ಆ್ಯಪ್ನಗರ

ಮಸೀದಿ ಮಾರ್ಗವಾಗಿ ಸಾಗುತ್ತಿದ್ದ ಕನ್ವರ್ ಯಾತ್ರಾರ್ಥಿಗಳ ಮೇಲೆ ಕಲ್ಲು ತೂರಾಟ

ಕನ್ವರ್ ಯಾತ್ರೆಗೆ ತೆರಳುತ್ತಿದ್ದ ಭಕ್ತರ ಮೇಲೆಅನ್ಯ ಕೋಮಿನ ಗುಂಪೊಂದು ಕಲ್ಲು ತೂರಾಟ ನಡೆಸಿದೆ.

Vijaya Karnataka Web 30 Jul 2019, 11:16 am
ಪಾಟ್ನಾ: ಕನ್ವರ್ ಯಾತ್ರೆಗೆ ತೆರಳುತ್ತಿದ್ದ ಭಕ್ತರ ಮೇಲೆ (ಕನ್ವರಿಯಾ) ಅನ್ಯ ಕೋಮಿನ ಗುಂಪೊಂದು ಕಲ್ಲು ತೂರಾಟ ನಡೆಸಿರುವ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ.
Vijaya Karnataka Web yatra


'ಮುಜಾಫರ್‌ಪುರ ಜಿಲ್ಲೆಯ ಬಾರಾರೂಜ್ ಪ್ರದೇಶದ ಮಸೀದಿಯೊಂದರ ಮಾರ್ಗವಾಗಿ ಕನ್ವರ್ ಯಾತ್ರೆಗೆ ತೆರಳುತ್ತಿದ್ದೇವು. ಈ ವೇಳೆ ಸಮಾಜ ವಿರೋಧ ಶಕ್ತಿಗಳು ಏಕಾಏಕಿ ಕಲ್ಲು ತೂರಾಟ ನಡೆಸಿವೆ' ಎಂದು ಭಕ್ತರು ಹೇಳಿಕೊಂಡಿದ್ದಾರೆ.

ಕನ್ವರ್ ಯಾತ್ರೆಗೆ ತೆರಳುತ್ತಿದ್ದ ಭಕ್ತರ ಮೇಲೆ ಸಮಾಜ ಘಾತುಕ ಶಕ್ತಿಗಳು ಕಲ್ಲು ತೂರಾಟ ನಡೆಸಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಮುಜಾಫರ್‌ಪುರನ ಪಶ್ಚಿಮ ವಲಯದ ಉಪ ವಿಭಾಗೀಯ ಅಧಿಕಾರಿ ಅನಿಲ್ ಕುಮಾರ್ ದಾಸ್ ತಿಳಿಸಿದ್ದಾರೆ.

ಶಿವನ ದರ್ಶನಕ್ಕಾಗಿ ಕನ್ವರ್ ತೀರ್ಥಯಾತ್ರೆ ಕೈಗೊಳ್ಳುವ ಭಕ್ತರನ್ನು ಕನ್ವರಿಯಾಗಳು ಎಂದು ಕರೆಯುತ್ತಾರೆ.

ಕನ್ವರ್ ಯಾತ್ರೆ

ಪವಿತ್ರ ಶ್ರಾವಣ ಮಾಸದಲ್ಲಿ ಶಿವನಿಗೆ ಗಂಗಾ ನದಿಯ ನೀರಿನಿಂದ ಪೂಜೆ ಸಲ್ಲಿಸುವ ಮೂಲಕ ಕನ್ವರ್ ಯಾತ್ರೆ ನಡೆಸಲಾಗುತ್ತದೆ. ಕನ್ವರಿಗಳು ಅಥವಾ ಭೋಲೆ ಎಂದು ಕರೆಸಿಕೊಳ್ಳುವ ಶಿವನ ಆರಾಧಕರು ಪ್ರತಿವರ್ಷ ಕೈಗೊಳ್ಳುವ ಧಾರ್ಮಿಕ ಯಾತ್ರೆ ಇದಾಗಿದೆ. ಈ ಯಾತ್ರೆಯಲ್ಲಿ ಕನ್ವರಿಗಳು ಹರಿದ್ವಾರ, ಗೋಮುಖ, ಗಂಗೋತ್ರಿ ಮತ್ತು ಸುಲ್ತಾನ್‌ಗಂಜ್‌ನಲ್ಲಿ ಪವಿತ್ರ ಗಂಗೋದಕದಿಂದ ಶಿವನನ್ನು ಪೂಜಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ