ಆ್ಯಪ್ನಗರ

ಉಗ್ರ ಸಂಘಟನೆ ಸೇರಿದ ಒಂದು ವಾರದೊಳಗೆ ಮನೆ ಸೇರಿದ ಕಾಶ್ಮೀರ ಯುವಕ

ಭಯೋತ್ಪಾದಕ ಸಂಘಟನೆಗೆ ಸೇರಿದ್ದ ಕಾಶ್ಮೀರ ಯುವಕನೊಬ್ಬ ಒಂದು ವಾರದ ಬಳಿಕ ಮನೆಗೆ ವಾಪಾಸಾಗಿರುವ ಘಟನೆಯನ್ನು ಪಿಟಿಐ ವರದಿ ಮಾಡಿದೆ.

PTI 1 Jun 2017, 8:58 pm
ಶ್ರೀನಗರ: ಭಯೋತ್ಪಾದಕ ಸಂಘಟನೆಗೆ ಸೇರಿದ್ದ ಕಾಶ್ಮೀರ ಯುವಕನೊಬ್ಬ ಒಂದು ವಾರದ ಬಳಿಕ ಮನೆಗೆ ವಾಪಾಸಾಗಿರುವ ಘಟನೆಯನ್ನು ಪಿಟಿಐ ವರದಿ ಮಾಡಿದೆ.
Vijaya Karnataka Web kashmiri boy back home a week after joining terror outfit
ಉಗ್ರ ಸಂಘಟನೆ ಸೇರಿದ ಒಂದು ವಾರದೊಳಗೆ ಮನೆ ಸೇರಿದ ಕಾಶ್ಮೀರ ಯುವಕ


19 ಹರೆಯದ ತುಫೈಲ್ ಮಿರ್ ಎಂಬಾತ ಕಳೆದೊಂದು ವಾರದಿಂದ ನಾಪತ್ತೆಯಾಗಿದ್ದನು. ಈ ಬಗ್ಗೆ ವಿಚಾರಣೆ ನಡೆಸಿದಾಗ ಉಗ್ರರ ಸಂಘಟನೆಗೆ ಸೇರಿರುವ ಬಗ್ಗೆ ಮಾಹಿತಿ ಲಭಿಸಿತ್ತು.

ಇದೀಗ ಯುವಕ ಮನೆಗೆ ಹಿಂತಿರುವುದಾಗಿ ಕೇಂದ್ರ ಕಾಶ್ಮೀರ ವಿಭಾಗದ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿ) ಗುಲಾಂ ಹಸನ್ ಭಟ್ ಖಚಿತಪಡಿಸಿದ್ದಾರೆ.

ಹಾಗಿದ್ದರೂ ತುಫೈಲ್ ಅವರನ್ನು ಬಂಧಿಸಲಾಗಿದೆಯೇ ಅಥವಾ ಖುದ್ದು ಶರಣಾಗಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ಇತ್ತೀಚೆಗಿನ ದಿನಗಳಿಂದ ಅನೇಕ ಸ್ಥಳೀಯ ಯುವಕರು ಹಿಜ್ಬುಲ್ ಮುಜಾಹೀದ್ದಿನ್ ಎಂಬ ಉಗ್ರ ಸಂಘಟನೆಗೆ ಸೇರಿಕೊಂಡಿರುವುದು ವರದಿಯಾಗಿತ್ತು. ಅಂದ ಹಾಗೆ ತುಫೈಲ್ ಶ್ರೀನಗರ ಹೊರವಲಯದಲ್ಲಿರುವ ಪರಿಮ್‌ಪೊರಾ ನಿವಾಸಿಯಾಗಿದ್ದಾರೆ. ಆತನ ನಾಪತ್ತೆಯ ಬಳಿಕ ಗಾಬರಿಗೊಂಡ ಕುಟುಂಬವು ಸಾರ್ವಜನಿಕರ ಸಹಾಯ ಯಾಚಿಸಿದ್ದರು. ತದಾ ಬಳಿಕ ಸ್ವಲ್ಪ ದಿನದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮುಖ ಮರೆಯಾಚಿದ ರೂಪದಲ್ಲಿ ಎಕೆ ರೈಫಲ್ ಹಿಡಿದಿರುವ ಯುವಕನ ಚಿತ್ರಗಳು ಹರಿದಾಡತೊಡಗಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ