ಆ್ಯಪ್ನಗರ

ಕರಾಚಿ-ಮುಂಬಯಿ ವಿಮಾನ ಸಂಚಾರ ಬಂದ್‌

ಕರಾಚಿ ಮತ್ತು ಮುಂಬಯಿ ನಡುವೆ ವಾರಕ್ಕೆ ಎರಡು ಬಾರಿ ಸಂಚರಿಸುತ್ತಿದ್ದ ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ಗೆ (ಪಿಐಎ) ಸೇರಿದ ವಿಮಾನದ ಹಾರಾಟ ಸೋಮವಾರದಿಂದ ರದ್ದಾಗಲಿದೆ.

ವಿಕ ಸುದ್ದಿಲೋಕ 8 May 2017, 9:59 am
ಲಾಹೋರ್‌: ಕರಾಚಿ ಮತ್ತು ಮುಂಬಯಿ ನಡುವೆ ವಾರಕ್ಕೆ ಎರಡು ಬಾರಿ ಸಂಚರಿಸುತ್ತಿದ್ದ ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ಗೆ (ಪಿಐಎ) ಸೇರಿದ ವಿಮಾನದ ಹಾರಾಟ ರದ್ದಾಗಲಿದೆ.
Vijaya Karnataka Web karachi mumbai flight suspend
ಕರಾಚಿ-ಮುಂಬಯಿ ವಿಮಾನ ಸಂಚಾರ ಬಂದ್‌


ಇಬ್ಬರು ಯೋಧರ ಶಿರಚ್ಛೇಧನದ ಬಳಿಕ ಎರಡು ದೇಶಗಳ ನಡುವಿನ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ವಿಮಾನ ಸಂಚಾರ ರದ್ದಾಗುತ್ತಿದೆ ಎಂಬ ಸುದ್ದಿ ಹರಡಿದೆಯಾದರೂ ವ್ಯಾವಹಾರಿಕ ನಷ್ಟವೇ ಸಂಚಾರ ಸ್ಥಗಿತಕ್ಕೆ ಕಾರಣ ಪಾಕ್‌ನ ವಿಮಾನಯಾನ ಸಂಸ್ಥೆ ಅಧಿಕೃತವಾಗಿ ಹೇಳಿದೆ.

ಕಳೆದ ಆರು ತಿಂಗಳಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಸಂಚಾರ ರದ್ದು ನಿರ್ಧಾರಕ್ಕೆ ಬರಲಾಗಿದೆ. ಸರಕಾರ ಸಬ್ಸಿಡಿ ಕೊಡದಿದ್ದರೆ ಸದ್ಯೋಭವಿಷ್ಯದಲ್ಲಿ ಸಂಚಾರ ಮತ್ತೆ ಆರಂಭವಾಗುವ ಸಾಧ್ಯತೆಗಳಿಲ್ಲ. ಲಾಹೋರ್‌ ಮತ್ತು ದಿಲ್ಲಿ ನಡುವಿನ ವಿಮಾನ ಹಾರಾಟ ಹಿಂದಿನಂತೆಯೇ ಮುಂದುವರಿಯಲಿದೆ.

ಭಾರಿ ನಷ್ಟ: 2013ರಲ್ಲಿ ನವಾಜ್‌ ಷರೀಫ್‌ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪಾಕ್‌ ಏರ್‌ಲೈನ್ಸ್‌ 10000 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನಿದ್ರೆ ಮಾಡಿದ್ದ ಪೈಲಟ್‌ ವಜಾ

ಇಸ್ಲಾಮಾಬಾದ್‌-ಲಂಡನ್‌ ವಿಮಾನದಲ್ಲಿ ಮಾರ್ಗ ಮಧ್ಯೆ ಸುಮಾರು 2 ಗಂಟೆ ಕಾಲ ನಿದ್ರೆ ಮಾಡುವ ಮೂಲಕ 305 ಪ್ರಯಾಣಿಕರನ್ನು ಪ್ರಾಣಾಪಾಯಕ್ಕೆ ಸಿಲುಕಿಸಿದ್ದ ಹಿರಿಯ ಪೈಲಟ್‌ ಆಮೀರ್‌ ಅಖ್ತರ್‌ ಹಂಶಿ ಅವರನ್ನು ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ ವಜಾ ಮಾಡಿದೆ. ಆಮೀರ್‌, ಟ್ರೈನಿ ಪೈಲಟ್‌ಗೆ ವಿಮಾನ ಚಾಲನೆ ಮಾಡಲು ಹೇಳಿ, ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಸುಮಾರು ಎರಡೂವರೆಗ ಗಂಟೆ ನಿದ್ರೆಗೆ ಜಾರಿದ್ದರು. ಈ ಸಂದರ್ಭದಲ್ಲಿ ಪ್ರಯಾಣಿಕರು ತೆಗೆದ ಫೊಟೊ ಸಾಮಾಜಿಕ ಜಾಲತಾನಳದಲಿ ವೈರಲ್‌ ಆಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ