Please enable javascript.ಕೇರಳ ಹೌಸ್‌ನಲ್ಲಿ ವಾಪಸಾದ ಮೀಟ್ ಫ್ರೈ, ಮೀಟ್ ಕರಿ - Kerala House: Beef curry, Beef fry make way for Meat curry, Meat fry - Vijay Karnataka

ಕೇರಳ ಹೌಸ್‌ನಲ್ಲಿ ವಾಪಸಾದ ಮೀಟ್ ಫ್ರೈ, ಮೀಟ್ ಕರಿ

ಏಜೆನ್ಸೀಸ್ 29 Oct 2015, 4:00 am
Subscribe

‘ಬೀಫ್ ಫ್ರೈ’ ವಿವಾದದ ಹಿನ್ನೆಲೆಯಲ್ಲಿ ಮಂಗಳವಾರ ಕೇರಳ ಹೌಸ್‌ನಲ್ಲಿ ನಿಷೇಧಿಸಲಾಗಿದ್ದ ಕೋಣದ ಮಾಂಸದ ಊಟ ಕ್ಯಾಂಟೀನ್ ಮೆನುವಿನಲ್ಲಿ ಮತ್ತೆ ಹಾಜರಾಗಿದೆ.

kerala house beef curry beef fry make way for meat curry meat fry
ಕೇರಳ ಹೌಸ್‌ನಲ್ಲಿ ವಾಪಸಾದ ಮೀಟ್ ಫ್ರೈ, ಮೀಟ್ ಕರಿ
45 ನಿಮಿಷದಲ್ಲಿ ಮಾಂಸದ ಊಟ ಖಾಲಿ
ಹೊಸದಿಲ್ಲಿ: ‘ಬೀಫ್ ಫ್ರೈ’ ವಿವಾದದ ಹಿನ್ನೆಲೆಯಲ್ಲಿ ಮಂಗಳವಾರ ಕೇರಳ ಹೌಸ್‌ನಲ್ಲಿ ನಿಷೇಧಿಸಲಾಗಿದ್ದ ಕೋಣದ ಮಾಂಸದ ಊಟ ಕ್ಯಾಂಟೀನ್ ಮೆನುವಿನಲ್ಲಿ ಮತ್ತೆ ಹಾಜರಾಗಿದೆ. ಬುಧವಾರ ಕೋಣದ ಮಾಂಸದ ಊಟ ಶುರುವಾದೊಡನೆ ಎಲ್ಲರೂ ಮುಗಿಬಿದ್ದು ಸವಿದಿದ್ದಾರೆ. 45 ನಿಮಿಷಗಳೊಳಗೆ ಅಷ್ಟೂ ಅಡುಗೆ ಖಾಲಿಯಾಗಿದೆ.

‘‘ಕ್ಯಾಂಟೀನ್‌ನಲ್ಲಿ ನಾವು ಕೋಣದ ಮಾಂಸದ ಆಹಾರವನ್ನು ಮತ್ತೆ ಆರಂಭಿಸಿದ್ದೇವೆ. ಈ ವಿಷಯ ಹೆಚ್ಚು ಸುದ್ದಿಯಲ್ಲಿರುವುದರಿಂದ ಬಹುತೇಕರು ಅದನ್ನೇ ಹೆಚ್ಚಾಗಿ ಕೇಳುತ್ತಿದ್ದಾರೆ,’’ ಎಂದು ಕೇರಳ ಹೌಸ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಿಂದೂಸೇನಾ ಮುಖ್ಯಸ್ಥ ಬಂಧನ

ಕೇರಳ ಹೌಸ್‌ನಲ್ಲಿ ಗೋಮಾಂಸದ ಆಹಾರ ನೀಡಲಾಗುತ್ತಿದೆ ಎಂದು ದೂರು ನೀಡಿದ್ದ ಹಿಂದು ಸೇನಾ ಮುಖ್ಯಸ್ಥ ವಿಷ್ಣು ಗುಪ್ತ ಅವರನ್ನು ದಿಲ್ಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಸೆಕ್ಷನ್ 182ರ ಅಡಿಯಲ್ಲಿ ಗುಪ್ತಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದಿಲ್ಲಿ ಪೊಲೀಸರ ವಿರುದ್ಧ ಕಠಿಣ ಕ್ರಮ: ಚಾಂಡಿ

ದಿಲ್ಲ್ ಪೊಲೀಸರು ತಮ್ಮ ತಪ್ಪು ಒಪ್ಪಿಕೊಳ್ಳದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ಗುಡುಗಿದ್ದಾರೆ. ‘‘ಪೊಲೀಸರ ಕ್ರಮವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಪೊಲೀಸರ ಪ್ರತಿಕ್ರಿಯೆಯನ್ನು ಮಾಧ್ಯಮಗಳಲ್ಲಿ ಓದಿದ್ದೇನೆ. ಅವರು ತಪ್ಪನ್ನು ಒಪ್ಪಿಕೊಳ್ಳದಿದ್ದರೆ ಕಾನೂನು ಕ್ರಮ ಅನಿವಾರ್ಯ,’’ ಸಂಪುಟ ಸಭೆ ಬಳಿಕ ಚಾಂಡಿ ಎಚ್ಚರಿಸಿದ್ದಾರೆ.

**

ಗೋಮಾಂಸ ಸೇವನೆಗೆ ವಿರೋಧವಿಲ್ಲ: ವಿಹಿಂಪ

ಕೊಚ್ಚಿ: ಕೇರಳ ಭವನ, ಹೋಟೆಲ್ ಮತ್ತು ವಸತಿ ಗೃಹಗಳಲ್ಲಿ ಗೋಮಾಂಸದ ಅಡುಗೆ ಸಿದ್ಧಪಡಿಸುವುದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅದರ ಅಂಗ ಸಂಸ್ಥೆಗಳ ವಿರೋಧವಿಲ್ಲ ಎಂದು ವಿಶ್ವಹಿಂದೂ ಪರಿಷತ್ ಸ್ಪಷ್ಟಪಡಿಸಿದೆ. ತಮ್ಮ ಅಭಿಪ್ರಾಯಗಳನ್ನು ಜನರ ಮೇಲೆ ಹೇರುವ ಮೂಲಕ ಕೇಂದ್ರದ ಮೋದಿ ಸರಕಾರಕ್ಕೆ ಕೆಟ್ಟ ಹೆಸರು ತರಲು ಹಿಂದೂ ಸೇನಾ, ರಾಮ ಸೇನಾದಂಥ ಕೆಲವು ಸಂಘಟನೆಗಳು ಯತ್ನಿಸುತ್ತಿವೆ. ಅದರ ಒಂದು ಭಾಗವಾಗಿ ಈಗ ದೇಶದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ ಎಂದು ವಿಹಿಂಪ ಕೇರಳ ಘಟಕ ಅಧ್ಯಕ್ಷ ಎಸ್.ಜೆ.ಆರ್.ಕುಮಾರ್ ಹೇಳಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ