ಆ್ಯಪ್ನಗರ

ಛೇ ಛೇ..ಅವ್ರೆಲ್ಲೂ ಹೋಗಿಲ್ಲ, ಬಹುಮತ ಸಾಬೀತು ಪಕ್ಕಾ: ತಿಳಿಯದಾಗಿದೆ ಕಮಲ್‌ನಾಥ್ ಲೆಕ್ಕಾ!

ಮ್ಮ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದರೂ ಅತ್ಯಂತ ಲವಲವಿಕೆಯಿಂದ ಇರುವ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್, ಬಹುಮತ ಸಾಬೀತು ಮಾಡಿಯೇ ಸಿದ್ಧ ಎಂದು ಹೇಳಿದ್ದಾರೆ. ಆಶ್ಚರ್ಯವೆಂದರೆ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪಕ್ಷಾಂತರವನ್ನೇ ಕಮಲ್‌ನಾಥ್ ಅಲ್ಲಗಳೆದಿದ್ದಾರೆ.

Vijaya Karnataka Web 11 Mar 2020, 10:01 am
ಭೋಪಾಲ್: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ಎಐಸಿಸಿ ಮಾಜಿ ಪ್ರದಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ತುದಾಗಲ ಮೇಲೆ ನಿಂತಿದ್ದಾರೆ. ಇಂದು ಸಿಂಧಿಯಾ ಕಮಲ ಮುಡಿಯುವುದು ಬಹುತೇಕ ಖಚಿತವಾಗಿದೆ.
Vijaya Karnataka Web Kamal Nath
ತಮ್ಮ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದರೂ ಮಧ್ಯಪ್ರದೇಶ ಸಿಎಂ ಕಮಲ್‌ನಾಥ್ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಈ ಮಧ್ಯೆ ತಮ್ಮ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದರೂ ಅತ್ಯಂತ ಲವಲವಿಕೆಯಿಂದ ಇರುವ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್, ಬಹುಮತ ಸಾಬೀತು ಮಾಡಿಯೇ ಸಿದ್ಧ ಎಂದು ಹೇಳಿದ್ದಾರೆ.

ಆಶ್ಚರ್ಯವೆಂದರೆ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪಕ್ಷಾಂತರವನ್ನೇ ಅಲ್ಲಗಳೆದಿರುವ ಕಮಲ್‌ನಾಥ್, ಅವರು ಎಲ್ಲಿಯೂ ಹೋಗಿಲ್ಲ ಎಂದು ಹೇಳುವ ಮೂಲಕ ರಾಜಕೀಯ ಪಂಡಿತರನ್ನು ಅಚ್ಚರಿಗೆ ದೂಡಿದ್ದಾರೆ.

ಮಹಾರಾಜನ ತಾಳ್ಮೆಗೆ ಸಿಗದ ಬೆಲೆ, 18 ವರ್ಷಗಳ ಕಾಂಗ್ರೆಸ್‌ ಸಖ್ಯ ತೊರೆದ ಸಿಂಧಿಯಾ

ಸಿಂಧಿಯಾ ಓರ್ವ ಅಪ್ಪಟ ಕಾಂಗ್ರೆಸ್ಸಿಗ ಅವರು ಪಕ್ಷಕ್ಕೆ ದ್ರೋಹ ಮಾಡಿ ಎಲ್ಲಿಯೂ ಹೋಗುವುದಿಲ್ಲ. ನಮ್ಮ ಸರ್ಕಾರ ಅಲ್ಪಮತಕ್ಕೆ ಕುಸಿದಿರುವುದೆಲ್ಲಾ ಕೇವಲ ವದಂತಿಯಾಗಿದ್ದು, ವಿಧಾನಸಭ ಎಯಲ್ಲಿ ಬಹುಮತ ಸಾಬೀತುಪಡಿಸಿಯೇ ಸಿದ್ಧ ಎಂಧು ಕಮಲ್‌ನಾಥ್ ಹೇಳಿದ್ದಾರೆ.


ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನೂ ಒಳಗೊಂಡಂತೆ ಒಟ್ಟು 21 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಮಲ್‌ನಾಥ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಇಲ್ಲ ಬಹುಮತ ಸಾಬೀತುಪಡಿಸುವ ವಿಶ್ವಾಸವಿದೆ ಎಂದು ಅವರು ಉತ್ತರಿಸಿದರು.

ಅತೃಪ್ತಗೊಂಡಿರುವ ಎಲ್ಲಾ ಶಾಸಕರು ಪಕ್ಷಕ್ಕೆ ಮರಳಿ ಬರುವ ವಿಶ್ವಾಸವಿದ್ದು, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವುದಾಗಿ ಕಮಲ್‌ನಾಥ್ ವಿಶ್ವಾಸ ವ್ಯಕ್ತಪಡಿಸಿದರು.

'ಕೈ'ಗೆ ಜ್ಯೋತಿರಾದಿತ್ಯ ರಾಜೀನಾಮೆ, ರಾಜಮನೆತನದ ನಂಟು ಕಳೆದುಕೊಂಡ ಕಾಂಗ್ರೆಸ್‌

ಎಲ್ಲಾ ಶಾಸಕರು ಎಂದರೆ ಜ್ಯೋತಿರಾದಿತ್ಯ ಸಿಂಧಿಯಾ ಅವರೂ ಮರಳಿ ಬರುತ್ತಾರಾ ಎಂಬ ಪ್ರಶ್ನೆಗೆ ಹೌದು ಎಂದಷ್ಟೇ ಕಮಲ್‌ನಾಥ್ ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ