ಆ್ಯಪ್ನಗರ

ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಜೆ.ಪಿ.ನಡ್ಡಾ

ಜೆ.ಪಿ. ನಡ್ಡಾ ನಿರೀಕ್ಷೆಯಂತೆ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಸೇರಿದಂತೆ ಪಕ್ಷದ ಹಲವು ನಾಯಕರು ನಡ್ಡಾ ಹೆಸರು ಪ್ರಸ್ತಾಪಿಸಿದ್ದು, ಪ್ರಧಾನಿ ಮೋದಿ ಸನ್ಮಾನಿಸಲಿದ್ದಾರೆ.

TIMESOFINDIA.COM 20 Jan 2020, 3:24 pm
ಹೊಸದಿಲ್ಲಿ: ಜೆ.ಪಿ. ನಡ್ಡಾ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಾಮನಿರ್ದೇಶನ ಪ್ರಕ್ರಿಯೆ ಮುಕ್ತಾಯದ ನಂತರ ಅವರು ಉನ್ನತ ಹುದ್ದೆಗೆ ಏಕೈಕ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದರು.
Vijaya Karnataka Web jp nadda


ಕಳೆದ ಜೂನ್‌ನಲ್ಲಿ ಬಿಜೆಪಿಯ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ನಡ್ಡಾ, ಐದೂವರೆ ವರ್ಷಗಳ ಕಾಲ ಚುಕ್ಕಾಣಿ ಹಿಡಿದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿಕ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಮಿತ್‌ ಶಾ ಅವಧಿಯಲ್ಲಿ 2019ರ ಲೋಕಸಭೆಯಲ್ಲಿ ಪಕ್ಷವು ಭಾರಿ ಬಹುಮತ ಗಳಿಸಿದ್ದು, ದೇಶಾದ್ಯಂತ ಪಕ್ಷದ ಜನಪ್ರಿಯತೆ, ಮತದಾರರು ವಿಸ್ತರಣೆಯಾಗಿದ್ದಾರೆ.

ಕೇಂದ್ರದ ಮಂತ್ರಿಗಳಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಸೇರಿದಂತೆ ಪಕ್ಷದ ಉನ್ನತ ನಾಯಕರು ಜೆ.ಪಿ. ನಡ್ಡಾ ಹೆಸರನ್ನು ಪ್ರಸ್ತಾಪಿಸಿದರು. ಇನ್ನು, ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಕಚೇರಿಯಲ್ಲಿ ನಡ್ಡಾ ಅವರನ್ನು ಸನ್ಮಾನಿಸಲಿದ್ದು, ಬಳಿಕ ಉಭಯ ನಾಯಕರು ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಫೆಬ್ರವರಿಯಲ್ಲಿ ರಾಷ್ಟ್ರೀಯ ಬಿಜೆಪಿಗೆ ನೂತನ ಸಾರಥಿ?

ನಡ್ಡಾ ಯಾವಾಗಲೂ ಸ್ಪೂರ್ತಿದಾಯಕ ಕಾರ್ಯಕರ್ತರಾಗಿದ್ದರು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು. ಇದೇ ರೀತಿ ಬಿಜೆಪಿಯ ಹಲವು ನಾಯಕರು ಜೆ.ಪಿ. ನಡ್ಡಾ ಬೆಳೆದು ಬಂದ ಹಾದಿ ಹಾಗೂ ಅವರ ಬೆಳವಣಿಗೆಯನ್ನು ಶ್ಲಾಘಿಸಿದರು.

ಬಿಜೆಪಿಗೆ ವರ್ಷಾಂತ್ಯದೊಳಗೆ ನೂತನ ಅಧ್ಯಕ್ಷರ ನೇಮಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ