ಆ್ಯಪ್ನಗರ

ವಿಶ್ವ ಮಟ್ಟದಲ್ಲಿ ಕಾಶ್ಮೀರವನ್ನು ಮುನ್ನೆಲೆಗೆ ತಂದ ಬೆಂಗಳೂರಿನ ಯುವ ಲೇಖಕಿ

ಬೆಂಗಳೂರಿನಲ್ಲಿ ಹುಟ್ಟಿ, ಬೆಳೆದಿದ್ದ ಮಾಧುರಿ ವಿಜಯ್‌ ಅವರು ಜಮ್ಮು-ಕಾಶ್ಮೀರದ ದೋದಾ ಜಿಲ್ಲೆಯಲ್ಲಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಹಲವು ವರ್ಷ ಕಳೆದಿದ್ದರು.

Agencies 5 Aug 2019, 5:00 am
ಹೊಸದಿಲ್ಲಿ: ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇತ್ತೀಚೆಗೆ ನೀಡಿದ ಹೇಳಿಕೆಯು ಜಾಗತಿಕ ಸಮುದಾಯದಲ್ಲಿ ಕಾಶ್ಮೀರದ ಕುರಿತ ಚರ್ಚೆಯನ್ನು ಮುನ್ನೆಲೆಗೆ ತಂದಿತು. ಆದರೆ, ಅದಕ್ಕೂ ಮೊದಲೇ 'ದಿ ಫಾರ್‌ ಫೀಲ್ಡ್‌' ಎಂಬ ಕಾದಂಬರಿಯೊಂದು ಸದ್ದಿಲ್ಲದೆ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಕಾಶ್ಮೀರದ ಬಗ್ಗೆ ಗಮನ ಸೆಳೆದಿತ್ತು. ಇದಕ್ಕೆ ಕಾರಣವಾಗಿದ್ದು, ಬೆಂಗಳೂರು ಮೂಲದ ಲೇಖಕಿ ಎಂಬುದು ವಿಶೇಷ.
Vijaya Karnataka Web kashmir is about cherished set of memories says debutante author madhuri vijay
ವಿಶ್ವ ಮಟ್ಟದಲ್ಲಿ ಕಾಶ್ಮೀರವನ್ನು ಮುನ್ನೆಲೆಗೆ ತಂದ ಬೆಂಗಳೂರಿನ ಯುವ ಲೇಖಕಿ


ಲೇಖಕಿ ಮಾಧುರಿ ವಿಜಯ್‌ ಅವರು ತಮ್ಮ ಚೊಚ್ಚಲ ಕಾದಂಬರಿಯಲ್ಲಿ ಕಟ್ಟಿಕೊಟ್ಟ ಬೆಂಗಳೂರಿನಿಂದ ಕಾಶ್ಮೀರಕ್ಕೆ ಪ್ರಯಾಣಿಸುವ ಮಹಿಳೆಯೊಬ್ಬರ ಜೀವನಗಾಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮರ್ಶಕರ ಗಮನ ಸೆಳೆದಿತ್ತು. ವಾಷಿಂಗ್ಟನ್‌ ಪೋಸ್ಟ್‌, ಗಾರ್ಡಿಯನ್‌, ನ್ಯೂಯಾರ್ಕರ್‌ ಸೇರಿದಂತೆ ಬಹುತೇಕ ಪತ್ರಿಕೆಗಳಲ್ಲಿ ಅತ್ಯುತ್ತಮ ವಿಮರ್ಶೆಗಳು ಬಂದಿದ್ದವು.

ಬೆಂಗಳೂರಿನಲ್ಲಿ ಹುಟ್ಟಿ, ಬೆಳೆದಿದ್ದ ಮಾಧುರಿ ವಿಜಯ್‌ ಅವರು ಜಮ್ಮು-ಕಾಶ್ಮೀರದ ದೋದಾ ಜಿಲ್ಲೆಯಲ್ಲಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಹಲವು ವರ್ಷ ಕಳೆದಿದ್ದರು. ಕಣಿವೆ ರಾಜ್ಯದಲ್ಲಿ ಸುತ್ತಾಡಿ ಅಲ್ಲಿನ ಸ್ಥಿತಿಗತಿಯ ಬಗ್ಗೆ ಆಳ ಅಧ್ಯಯನ ನಡೆಸಿದ್ದರು. ಕಾಶ್ಮೀರ ಭೇಟಿಯಿಂದ ತಮ್ಮಲ್ಲಾದ ಪರಿವರ್ತನೆಯನ್ನು, ತಮ್ಮದೇ ಜೀವನಾನುಭವವನ್ನು ಅವರು ಅಕ್ಷರಗಳಲ್ಲಿ ಸೆರೆಹಿಡಿದಿದ್ದಾರೆ. ಅಮೆರಿಕದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ 'ಪುಷ್‌ಕಾರ್ಟ್‌ ಪ್ರೈಜ್‌' ವಿಜೇತರೂ ಇವರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ