ಆ್ಯಪ್ನಗರ

ಐಸಿಸ್ ಪರ ಫೇಸ್‌ಬುಕ್ ಪೋಸ್ಟ್; ಬಂಧನ

ಬಂಧಿತನನ್ನು ಅಸ್ಕರ್ (47) ಎಂದು ಗುರುತಿಸಲಾಗಿದ್ದು, ಆತ ಅನಕ್ಯಾಮ್ ಸಮೀಪದ ಕಲಥಿಂಗಲ್ಪಾಡಿ ನಿವಾಸಿಯಾಗಿದ್ದಾನೆ.

TIMESOFINDIA.COM 14 May 2019, 8:49 am
ಮಲಪ್ಪುರಂ: ಭಯೋತ್ಪಾದಕ ಸಂಘಟನೆ ಐಸಿಸ್ ಪರ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಕೇರಳ ಪೊಲೀಸರು 47 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.
Vijaya Karnataka Web Askar


ಬಂಧಿತನನ್ನು ಅಸ್ಕರ್ (47) ಎಂದು ಗುರುತಿಸಲಾಗಿದ್ದು, ಆತ ಅನಕ್ಯಾಮ್ ಸಮೀಪದ ಕಲಥಿಂಗಲ್ಪಾಡಿ ನಿವಾಸಿಯಾಗಿದ್ದಾನೆ.

ಅನುಮಾನಾಸ್ಪದ ಫೇಸ್‌ಬುಕ್ ಪೋಸ್ಟ್ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಆತನನ್ನು ಸೋಮವಾರ ಮುಂಜಾನೆ ಬಂಧಿಸಲಾಗಿತ್ತು.

ಪ್ರಾಥಮಿಕ ವಿಚಾರಣೆ ಮುಗಿದಿದ್ದು, ಆತ ಐಸಿಸ್ ಜತೆ ನೇರ ಸಂಪರ್ಕ ಹೊಂದಿದ್ದಾನೋ ಇಲ್ಲವೋ ಎಂಬುದು ಇನ್ನು ಕೂಡ ಪತ್ತೆಯಾಗಿಲ್ಲ. ಹೆಚ್ಚಿನ ವಿಚಾರಣೆ ಬಳಿಕವಷ್ಟೇ ಆತ ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದನೇ ಎಂಬುದು ಬೆಳಕಿಗೆ ಬಂರಲಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.

2016ರಿಂದ ಫೇಸ್‌ಬುಕ್‌ನಲ್ಲಿ ಸಕ್ರಿಯನಾಗಿರುವ ಅಸ್ಕರ್ ಮೇಲೆ ಸೈಬರ್ ಪೊಲೀಸರು ಬಹಳ ದಿನಗಳಿಂದ ಕಣ್ಣಿಟ್ಟಿದ್ದರು. ಕಾರಣ ಆತ ಸದಾ ಕೋಮುವಾದಿ ಪೋಸ್ಟ್‌ಗಳನ್ನೇ ಪ್ರಕಟಿಸುತ್ತಿದ್ದ. ಐಸಿಸ್ ಸಿದ್ಧಾಂತ ಮತ್ತು ಜೈಷೆ- ಇ ಮೊಹಮ್ಮದ್ ಮತ್ತು ಅಲ್ ಖೈದಾ ಉಗ್ರ ಸಂಘಟನೆಯ ಚಟುವಟಿಕೆಗಳನ್ನು ಸದಾ ಬೆಂಬಲಿಸುತ್ತಿದ್ದ.

ಗಲ್ಫ್‌ನಲ್ಲಿ ವಾಸವಾಗಿದ್ದ ಆತ ತಮಿಳುನಾಡಿನ ಮಧುರೈ ಮತ್ತು ದಿಂಡಿಗಲ್‌ನಲ್ಲಿ ಧಾರ್ಮಿಕ ಶಿಕ್ಷಣವನ್ನು ಮುಗಿಸಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ