ಆ್ಯಪ್ನಗರ

ಎಂಜೆ ಅಕ್ಬರ್‌ ವಿರುದ್ಧ ಮಿ ಟೂ ಆರೋಪಿಸಿದ್ದ ಪತ್ರಕರ್ತೆ ಘಟನೆ ವಿವರಿಸಿದಾಗ ಮುಖ ನೋಡಿ ನಕ್ಕ ವಕೀಲರ ತಂಡ!

ಮಾಜಿ ಕೇಂದ್ರ ಸಚಿವ ಎಂಜೆ ಅಕ್ಬರ್‌ ವಿರುದ್ಧ ಮಿ ಟೂ ಆರೋಪ ಹೊರಿಸಿದ್ದ ಪತ್ರಕರ್ತೆ ತನ್ನ ಮೇಲಾದ ಲೈಂಗಿಕ ಶೋಷಣೆಯ ಘಟನೆಯನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದ ಸಂದರ್ಭ ಅಕ್ಬರ್‌ ಪರ ವಕೀಲರ ತಂಡ ಮುಖ ನೋಡಿ ನಕ್ಕ ಸಂಗತಿ ಬೆಳಕಿಗೆ ಬಂದಿದೆ.

Vijaya Karnataka Web 12 Dec 2019, 10:45 am
ಹೊಸದಿಲ್ಲಿ: ಮಿ ಟೂ ಬಿರುಗಾಳಿಯಲ್ಲಿ ಕೇಂದ್ರ ಸಚಿವ ಸ್ಥಾನ ಕಳೆದುಕೊಂಡ ಎಂ.ಜೆ.ಅಕ್ಬರ್‌ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದ ಪತ್ರಕರ್ತೆ ಘಜಲಾ ವಹಾಬ್‌ ದಿಲ್ಲಿ ನ್ಯಾಯಾಲಯದಲ್ಲಿ ಘಟನೆಯನ್ನು ಪ್ರಸ್ತಾಪಿಸಿ ಹೇಳಿಕೆ ನೀಡುತ್ತಿದ್ದ ವೇಳೆ ಅಕ್ಬರ್‌ ಅವರ ವಕೀಲರ ತಂಡ ಪರಸ್ಪರ ಮುಖ ನೋಡಿ ನಕ್ಕ ಸಂಗತಿ ಬೆಳಕಿಗೆ ಬಂದಿದೆ.
Vijaya Karnataka Web MJ Akbar


‘‘ಅದು 1997ರ ಆಗಸ್ಟ್‌-ಸೆಪ್ಟೆಂಬರ್‌ ಸಮಯ. ನಾನು ಆಗ ಅಕ್ಬರ್‌ ಸಂಪಾದಕರಾಗಿದ್ದ ಆಂಗ್ಲ ದಿನ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ಒಂದು ದಿನ ಅಕ್ಬರ್‌ ತಮ್ಮ ರೂಮಿಗೆ ನನ್ನನ್ನು ಕರೆಸಿಕೊಂಡರು. ಒಳಹೋದ ತಕ್ಷಣ ಬಾಗಿಲು ಮುಚ್ಚಲು ಹೇಳಿದರು. ಶೆಲ್ಫಿನ ಮೇಲ್ಭಾಗದಲ್ಲಿ ಇರಿಸಲಾಗಿದ್ದ ಡಿಕ್ಷನರಿ ತೆಗೆದುಕೊಂಡು ಪದವೊಂದರ ಅರ್ಥ ಹುಡುಕಲು ಹೇಳಿದರು. ನಾನು ಸ್ಟೂಲು ಹತ್ತಿ ಡಿಕ್ಷನರಿ ತೆಗೆದುಕೊಳ್ಳಲು ಹೋದಾಗ ಹಿಮ್ಮುಖವಾಗಿ ಬಂದರು. ಗಾಬರಿಗೆ ಆಯತಪ್ಪಿ ಬೀಳುವ ವೇಳೆ ಅವರು ನನ್ನನ್ನು ತಬ್ಬಿಕೊಂಡು ಎದೆಭಾಗವನ್ನು ಸ್ಪರ್ಶಿಸಿದರು. ಬಳಿಕ ತಬ್ಬಿಕೊಂಡು ಬಲವಂತದಿಂದ ಚುಂಬಿಸಿದರು. ಹೊರಹೋಗಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಕ್ಬರ್‌ ಹಿಡಿತ ಸಡಿಲಗೊಳಿಸುತ್ತಿದ್ದಂತೆಯೇ ಅಲ್ಲಿಂದ ಹೊರಬಂದು ನೇರವಾಗಿ ಟಾಯ್ಲೆಟ್‌ ರೂಮಿಗೆ ಹೋಗಿ ಅತ್ತುಬಿಟ್ಟೆ,’’ ಎಂದು ಕೋರ್ಟ್‌ನಲ್ಲಿ ಹೇಳಿದರು. ಈ ವೇಳೆ ಅಕ್ಬರ್‌ ಅವರ ವಕೀಲೆ ಗೀತಾ ಲೂಥ್ರಾ ಮತ್ತವರ ತಂಡ ನಗುತ್ತಿದ್ದರು. ಅಕ್ಬರ್‌ ವಿರುದದ್ಧ ಮಿ ಟೂ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿ ಪರ ಘಜಲಾ ವಹಾಬ್‌ ಸಹ ಬೆಂಬಲ ಸೂಚಿಸಿದ್ದರು.

ಒಪ್ಪಿತ ಸಂಬಂಧವಲ್ಲ, ದಬ್ಬಾಳಿಕೆ: ಅಕ್ಬರ್‌ಗೆ ಪಲ್ಲವಿ ತಿರುಗೇಟು

ಎಂಜೆ ಅಕ್ಬರ್‌ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು: ಮಾಜಿ ಪತ್ರಕರ್ತೆ ಪಲ್ಲವಿ; ನಮ್ಮದು ಒಮ್ಮತದ ಸಂಬಂಧ: ಅಕ್ಬರ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ