ಆ್ಯಪ್ನಗರ

ಸಿಂಧಿಯಾ ಟ್ಟಿಟ್ಟರ್ ಪ್ರೊಫೈಲ್‌ನಿಂದ ‘ಬಿಜೆಪಿ’ಗೆ ಗೇಟ್‌ಪಾಸ್‌, ಪಕ್ಷ ಬದಲಾವಣೆಯ ಸೂಚನೆ?

ಇದೇ ಸಿಂಧಿಯಾ ಹಿಂದೊಮ್ಮೆ ಕಾಂಗ್ರೆಸ್‌ ಪದವನ್ನು ತಮ್ಮ ಟ್ಟಿಟ್ಟರ್‌ ಪರಿಚಯದಿಂದ ತೆಗೆದು ಹಾಕಿದ್ದರು. ಅದಾಗಿ ಸ್ವಲ್ಪ ದಿನಗಳಲ್ಲೇ ಅವರು ಬಿಜೆಪಿಗೆ ನೆಗೆದಿದ್ದರು.ಇದೀಗ ಬಿಜೆಪಿ ಪದವನ್ನು ತೆಗೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಂದೇನು ಎಂಬುದನ್ನು ಅವರೇ ಹೇಳಬೇಕು.

Times Now 6 Jun 2020, 4:31 pm

ಭೋಪಾಲ್‌: ಇತ್ತೀಚೆಗಷ್ಟೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಟ್ಟಿಟ್ಟರ್‌ ಖಾತೆಯ ಪ್ರೊಫೈಲ್‌ನಿಂದ ‘ಬಿಜೆಪಿ’ ಪದವನ್ನು ತೆಗೆದು ಹಾಕಿದ್ದಾರೆ ಎಂದು ವರದಿಯಾಗಿದೆ. ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಬಿಜೆಪಿ ಸರಕಾರದ ಬಗ್ಗೆ ಅವರು ಅಸಮಧಾನ ಹೊಂದಿದ್ದಾರೆ ಎಂಬ ಸುದ್ದಿಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.
Vijaya Karnataka Web Scindhia


ಕಾಂಗ್ರೆಸ್‌ ಜೊತೆಗಿನ ತಮ್ಮ ಸುದೀರ್ಘ 18 ವರ್ಷಗಳ ನಂಟು ತೊರೆದು ಜ್ಯೋತಿರಾದಿತ್ಯ ಸಿಂಧಿಯಾ ಮಾರ್ಚ್‌ 11ರಂದು ಬಿಜೆಪಿ ಸೇರಿದ್ದರು. ಅವರ ಜೊತೆ 22 ಶಾಸಕರು ಕಾಂಗ್ರೆಸ್‌ ತೊರೆದಿದ್ದರು. ಬೆನ್ನಿಗೆ ಕಮಲ್‌ನಾಥ್‌ ಸರಕಾರ ಪತನವಾಗಿತ್ತು.

ಇದೀಗ ಓಡಾಡುತ್ತಿರುವ ಸುದ್ದಿಗೆ ಪುಷ್ಠಿ ನೀಡುವಂತೆ 'ಸಾರ್ವಜನಿಕ ಸೇವಕ ಮತ್ತು ಕ್ರಿಕೆಟ್‌ ಉತ್ಸಾಹಿ' ಎಂದಷ್ಟೆ ತಮ್ಮ ಪರಿಷಯದಲ್ಲಿ ಸಿಂಧಿಯಾ ಬರೆದುಕೊಂಡಿದ್ದಾರೆ.

ಮಹಾರಾಜನ ತಾಳ್ಮೆಗೆ ಸಿಗದ ಬೆಲೆ, 18 ವರ್ಷಗಳ ಕಾಂಗ್ರೆಸ್‌ ಸಖ್ಯ ತೊರೆದ ಸಿಂಧಿಯಾ

ಆದರೆ 'ವಿಜಯ ಕರ್ನಾಟಕ' ಸೋದರ ಸಂಸ್ಥೆ 'ಟೈಮ್ಸ್‌ ನೌ'ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅವರು, "ಬಿಜೆಪಿ ಜೊತೆಗೆ ಆ ತರಹದ ಯಾವ ತಪ್ಪು ನಡೆದಿಲ್ಲ. ಟ್ಟಿಟ್ಟರ್‌ ಪ್ರೊಫೈಲ್‌ ಬದಲಾವಣೆ ಈ ರೀತಿಯ ಊಹಾಪೋಹಗಳೆಲ್ಲ ಶುದ್ಧ ಸುಳ್ಳು,” ಎಂದಿದ್ದಾರೆ. ಜೊತೆಗೆ ಒಂದು ಗಂಟೆ ಮೊದಲು "ದುಃಖದ ವಿಚಾರವೆಂದರೆ, ಸುಳ್ಳು ಸುದ್ದಿ ಸತ್ಯಕ್ಕಿಂತ ವೇಗವಾಗಿ ಚಲಿಸುತ್ತದೆ," ಎಂದು ಟ್ಟೀಟ್‌ ಮಾಡಿದ್ದಾರೆ.



ಟ್ಟಿಟ್ಟರ್‌ನಲ್ಲಿ ಬಿಜೆಪಿ ಪದವೇ ಇರಲಿಲ್ಲ?

ಇದರ ಜೊತೆಗೆ ಅವರ ಕೆಲವು ಅಭಿಮಾನಿಗಳು, 'ಸಿಂಧಿಯಾ ತಮ್ಮ ಟ್ಟಿಟ್ಟರ್‌ ಖಾತೆಯಲ್ಲಿ ಎಂದೂ ಬಿಜೆಪಿ ಪದವನ್ನು ಸೇರಿಸಿಯೇ ಇರಲಿಲ್ಲ' ಎಂಬುದಾಗಿಯೂ ಹೇಳುತ್ತಿದ್ದಾರೆ.

ಬಿಜೆಪಿ ಪದವನ್ನು ತೆಗೆದಿದ್ದಾರೆ ಎನ್ನುವುದು, 'ಆಧಾರರಹಿತ ಗಾಳಿ ಸುದ್ದಿ' ಎಂಬುದಾಗಿ ಬಿಜೆಪಿ ನಾಯಕ ಪ್ರಧುಮಾನ್‌ ಸಿಂಗ್‌ ತೋಮರ್‌ ಹೇಳಿದ್ದಾರೆ.

ಇದೇ ಸಿಂಧಿಯಾ ಹಿಂದೊಮ್ಮೆ ಕಾಂಗ್ರೆಸ್‌ ಪದವನ್ನು ತಮ್ಮ ಟ್ಟಿಟ್ಟರ್‌ ಪರಿಚಯದಿಂದ ತೆಗೆದು ಹಾಕಿದ್ದರು. ಅದಾಗಿ ಸ್ವಲ್ಪ ದಿನಗಳಲ್ಲೇ ಅವರು ಬಿಜೆಪಿಗೆ ನೆಗೆದಿದ್ದರು.

ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣ

“ಸಿಂಧಿಯಾ ಅವರಿಗೆ ಬಿಜೆಪಿಯಲ್ಲಿ ಉಸಿರುಗಟ್ಟಿದಂತಾಗುತ್ತಿದೆ. ಶೀಘ್ರದಲ್ಲೇ ಅವರು ಕಾಂಗ್ರೆಸ್‌ಗೆ ಮರಳಲಿದ್ದಾರೆ,” ಎಂಬುದಾಗಿ ಸಿಂಧಿಯಾ ಅವರ ಆಪ್ತರಾಗಿರುವ ಸತ್ಯೇಂದರ ಯಾದವ್‌ ಶುಕ್ರವಾರ ಹೇಳಿದ್ದರು. ಸಿಂಧಿಯಾ ಜೊತೆಗೆ ಬಿಜೆಪಿ ಸೇರಿದ್ದ ಅವರು ಇತ್ತೀಚೆಗೆ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದಾರೆ ಎಂಬುದು ಗಮನಾರ್ಹ.

ಇದರ ಜೊತೆಗೆ 2009ರಲ್ಲಿ ಬಿಜೆಪಿ ಸೇರಿದ್ದ ಬಾಲೇಂದು ಶುಕ್ಲಾ ಕೂಡ ಕಾಂಗ್ರೆಸ್‌ಗೆ ಮರಳಿದ್ದಾರೆ. ಇವರು ಸಿಂಧಿಯಾ ತಂದೆ ಮಾಧವರಾವ್‌ ಸಿಂಧಿಯಾ ಅವರ ಗೆಳೆಯರಾಗಿದ್ದರು. ಆದರೆ ಜ್ಯೋತಿರಾದಿತ್ಯ ಸಿಂಧಿಯಾ ಜೊತೆಗಿನ ಸಂಬಂಧ ಅಷ್ಟೇನೂ ಚೆನ್ನಾಗಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ