ಆ್ಯಪ್ನಗರ

ಸಿಂಧಿಯಾ ಜತೆ ಭಿನ್ನಾಭಿಪ್ರಾಯ ಇಲ್ಲವೆಂದ ಮಧ್ಯ ಪ್ರದೇಶ ಸಿಎಂ ಕಮಲ್‌ನಾಥ್‌

​​"ರಾಜ್ಯ ಸರಕಾರ ಸಾಲಮನ್ನಾ ಮಾಡದಿದ್ದರೆ ಬೀದಿಗೆ ಇಳಿದು ಹೋರಾಡಬೇಕಾಗುತ್ತದೆ," ಎಂದು ಸಿಂಧಿಯಾ ಎಚ್ಚರಿಸಿದ್ದರು. "ಬೀದಿಗೆ ಇಳಿದು ಹೋರಾಡಲು ಸಿಂಧಿಯಾ ಸ್ವತಂತ್ರರು. ಹಾಗೆಯೇ ಮಾಡಿಕೊಳ್ಳಲಿ," ಎಂದು ಕಮಲ್‌ನಾಥ್‌ ಪ್ರತಿಕ್ರಿಯಿಸಿದ್ದರು. ಈಗ ಕಮಲ್‌ನಾಥ್‌ ತೇಪೆ ಹಾಕುವ ಪ್ರಯತ್ನ ಮಾಡಿದ್ದಾರೆ.

Agencies 18 Feb 2020, 8:38 pm

ಭೋಪಾಲ್‌: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಜ್ಯೋತಿರಾದಿತ್ಯ ಸಿಂಧಿಯಾ ಜತೆ ತಮಗೆ ಮನಸ್ತಾಪವಿಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಹೇಳಿದ್ದಾರೆ.
Vijaya Karnataka Web Kamal Nath


ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, "ನಮ್ಮ ಪಕ್ಷವನ್ನು ವಿಪರೀತವಾಗಿ ಟೀಕಿಸುವ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ ಕುರಿತಾಗಿಯೇ ನನಗೆ ಕೋಪವಿಲ್ಲ. ಇನ್ನು ನಮ್ಮದೇ ಪಕ್ಷದ ಸಿಂಧಿಯಾ ಜತೆ ಮುನಿಸಿಕೊಳ್ಳಲು ಸಾಧ್ಯವೇ?" ಎಂದು ಪ್ರಶ್ನಿಸಿದರು.

2018ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್‌ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಇಬ್ಬರ ನಡುವೆ ಮನಸ್ತಾಪವಿದೆ. ಅದು ಕಳೆದ ವಾರ ಬೀದಿ ಜಗಳದ ಹಂತ ತಲುಪಿತ್ತು. ರೈತರ ಸಾಲಮನ್ನಾ ವಿಚಾರವಾಗಿ ಸಿಂಧಿಯಾ ಮತ್ತು ಕಮಲ್‌ನಾಥ್‌ ನಡುವೆ ಬಹಿರಂಗ ಮಾತಿನ ಸಮರ ನಡೆದಿತ್ತು.

ರೈತರ ಸಾಲಮನ್ನಾಗೆ ಹಿಂದೇಟು: ಕಮಲ್‌ನಾಥ್‌-ಸಿಂಧಿಯಾ ‘ಬೀದಿ’ ಜಗಳ

"ರಾಜ್ಯ ಸರಕಾರ ಸಾಲಮನ್ನಾ ಮಾಡದಿದ್ದರೆ ಬೀದಿಗೆ ಇಳಿದು ಹೋರಾಡಬೇಕಾಗುತ್ತದೆ," ಎಂದು ಸಿಂಧಿಯಾ ಎಚ್ಚರಿಸಿದ್ದರು. "ಬೀದಿಗೆ ಇಳಿದು ಹೋರಾಡಲು ಸಿಂಧಿಯಾ ಸ್ವತಂತ್ರರು. ಹಾಗೆಯೇ ಮಾಡಿಕೊಳ್ಳಲಿ," ಎಂದು ಕಮಲ್‌ನಾಥ್‌ ಪ್ರತಿಕ್ರಿಯಿಸಿದ್ದರು. ಈಗ ಕಮಲ್‌ನಾಥ್‌ ತೇಪೆ ಹಾಕುವ ಪ್ರಯತ್ನ ಮಾಡಿದ್ದಾರೆ.

ಮುಂದಿನ ಲೇಖನ