ಆ್ಯಪ್ನಗರ

ಕೇರಳ ದೇಗುಲಗಳಲ್ಲಿ ಆರೆಸ್ಸೆಸ್ ಚಟುವಟಿಕೆ ನಿಷೇಧ ?

ಕೇರಳದ ದೇವಸ್ಥಾನಗಳ ಆವರಣಗಳಲ್ಲಿ ಆರೆಸ್ಸೆಸ್‌ ದೈಹಿಕ ತರಬೇತಿ ಚಟುವಟಿಕೆ ನಡೆಸುವುದನ್ನು ನಿಷೇಧಿಸಲು ಕೇರಳ ಸರಕಾರ ಕ್ರಮ ಕೈಗೊಂಡಿದೆ.

ಟೈಮ್ಸ್ ಆಫ್ ಇಂಡಿಯಾ 8 Sep 2016, 3:40 pm
ತಿರುವನಂತಪುರ: ಕೇರಳದ ದೇವಸ್ಥಾನಗಳ ಆವರಣಗಳಲ್ಲಿ ಆರೆಸ್ಸೆಸ್‌ ದೈಹಿಕ ತರಬೇತಿ ಚಟುವಟಿಕೆ ನಡೆಸುವುದನ್ನು ನಿಷೇಧಿಸಲು ಕೇರಳ ಸರಕಾರ ಕ್ರಮ ಕೈಗೊಂಡಿದೆ.
Vijaya Karnataka Web kerala may ban rss activities in temples
ಕೇರಳ ದೇಗುಲಗಳಲ್ಲಿ ಆರೆಸ್ಸೆಸ್ ಚಟುವಟಿಕೆ ನಿಷೇಧ ?


ಕೇರಳ ಪೊಲೀಸ್‌ ಕಾಯಿದೆಯ ಸೆಕ್ಷನ್‌ 73ರಡಿ ದೇವಸ್ಥಾನಗಳ ಆವರಣಗಳಲ್ಲಿ ತರಬೇತಿ ಚಟುವಟಿಕೆ ನಿಷೇಧಿಸಲು ಕ್ರಮ ಕೈಗೊಳ್ಳುವಂತೆ ಕಾನೂನು ಇಲಾಖೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ಶಿಫಾರಸು ಸಲ್ಲಿಸಿದೆ. ಇದಕ್ಕೆ ದೇವಸ್ವಂ ಸಚಿವ ಕದಕಂಪಳ್ಳಿ ಸುರೇಂದ್ರನ್‌ ಅವರ ಪ್ರತಿಕ್ರಿಯೆ ಕೋರಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಂದ ಸಮ್ಮತಿ ದೊರೆಯುತ್ತಿದ್ದಂತೆಯೇ ಸರಕಾರವು ನಿಷೇಧವನ್ನು ಜಾರಿಗೊಳಿಸಲಿದೆ.

ಕೇರಳ ಪೊಲೀಸ್‌ ಕಾಯಿದೆ ಪ್ರಕಾರ ದೇವಸ್ಥಾನಗಳ ಆವರಣಗಳಲ್ಲಿ ತರಬೇತಿ, ವ್ಯಾಯಾಮ ಸೇರಿದಂತೆ ಯಾವುದೇ ದೈಹಿಕ ಚಟುವಟಿಕೆ ನಡೆಸುವಂತಿಲ್ಲ ಎಂದು ಕಾನೂನು ಕಾರ್ಯದರ್ಶಿ ಬಿ.ಜಿ. ಹರೇಂದ್ರನಾಥ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ