ಆ್ಯಪ್ನಗರ

ಯೋಗಿ ಸರಕಾರದಿಂದ ಪತ್ರಕರ್ತರಿಗೆ ಅಪಾಯ: ಪ್ರಿಯಾಂಕಾ ಗಾಂಧಿ

ಇತ್ತೀಚಿನ ಕೆಲ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಪದೇ ಪದೇ ಪತ್ರಕರ್ತರ ಬಂಧನವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಯೋಗಿ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.

Agencies 12 Sep 2019, 2:54 pm
ಹೊಸದಿಲ್ಲಿ: ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಯೋಗಿ ಆದಿತ್ಯನಾಥ್ ಸರಕಾರದಿಂದ ಪತ್ರಕರ್ತರಿಗೆ ಅಪಾಯ, ಬೆದರಿಕೆ ಇದೆ ಎಂದು ಹೇಳಿದ್ದಾರೆ.
Vijaya Karnataka Web Priyanka Gandhi


ಯೋಗಿ ಸರಕಾರವನ್ನು ಪ್ರಶ್ನಿಸುವ ಪತ್ರಕರ್ತರ ಮೇಲೆ ನಿರಂತರ ದಾಳಿಗಳಾಗುತ್ತಿದೆ ಎಂದು ಟ್ವೀಟ್ ಮಾಡಿರುವ ಅವರು, ಇತ್ತೀಚಿಗೆ ಮಾಧ್ಯಮದಲ್ಲಿ ಪ್ರಕಟವಾದ ಪತ್ರಕರ್ತರ ಬಂಧನಕ್ಕೆ ಸಂಬಂಧಿಸಿದ ವರದಿಯನ್ನು ಸಹ ಪೋಸ್ಟ್ ಮಾಡಿದ್ದಾರೆ.

ಕಣ್ಣಿಗೆ ಪಟ್ಟಿ ಕಟ್ಟಿ ಕಂಡು ಹೊಗಳುವುದಷ್ಟೇ ಪತ್ರಕರ್ತರ ಕೆಲಸವಲ್ಲ. ಸಾರ್ವಜನಿಕ ಸಮಸ್ಯೆಗಳಿಗ ಸಂಬಂಧಿಸಿದ ಸುದ್ದಿಯನ್ನು ರಚಿಸಿ, ಸರಕಾರದಿಂದ ಉತ್ತರ ಪಡೆಯುವುದು ಅವರ ಕೆಲಸ ಎಂದವರು ಹೇಳಿದ್ದಾರೆ.

"ಆದರೆ ಯುಪಿಯ ಬಿಜೆಪಿ ಸರ್ಕಾರ ಇಂತಹ ಪತ್ರಕರ್ತರ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದೆ. ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಬಿಜೆಪಿಗೆ ಭಯವಿದೆಯೇ?" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಶ್ನಿಸಿದ್ದಾರೆ.

ಇತ್ತೀಚಿಗಷ್ಟೇ ಮಕ್ಕಳು ನೆಲ ಒರೆಸುತ್ತಿದ್ದ ಫೋಟೋ ತೆಗೆದ ಪತ್ರಕರ್ತ ಸಂತೋಷ್ ಜೈಸ್ವಾಲ್ ಅವರನ್ನು ಬಂಧಿಸಲಾಗಿತ್ತು. ಕೆಲ ದಿನಗಳ ಹಿಂದೆ ಶಾಲಾ ಮಕ್ಕಳಿಗೆ ಬರೀ ರೊಟ್ಟಿ ಮತ್ತು ಉಪ್ಪು ನೀಡುತ್ತಿದ್ದನ್ನು ವೀಡಿಯೋ ಮಾಡಿದ ಪತ್ರಕರ್ತನನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದರು. ಹ್ಯಾಂಡ್ ಪಂಪ್‌ನಿಂದ ನೀರು ತೆಗೆದುಕೊಳ್ಳಲು ದಲಿತ ಕುಟುಂಬಕ್ಕೆ ನಿರ್ಬಂಧ ವಿಧಿಸಿದ್ದನ್ನು ವರದಿ ಮಾಡಿದಕ್ಕಾಗಿ ಐವರು ಪತ್ರಕರ್ತರ ವಿರುದ್ಧ ಕಳೆದ ವಾರ ಕೇಸ್ ದಾಖಲಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ