ಆ್ಯಪ್ನಗರ

ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗೆ ರಾಜ್ಯ ಸರಕಾರ ಶಿಫಾರಸು

ನ್ಯಾ. ನಾಗಮೋಹನ್‌ದಾಸ್‌ ಸಮಿತಿ ವರದಿ ಸಂಪುಟ ಸಭೆ ಅಂಗೀಕಾರ

Vijaya Karnataka Web 19 Mar 2018, 9:45 pm
ಹೊಸದಿಲ್ಲಿ: ವಿಧಾನಸಭೆ ಚುನಾವಣೆ ಸಮೀಪಿಸಿರುವಂತೆಯೇ ಕರ್ನಾಟಕದ ಕಾಂಗ್ರೆಸ್‌ ಸರಕಾರ ಪ್ರತ್ಯೇಕ ಲಿಂಗಾಯತ ಧರ್ಮ ಘೋಷಣೆಗೆ ಕೇಂದ್ರಕ್ಕೆ ಶಿಫಾರಸು ಮಾಡಿದೆ.
Vijaya Karnataka Web ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗೆ ರಾಜ್ಯ ಸರಕಾರ ಶಿಫಾರಸು


Customize | Align | Delete
ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ಕಾನೂನು ಸಚಿವ ಟಿ.ಬಿ ಜಯಚಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣ ಲಿಂಗಾಯತ ಸಮುದಾಯವನ್ನು ಸ್ಥಾಪಿಸಿದರು. ವೇದಗಳು ಮತ್ತು ಜಾತಿ ಪದ್ಧತಿಯನ್ನು ಅನುಸರಿಸುವ ಹಿಂದೂ ವೀರಶೈವ ಸಮುದಾಯಕ್ಕಿಂತ ಇದು ಭಿನ್ನವಾಗಿದ್ದು, ಬಸವಣ್ಣ ವೇದ ಮತ್ತು ಜಾತಿ ವ್ಯವಸ್ಥೆಗೆ ವಿರುದ್ಧವಾಗಿದ್ದರು ಎಂದು ಸರಕಾರ ಶಿಫಾರಸಿನಲ್ಲಿ ತಿಳಿಸಿದೆ.

ಯಾರೋ ಬಹಳ ಸೊಗಸಾಗಿ ಹೇಳಿದರು. ಸಿದ್ದರಾಮಯ್ಯನವರು ೨೧ ನೆಯ ಶತಮಾನದ ರಾಬರ್ಟ್ ಕ್ಲೈವ್. ಯಾಕೆಂದರೆ ಕ್ಲೈವ್ ಮಾದರಿಯಲ್ಲೇ ಇವರೂ ಒಡೆದು ಆಳುವುದರಲ್ಲಿ ನಿಪುಣ. — Sureshkumar (@nimmasuresh) March 19, 2018 ಲಿಂಗಾಯತ ಸಮುದಾಯ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಆಗ್ರಹಿಸುತ್ತಿದ್ದು, ಪ್ರತ್ಯೇಕ ಧರ್ಮದ ಘೋಷಣೆ ಮಾಡಬೇಕು ಎಂದು ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ನೇತೃತ್ವದ 7 ಸದಸ್ಯರ ತಜ್ಞರ ಸಮಿತಿ ಕರ್ನಾಟಕ ಸರಕಾರಕ್ಕೆ ಮಾರ್ಚ್‌ 2ರಂದು ಶಿಫಾರಸು ಸಲ್ಲಿಸಿತ್ತು. ಸೋಮವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಈ ಸಲಹೆಗಳನ್ನು ಸರಕಾರ ಅಂಗೀಕರಿಸಿದೆ.

ಅಂತೂ ಸರಕಾರಕ್ಕೆ ತಾನು ಮಾಡಬೇಕಾದ ಕೆಲಸ ಬಿಟ್ಟು ಮಾಡಬಾರದ ಕೆಲಸವನ್ನು ಮಾಡಬಾರದ ರೀತಿಯಲ್ಲಿ ಮಾಡುವುದಕ್ಕೆ ಏನೋ ಹುಮ್ಮಸ್ಸು.‌ 'ಆಸ್ತಾನ ತಜ್ಞರ' ಸಮಿತಿ ರಚಿಸಿ ಅವರು ಕೇಳಿದ ಸಮಯ ನೀಡದೆ ತಾನು ಹೇಳಿದ ಸಮಯದಲ್ಲಿಯೇ ಮಾಡಬೇಕೆಂದು ಹೇಳಿ, ಸಮುದಾಯವನ್ನು ಒಡೆಯುವುದು ತನ್ನ ಪರಮಾಧಿಕಾರವೆಂಬ ಅಟ್ಟಹಾಸ ಮೆರೆದಿದೆ. — Sureshkumar (@nimmasuresh) March 19, 2018 ಲಿಂಗಾಯತ ಸ್ಥಾನಮಾನ: ರಂಭಾಪುರಿಶ್ರೀ ಧರ್ಮಯುದ್ಧದ ಎಚ್ಚರಿಕೆ

ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂಬ ಲಿಂಗಾಯತರ ಬೇಡಿಕೆಯನ್ನು ಅಧ್ಯಯನ ಮಾಡಲು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಸ್ಟಿಸ್ ನಾಗಮೋಹನ್‌ದಾಸ್‌ ಸಮಿತಿಯನ್ನು ರಚಿಸಿತ್ತು.

ಲಿಂಗಾಯತ ವರದಿ ರಾಜ್ಯ ಸರಕಾರ ಪ್ರಾಯೋಜಿತ: ಶೆಟ್ಟರ್‌

ಸಾಂಪ್ರದಾಯಿಕವಾಗಿ ಬಿಜೆಪಿಯ ಬೆಂಬಲಿಗರಾಗಿರುವ ವೀರಶೈವ-ಲಿಂಗಾಯತ ಸಮುದಾಯವನ್ನು ಒಡೆಯಲು ಕಾಂಗ್ರೆಸ್‌ ಹೂಡಿರುವ ಚುನಾವಣಾ ರಾಜಕೀಯದ ತಂತ್ರವಿದು ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ