ಆ್ಯಪ್ನಗರ

ರಾಹುಲ್‌ ಟೀಕೆ ಬಳಿಕವೂ 'ಐಟಂ' ಹೇಳಿಕೆಗೆ ಕ್ಷಮೆ ಕೇಳಲು ಕಮಲ್‌ನಾಥ್‌ ನಕಾರ..!

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕೆ ಬಳಿಕವೂ ಮಧ್ಯಪ್ರದೇಶದ ಕ್ಯಾಬಿನೆಟ್‌ ಸಚಿವೆ ಇಮಾರ್ತಿ ದೇವಿ ಅವರನ್ನು ಐಟಂ ಎಂದು ಹೇಳಿರುವುದಕ್ಕೆ ಕ್ಷಮೆಯಾಚಿಸಲು ಮಾಜಿ ಸಿಎಂ ಕಮಲ್‌ನಾಥ್‌ ನಿರಾಕರಿಸಿದ್ದಾರೆ.

Agencies 20 Oct 2020, 5:11 pm
ಭೋಪಾಲ್‌: ಮಧ್ಯಪ್ರದೇಶದ ಕ್ಯಾಬಿನೆಟ್‌ ಸಚಿವೆ ಇಮಾರ್ತಿ ದೇವಿ ಅವರನ್ನು ಐಟಂ ಎಂದು ಹೇಳಿರುವುದಕ್ಕೆ ಕ್ಷಮೆಯಾಚಿಸಲು ಮಾಜಿ ಸಿಎಂ ಕಮಲ್‌ನಾಥ್‌ ನಿರಾಕರಿಸಿದ್ದಾರೆ. ಈಗಾಗಲೇ ನಾನು ಯಾವ ಸಂದರ್ಭದಲ್ಲಿ ಆ ಪದವನ್ನು ಬಳಸಿದ್ದೇನೆ ಎಂಬುದನ್ನು ಸ್ಪಷ್ಟಪಡಿಸಿದ್ದೇನೆ. ಹಾಗಾಗೀ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
Vijaya Karnataka Web kamal nath refuses to apologise even after rahul gandhi calls his remarks inappropriate
ರಾಹುಲ್‌ ಟೀಕೆ ಬಳಿಕವೂ 'ಐಟಂ' ಹೇಳಿಕೆಗೆ ಕ್ಷಮೆ ಕೇಳಲು ಕಮಲ್‌ನಾಥ್‌ ನಕಾರ..!


ಕಮಲ್‌ನಾಥ್‌ ಕ್ಷಮೆ ಕೇಳುವುದನ್ನು ನಿರಾಕರಿಸುವ ಮುನ್ನ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಧ್ಯಪ್ರದೇಶ ಮಾಜಿ ಸಿಎಂ ಹೇಳಿಕೆಯನ್ನು ದುರದೃಷ್ಟಕರ ಎಂದು ಖಂಡಿಸಿದ್ದರು. ಆ ಹೇಳಿಕೆಗೆ ಪ್ರತಿಕ್ರಿಯಿಸಿದ ಕಮಲ್‌ನಾಥ್‌ ಅದು ರಾಹುಲ್ ಗಾಂಧಿ ಅವರ ಅಭಿಪ್ರಾಯ. ನಾನು ಆ ಹೇಳಿಕೆ ನೀಡಿದ ಸಂದರ್ಭವನ್ನು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದ್ದಾರೆ.

ಯಾರನ್ನೂ ಅವಮಾನಿಸುವ ಉದ್ದೇಶವಿಲ್ಲದಿದ್ದಾಗ ನಾನು ಯಾಕೆ ಕ್ಷಮೆಯಾಚಿಸಬೇಕು? ಯಾರಾದರೂ ಅವಮಾನಕ್ಕೊಳಗಾಗಿದ್ದರೆ, ನಾನು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದೇನೆ ಎಂದು ಮಾಜಿ ಸಿಎಂ ಕಮಲ್‌ನಾಥ್ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ. ಉಪಚುನಾವಣೆಯಲ್ಲಿ ಸೋಲಿನ ಭೀಟತಿ ಎದುರಿಸುತ್ತಿರುವ ಬಿಜೆಪಿ ಜನರ ಗಮನ ಬೇರೆಡೆ ಸೆಳೆಯಲು ಈ ತಂತ್ರ ಹೂಡಿದೆ ಎಂದು ಆರೋಪಿಸಿದರು.

ಕಮಲ್‌ನಾಥ್‌ 'ಐಟಂ' ಹೇಳಿಕೆ ದುರದೃಷ್ಟಕರ..! ರಾಹುಲ್‌ ಗಾಂಧಿ ತೀವ್ರ ಅಸಮಾಧಾನ

ಇನ್ನು, ಕೇರಳದಲ್ಲಿ ಮಂಗಳವಾರ ಮಾತನಾಡಿದ್ದ ರಾಹುಲ್‌ ಗಾಂದಿ, ಕಮಲ್‌ನಾಥ್‌ ನನ್ನ ಪಕ್ಷದವರಾಗಿದ್ದರೂ, ಒಬ್ಬ ಮಹಿಳೆಯ ಬಗ್ಗೆ ಅವರು ಬಳಸಿರುವ ಪದ ನನಗೆ ಇಷ್ಟವಾಗಿಲ್ಲ. ಅವರು ಯಾರೇ ಆಗಿರಲ್ಲಿ ಅಂತಹ ಹೇಳಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸುವುದಿಲ್ಲ. ಕಮಲ್‌ನಾಥ್‌ ಹೇಳಿಕೆ ದುರದೃಷ್ಟಕರ ಎಂದಿದ್ದರು.

ತಮ್ಮ ಮಗಳನ್ನು ಐಟಂ ಎಂದರೆ ಸೋನಿಯಾ ಗಾಂಧಿ ಸುಮ್ಮನಿರುತ್ತಾರಾ..?: ಇ‌ಮಾರ್ತಿ ದೇವಿ ಆಕ್ರೋಶ

ಗ್ವಾಲಿಯರ್‌ನ ದಾಬ್ರಾದಲ್ಲಿ ಭಾನುವಾರ ನಡೆದ ಪಕ್ಷದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಕಮಲ್‌ನಾಥ್‌, ಬಿಜೆಪಿ ಸಚಿವೆ ಇಮಾರ್ತಿ ದೇವಿ ಅವರ ಹೆಸರನ್ನು ಉಲ್ಲೇಖಿಸಲದೇ ಕಾಂಗ್ರೆಸ್ ಅಭ್ಯರ್ಥಿ ತಮ್ಮ ಎದುರಾಳಿಗಳಂತೆ "ಐಟಂ" ಅಲ್ಲ, "ಸರಳ ವ್ಯಕ್ತಿ" ಎಂದು ಹೇಳಿ, ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಕಮಲ್‌ನಾಥ್‌ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಕ್ಷದಿಂದ ಉಚ್ಛಾಟಿಸುವಂತೆ ಸೋನಿಯಾ ಗಾಂಧಿ ಅವರಿಗೆ ಆಗ್ರಹಿಸಿದೆ.

ಬಿಜೆಪಿ ಸಚಿವೆ 'ಐಟಂ' ಎಂಬ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಮಾಜಿ ಸಿಎಂ ಕಮಲ್‌ ನಾಥ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ