚು ಉಗ್ರರು ನುಸುಳಿದ್ದರು. ಈ ಪ್ರಮಾಣ ಈ ವರ್ಷ ಹೆಚ್ಚಾಗಿದೆ. ಈ ವರ್ಷ ಜುಲೈ ಅಂತ್ಯದ ವೇಳೆಗೇ 70 ನುಸುಳುಕೋರರು ನುಗ್ಗಿದ್ದಾರೆ. ಅವರು ಭಾರತೀಯ ಯೋಧರ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ.

ಇನ್ನು ಈ ವರ್ಷ ಸೇನಾ ಕಾರ್ಯಾಚರಣೆಯಲ್ಲಿ ಮೃತಪಟ್ಟವರ ಸಂಖ್ಯೆ 150ರ ಗಡಿ ದಾಟಿದೆ. ಈ ಪೈಕಿ 74 ವಿದೇಶಿ ಉಗ್ರರು, 58 ಸ್ಥಳೀಯ ಉಗ್ರರು ಇದ್ದಾರೆ.
ಬಹು ಮುಖ್ಯ ವಿಚಾರ ಎಂದರೆ ಈ ಬಾರಿ ಉಗ್ರ ಸಂಘಟನೆಯ ಬಹುತೇಕ ನಾಯಕರೇ ಮೃತಪಟ್ಟಿದ್ದಾರೆ.

ಹಿಜ್ಬುಲ್‌ ಮುಜಾಹಿದ್ದೀನ್‌, ಅಲ್‌ ಬದರ್‌, ಲಷ್ಕರೆ ತಯ್ಬಾ ಸ್ಥಳೀಯ ನಾಯಕರೆಲ್ಲರೂ ಹತರಾಗಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರದ ಸಮನ್ವಯದಿಂದಾಗಿ ಕೆಲವು ರಹಸ್ಯ ಕಾರ್ಯಾಚರಣೆಗಳು ನಡೆಯುತ್ತಿವೆ. ಇದು ಉಗ್ರ ಚಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದೆ.

ಇದೇ ರೀತಿ ಕಾರ್ಯಾಚರಣೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಹೆಸರು ಹೇಳಲಿಚ್ಛಿಸದ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

In J&K, more terrorists die than are recruited

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ