ಆ್ಯಪ್ನಗರ

ಕಾಂಗ್ರೆಸ್‌ ಪತನಕ್ಕೆ ಮೂರು ಕಾರಣ ಬಿಚ್ಚಿಟ್ಟ ಜ್ಯೋತಿರಾದಿತ್ಯ ಸಿಂಧಿಯಾ

ಬಿಜೆಪಿ ಸೇರ್ಪಡೆಗೊಂಡಿರುವ ಜ್ಯೋತಿರಾದಿತ್ಯ ಸಿಂಧಿಯಾ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಹಾಡಿ ಹೊಗಳಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿರುವ ಸಿಂಧಿಯಾ ಏನೆಲ್ಲ ಹೇಳಿದರು ಈ ಬಗ್ಗೆ ವಿವರ ಇಲ್ಲಿದೆ.

Vijaya Karnataka Web 12 Mar 2020, 7:11 am
ಹೊಸದಿಲ್ಲಿ: ಕಾಂಗ್ರೆಸ್‌ಗೆ ಜತೆಗಿನ 18 ವರ್ಷಗಳ ಬಂಧ ಕಳಚಿಕೊಂಡು ಬುಧವಾರ ಬಿಜೆಪಿ ಸೇರ್ಪಡೆಗೊಂಡಿರುವ ಜ್ಯೋತಿರಾದಿತ್ಯ ಸಿಂಧಿಯಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಹೊಗಳಿ ಕೊಂಡಾಡಿದ್ದಾರೆ.
Vijaya Karnataka Web Jyotiraditya Scindia


ದಿಲ್ಲಿಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‌ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು. ತಾವು ಕಾಂಗ್ರೆಸ್‌ ತೊರೆದದ್ದು ಏಕೆ ಎಂಬುದಕ್ಕೆ ಸಮರ್ಥನೆ ನೀಡಿದರು. ''ಬಿಜೆಪಿ ಕುಟುಂಬದಲ್ಲಿ ಸ್ಥಾನ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಮತ್ತು ಜೆಪಿ ನಡ್ಡಾ ಅವರಿಗೆ ಧನ್ಯವಾದಗಳು. ನನ್ನ ಜೀವನದಲ್ಲಿಎರಡು ಮಹತ್ವದ ದಿನಗಳಿವೆ. ಒಂದು 2011 ಸೆ. 20, ಅಂದು ನಾನು ಅಪ್ಪನನ್ನು ಕಳೆದುಕೊಂಡ ದಿನ. ಅದು ನನ್ನ ಜೀವನವನ್ನು ಬದಲಿಸಿದ ದಿನವಾಗಿತ್ತು. ಎರಡನೇ ದಿನವೆಂದರೆ 2020ರ ಮಾ.10.ಅಂದು ಅಪ್ಪನ 75ನೇ ಹುಟ್ಟುಹಬ್ಬ. ಅದೇ ದಿನ ನಾನು ಹೊಸ ನಿರ್ಧಾರವೊಂದನ್ನು ಕೈಗೊಂಡೆ. ನಾನು ಜನರ ಸೇವೆಯಲ್ಲಿ ನಂಬಿಕೆ ಇಟ್ಟವನು ಮತ್ತು ಅದನ್ನು ಸಾಧಿಸಲು ರಾಜಕೀಯವೇ ದಾರಿ ಎಂದು ನಂಬಿದವನು.

ಬಿಜೆಪಿ ಸೇರುವುದರೊಂದಿಗೆ ದೇಶಸೇವೆ ಸಲ್ಲಿಸಲೂ ಒಂದು ವೇದಿಕೆ ಸಿಕ್ಕಂತಾಗಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ಸಿಕ್ಕಂತಹ ಜನಾದೇಶ ಈ ಹಿಂದೆ ಯಾವ ಸರಕಾರಗಳಿಗೂ ಸಿಕ್ಕಿರಲಿಲ್ಲ. ಎರಡು ಬಾರಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಜನಾದೇಶವನ್ನು ಸಮರ್ಥವಾಗಿ ಬಳಸಿ­ಕೊಂಡು ಕೆಲಸ ಮಾಡುತ್ತಿರುವ ಮೋದಿ ಅವರ ಸಾಮರ್ಥ್ಯ, ಅವರು ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿಕೊಟ್ಟ ಗೌರವ, ಜನಪರ­ವಾದ ಅದ್ಭುತ ಯೋಜನೆಗಳನ್ನು ಜಾರಿಗೊಳಿಸಿದ ರೀತಿಯನ್ನು ನೋಡುತ್ತಿದ್ದರೆ, ಇಡೀ ದೇಶ ಪ್ರಧಾನಿ ನರೇಂದ್ರ ಮೋದಿಯವರ ಕೈಯಲ್ಲಿ ಸುರಕ್ಷಿತವಾಗಿ ಇದೆ ಎಂದು ನನಗೆ ಅನ್ನಿಸುತ್ತದೆ,'' ಎಂದು ಅವರು ಬಣ್ಣಿಸಿದರು.

ರಾಜೀನಾಮೆ ಅಂಗೀಕಾರವೋ, ಅನರ್ಹತೆಯೋ? ಮಧ್ಯ ಪ್ರದೇಶದಲ್ಲಿ 'ಕರ್ನಾಟಕ ಮಾದರಿ' ಭೀತಿ

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ: ಕಾಂಗ್ರೆಸ್‌ನಲ್ಲಿದ್ದ ನನ್ನ ಅಪ್ಪ ದೇಶ ಮತ್ತು ನಮ್ಮ ರಾಜ್ಯಕ್ಕಾಗಿ ದುಡಿದಿದ್ದರು. ಆದರೆ ಈಗಿನ ಪರಿಸ್ಥಿತಿ ಮೊದಲಿನಂತೆ ಇಲ್ಲ. ಅಲ್ಲಿನ ಪರಿಸ್ಥಿತಿಗಳು ತುಂಬ ಬದಲಾಗಿವೆ. ಈ ಬಗ್ಗೆ ನನಗೆ ಅಪಾರ ಬೇಸರವಿದೆ. ಕಾಂಗ್ರೆಸ್‌ ಪತನಕ್ಕೆ ಮುಖ್ಯವಾಗಿ ಮೂರು ಕಾರಣಗಳು ಇವೆ. ಒಂದು ಅದು ವಾಸ್ತವ ಏನಿದೆಯೋ ಅದನ್ನು ಒಪ್ಪಿಕೊಳ್ಳುತ್ತಿಲ್ಲ, ಹಳೆ ಸಿದ್ಧಾಂತಕ್ಕೆ ಅಂಟಿಕೊಂಡಿದೆ. ಹೊಸ ಸಿದ್ಧಾಂತ, ಹೊಸ ನಾಯಕತ್ವವನ್ನು ಗುರುತಿಸಲು ಸೋಲುತ್ತಿದೆ. ಮಧ್ಯಪ್ರದೇಶದಲ್ಲಿಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ 10 ದಿನಗಳಲ್ಲಿರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ 18 ತಿಂಗಳು ಕಳೆದರೂ ಆ ಕೆಲಸ ಆಗಲಿಲ್ಲ. ಇದನ್ನೆಲ್ಲನೋಡಿ ತೀವ್ರ ನೋವಾಗಿತ್ತು,'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ