ಆ್ಯಪ್ನಗರ

ಪಕ್ಷದ ಆರಂಭಕ್ಕೆ ಅಭಿಮಾನಿಗಳು, ಜನರಿಂದ ಪಡೆದ ಹಣವನ್ನು ವಾಪಸ್‌ ನೀಡುವೆ: ಕಮಲ್‌ಹಾಸನ್‌

ಕಮಲ್‌ ಆರಂಭಿಸಲಿರುವ ಪಕ್ಷಕ್ಕಾಗಿ ಈಗಾಗಲೇ 30 ಕೋಟಿ ರೂ. ಸಂಗ್ರಹವಾಗಿದೆ

Vijaya Karnataka Web 16 Nov 2017, 7:03 pm
ಚೆನ್ನೈ: ಕಳೆದ ಕೆಲವು ತಿಂಗಳುಗಳಿಂದ ಸದಾ ಸುದ್ದಿಯಲ್ಲಿರುವ ಖ್ಯಾತ ನಟ ಕಮಲ್‌ಹಾಸನ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
Vijaya Karnataka Web kamal haasan says he will return money collected from fans public
ಪಕ್ಷದ ಆರಂಭಕ್ಕೆ ಅಭಿಮಾನಿಗಳು, ಜನರಿಂದ ಪಡೆದ ಹಣವನ್ನು ವಾಪಸ್‌ ನೀಡುವೆ: ಕಮಲ್‌ಹಾಸನ್‌


ರಾಜಕೀಯ ರಂಗಕ್ಕೆ ಧುಮುಕುವುದು ಖಚಿತ ಎಂದು ಹೇಳಿದ್ದ ಕಮಲ್‌, ರಾಜಕೀಯ ಪಕ್ಷ ಹುಟ್ಟು ಹಾಕುವುದಾಗಿಯೂ ಘೋಷಿಸಿದ್ದರು. ಈ ಪಕ್ಷಕ್ಕಾಗಿ ಅಭಿಮಾನಿಗಳು, ಕಾರ್ಯಕರ್ತರು ದೇಣಿಗೆ ನೀಡಬೇಕೆಂದು ಮನವಿ ಮಾಡಿದ್ದರು. ಅದರಂತೆ 30 ಕೋಟಿ ರೂ. ಸಂಗ್ರಹವಾಗಿತ್ತು.

ಈಗ ಹಣವನ್ನು ವಾಪಸ್‌ ನೀಡುವುದಾಗಿ ಕಮಲ್‌ಹಾಸನ್‌ ಹೇಳಿದ್ದಾರೆ.

ತಮಿಳು ನಿಯತಕಾಲಿಕವೊಂದರಲ್ಲಿ ಅಂಕಣ ಬರೆದಿರುವ ಕಮಲ್‌, ಈ ಕುರಿತು ವಿವರಣೆ ನೀಡಿದ್ದಾರೆ.

ಪಕ್ಷವನ್ನು ಅಧಿಕೃತವಾಗಿ ಆರಂಭಿಸದೇ ಕಾರ್ಯಕರ್ತರು, ಅಭಿಮಾನಿಗಳಿಂದ ದೇಣಿಗೆ ಪಡೆಯುವುದು ಕಾನೂನಿನ ಪ್ರಕಾರ ಉಲ್ಲಂಘನೆ ಎಂದು ಭಾವಿಸುತ್ತೇನೆ. ಈ ಹಿನ್ನೆಲೆಯಲ್ಲಿ ಹಣವನ್ನು ವಾಪಸ್‌ ನೀಡಲು ನಿರ್ಧರಿಸಿದ್ದೇನೆ ಎಂದು ಕಮಲ್‌ ವಿವರಿಸಿದ್ದಾರೆ.

ಆದರೆ ಯಾವುದೇ ಕಾರಣಕ್ಕೂ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ. ಪಕ್ಷವನ್ನು ಸಂಘಟಿಸುವ ಬಗ್ಗೆ ಗಮನ ಹರಿಸುತ್ತೇನೆ. ಈ ಪಕ್ಷ ಮುಂದಿನ ಪೀಳಿಗೆಗೂ ಮಾದರಿಯಾಗಬೇಕು ಎನ್ನುವುದು ನನ್ನ ಮುಖ್ಯ ಗುರಿ ಎಂದು ಕಮಲ್‌ ಹಾಸನ್‌ ತಮ್ಮ ಅಂಕಣದಲ್ಲಿ ಬರೆದುಕೊಂಡಿದ್ದಾರೆ.

Kamal Haasan says he will return money collected from fans, public

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ