ಆ್ಯಪ್ನಗರ

ದೇಶದ ಶಾಸಕರ ಪೈಕಿ ಕರ್ನಾಟಕದವರೇ ಕುಬೇರರು!

ಕರ್ನಾಟಕದ ಆರ್ಥಿಕ ಅಭಿವೃದ್ಧಿ ದರ ನಗಣ್ಯ ಎನಿಸಿದ್ದರೂ ರಾಜ್ಯದ ಶಾಸಕರ ಸಂಪತ್ತು ಮಾತ್ರ ಸಮೃದ್ಧ ಏರಿಕೆಯಾಗಿದೆ. ದೇಶದಲ್ಲಿಯೇ ಅತಿಹೆಚ್ಚು ಶ್ರೀಮಂತ ಶಾಸಕರು ಕರ್ನಾಟಕದಲ್ಲಿದ್ದಾರೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಕ್ರಾಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ವರದಿ ತಿಳಿಸಿದೆ. ಕರ್ನಾಟಕದ 203 ಶಾಸಕರ ವಾರ್ಷಿಕ ಸರಾಸರಿ ಆದಾಯವು ಅತಿ ಗರಿಷ್ಠ ಅಂದರೆ 1.1 ಕೋಟಿ ರೂ. ಆಗಿದೆ.

Vijaya Karnataka 18 Sep 2018, 11:27 am
ಹೊಸದಿಲ್ಲಿ: ಕರ್ನಾಟಕದ ಆರ್ಥಿಕ ಅಭಿವೃದ್ಧಿ ದರ ನಗಣ್ಯ ಎನಿಸಿದ್ದರೂ ರಾಜ್ಯದ ಶಾಸಕರ ಸಂಪತ್ತು ಮಾತ್ರ ಸಮೃದ್ಧ ಏರಿಕೆಯಾಗಿದೆ. ದೇಶದಲ್ಲಿಯೇ ಅತಿಹೆಚ್ಚು ಶ್ರೀಮಂತ ಶಾಸಕರು ಕರ್ನಾಟಕದಲ್ಲಿದ್ದಾರೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಕ್ರಾಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ವರದಿ ತಿಳಿಸಿದೆ. ಕರ್ನಾಟಕದ 203 ಶಾಸಕರ ವಾರ್ಷಿಕ ಸರಾಸರಿ ಆದಾಯವು ಅತಿ ಗರಿಷ್ಠ ಅಂದರೆ 1.1 ಕೋಟಿ ರೂ. ಆಗಿದೆ.
Vijaya Karnataka Web rich mla


ನಂತರದ ಸ್ಥಾನದಲ್ಲಿ ಮಹಾರಾಷ್ಟ್ರದ 256 ಶಾಸಕರ ವಾರ್ಷಿಕ ಆದಾಯ 43.4 ಲಕ್ಷ ರೂ. ದೇಶದಲ್ಲಿ ಚುನಾಯಿತ ಒಟ್ಟು 4086 ಶಾಸಕರಿದ್ದು ಈ ಪೈಕಿ 3145 ಮಂದಿ ತಮ್ಮ ಆದಾಯ ವಿವರ ಸಲ್ಲಿಕೆ ಮಾಡಿದ್ದಾರೆ. ವಾರ್ಷಿಕ ಆದಾಯ ಗಳಿಕೆ ಪಟ್ಟಿಯಲ್ಲಿ ರಾಜ್ಯದ ಶಾಸಕರೇ ಮುಂಚೂಣಿಯಲ್ಲಿ ಮಿಂಚಿದ್ದಾರೆ. ಈಶಾನ್ಯ ಭಾರತದ ಶಾಸಕರು ಅತ್ಯಲ್ಪ ವಾರ್ಷಿಕ 8.5 ಲಕ್ಷ ರೂ. ಆದಾಯ ಹೊಂದಿದ್ದಾರೆ. ಏತನ್ಮಧ್ಯೆ ಎಷ್ಟೆಲ್ಲ ಬಿಗಿ ನಿಯಮಗಳು ಇದ್ದ ಹೊರತಾಗಿಯೂ ಇನ್ನೂ 941 ಶಾಸಕರು ತಮ್ಮ ಆದಾಯ ವಿವರ ಸಲ್ಲಿಸಿಲ್ಲ ಎಂದು ಎಡಿಆರ್‌ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ