ಆ್ಯಪ್ನಗರ

ಚಿದಂಬರಂ ಬಂಧನ: ಇದು ರಾಜಕೀಯ ದ್ವೇಷದ ಕ್ರಮ ಎಂದ ಪುತ್ರ ಕಾರ್ತಿ

ಐಎನ್‌ಎಕ್ಸ್‌ ಮೀಡಿಯಾ ಹೌಸ್ ಹಗರಣ ಸಂಬಂಧ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರನ್ನು ಬಂಧಿಸಿರುವುದು ದ್ವೇಷದ ರಾಜಕಾರಣ ಎಂದು ಪುತ್ರ ಕಾರ್ತಿ ಚಿದಂಬರಂ ಆರೋಪಿಸಿದ್ದಾರೆ.

Vijaya Karnataka Web 21 Aug 2019, 10:44 pm
ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಹೌಸ್‌ ಹಗರಣದಲ್ಲಿ ಸಿಲುಕಿರುವ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರನ್ನು ಬಂಧಿಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದ್ದು ಎಂದು ಪುತ್ರ ಕಾರ್ತಿ ಚಿದಂಬರಂ ತಿಳಿಸಿದ್ದಾರೆ.
Vijaya Karnataka Web ಕಾರ್ತಿ ಚಿದಂಬರಂ
ಕಾರ್ತಿ ಚಿದಂಬರಂ


ಬುಧವಾರ ರಾತ್ರಿ ನಡೆದ ದಿಢೀರ್‌ ಬೆಳವಣಿಗೆಯಲ್ಲಿ ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡ ನಂತರ ಕಾರ್ತಿ ಚಿದಂಬರಂ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದರು.

ಇದು ರಾಜಕೀಯ ದ್ವೇಷದ ನಿರ್ಧಾರವಲ್ಲದೇ ಬೇರೇನೂ ಅಲ್ಲ. ಕೆಲವರನ್ನು ಮೆಚ್ಚಿಸುವುದಕ್ಕೆ ನನ್ನ ತಂದೆಯನ್ನು ಬಂಧಿಸಲಾಗಿದೆ ಎಂದರು ಆರೋಪಿಸಿದರು.

ಬಂಧನ ವಾರಂಟ್‌ ಕೂಡ ಸಿಬಿಐ ಅಧಿಕಾರಿಗಳು ನೀಡಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಕೂಡಲೇ ಬಂಧಿಸುವುದು ಯಾವ ಕ್ರಮ. ಕೇಂದ್ರ ಸರಕಾರದದಲ್ಲಿರುವ ಕೆಲವರ ಆದೇಶದ ಮೇರೆಗೆ ಈ ರೀತಿ ಕೃತ್ಯ ಎಸಗಲಾಗುತ್ತಿದೆ ಎಂದು ಕಾರ್ತಿ ಚಿದಂಬರಂ ಆರೋಪಿಸಿದರು.

ಇದು ಸಂವಿಧಾನವನ್ನೇ ತಿದ್ದುಪಡಿ ಮಾಡಲು ಹೊರಟಿರುವವರು ಇಡೀ ವ್ಯವಸ್ಥೆಯನ್ನು ತಮ್ಮದಾಗಿಸಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಂಡು ಬಂಧನ ಮಾಡಿದ್ದಾರೆ. ಇದರ ವಿರುದ್ಧ ಹೋರಾಡುತ್ತೆವೆ ಎಂದು ಕಾರ್ತಿ ಚಿದಂಬರಂ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ