ಆ್ಯಪ್ನಗರ

ಪುಲ್ವಾಮಾ ಉಗ್ರ ದಾಳಿ ಮೋದಿ-ಪಾಕ್‌ ನಡುವಿನ ಮ್ಯಾಚ್‌ ಫಿಕ್ಸಿಂಗ್‌ ಅಂತೆ: ಕಾಂಗ್ರೆಸ್‌ನ ಬಿಕೆ ಹರಿಪ್ರಸಾದ್‌ ಹೇಳಿಕೆ

ಅಖ್ಲಾಖ್ ಮನೆಯಲ್ಲಿ 2 ಕೆಜಿ ಬೀಫ್ ಪತ್ತೆ ಹಚ್ಚಬಲ್ಲರು, ಕೇರಳದ ಗೆಸ್ಟ್ ಹೌಸ್‌ನಲ್ಲಿಯೂ ಅವರು ದನದ ಮಾಂಸ ಪತ್ತೆ ಮಾಡಬಲ್ಲರು; ಪೂರಾ ಕಾ ಪೂರಾ ಇನ್‌ಫಾರ್ಮೇಷನ್‌ ಮಿಲೇಗಾ. ರಾಷ್ಟ್ರೀಯ ಹೆದ್ದಾರಿಯಲ್ಲಿ 350 ಕಿಲೋ ಆರ್‌ಡಿಎಕ್ಸ್ ಪತ್ತೆ ಮಾಡಲು ಸಾಧ್ಯವಾಗಲಿಲ್ಲವೇ?

Vijaya Karnataka Web 7 Mar 2019, 5:34 pm
ಹೊಸದಿಲ್ಲಿ: ಕಳೆದ ತಿಂಗಳ 14ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಮ್ಯಾಚ್‌ ಫಿಕ್ಸಿಂಗ್‌ ಮಾದರಿಯಲ್ಲಿ ಮಾಡಿರುವುದು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಬಿಕೆ ಹರಿಪ್ರಸಾದ್‌ ಮತ್ತೆ ತಮ್ಮ ನಾಲಗೆ ಹರಿಯಬಿಟ್ಟಿದ್ದಾರೆ.
Vijaya Karnataka Web ಬಿಕೆ ಹರಿಪ್ರಸಾದ್‌
ಬಿಕೆ ಹರಿಪ್ರಸಾದ್


ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್‌, ಪುಲ್ವಾಮಾ ದಾಳಿ ಮ್ಯಾಚ್‌ ಫಿಕ್ಸಿಂಗ್‌ ಎಂದು ಹೇಳಿದ್ದಾರೆ.

ಪುಲ್ವಾಮಾ ದಾಳಿ ಹಾಗೂ ಆ ನಂತರದ ಘಟನಾವಳಿಗಳನ್ನು ನೋಡಿದರೆ ಇದು ಮೋದಿ ಅವರು ಪಾಕ್‌ ಜತೆ ಸೇರಿ ನಡೆಸಿದ ಮ್ಯಾಚ್‌ ಫಿಕ್ಸಿಂಗ್ ಮಾದರಿಯಲ್ಲಿದೆ ಎಂದು ದೂರಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಕೈ ಜೋಡಿಸಿ ಇಂಥ ಉಗ್ರ ದಾಳಿ ನಡೆಸಿದ್ದಾರೆ ಎಂದು ಹರಿಪ್ರಸಾದ್‌ ಆರೋಪಿಸಿದ್ದಾರೆ.

ಪಾಕ್‌ ಜತೆ ಕೈ ಜೋಡಿಸಿದ ಪ್ರಧಾನಿ ಮೋದಿಯೇ ಈ ದಾಳಿಯನ್ನು ಮ್ಯಾಚ್‌ ಫಿಕ್ಸ್‌ ಮಾಡಿದ್ದಾರೆ ಎಂದು ಹರಿಪ್ರಸಾದ್‌ ತಿಳಿಸಿದ್ದಾರೆ.

ಇದು ಹುತಾತ್ಮ ಯೋಧರಿಗೆ ಮಾಡಿದ ಅವಮಾನ ಎಂದು ಹಲವಾರು ಮಂದಿ ಹರಿಪ್ರಸಾದ್‌ ವಿರುದ್ಧ ಹರಿಹಾಯ್ದಿದ್ದಾರೆ.

ಅವರು ಅಖ್ಲಾಖ್ ಮನೆಯಲ್ಲಿ 2 ಕೆಜಿ ಬೀಫ್ ಪತ್ತೆ ಹಚ್ಚಬಲ್ಲರು, ಕೇರಳದ ಗೆಸ್ಟ್ ಹೌಸ್‌ನಲ್ಲಿಯೂ ಅವರು ದನದ ಮಾಂಸ ಪತ್ತೆ ಮಾಡಬಲ್ಲರು; ಪೂರಾ ಕಾ ಪೂರಾ ಇನ್‌ಫಾರ್ಮೇಷನ್‌ ಮಿಲೇಗಾ. ರಾಷ್ಟ್ರೀಯ ಹೆದ್ದಾರಿಯಲ್ಲಿ 350 ಕಿಲೋ ಆರ್‌ಡಿಎಕ್ಸ್ ಪತ್ತೆ ಮಾಡಲು ಅವರಿಗೆ ಸಾಧ್ಯವಾಗಲಿಲ್ಲವೇ? ಎಂದು ಹರಿಪ್ರಸಾದ್‌ ಪ್ರಶ್ನಿಸಿದ್ದಾರೆ.

ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರು ತೆರಳುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ಆತ್ಮಾಹುತಿ ಬಾಂಬರ್‌ ಡಿಕ್ಕಿ ಹೊಡೆಸಿದ.

ಈ ಘಟನೆಯಲ್ಲಿ 42 ಯೋಧರು ಮೃತಪಟ್ಟಿದ್ದರು. ಇದರಲ್ಲಿ ಮಂಡ್ಯದ ಯೋಧ ಗುರು ಕೂಡ ಸೇರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ