ಆ್ಯಪ್ನಗರ

ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿಗೆ ಮೊದಲ ಬಲಿ

ಕೇರಳದಲ್ಲಿ ಮೊದಲ ಕೊರೊನಾ ವೈರಸ್ ಸಾವು ದಾಖಲಾಗಿದೆ. ದುಬೈನಿಂದ ಆಗಮಿಸಿದ್ದ ವ್ಯಕ್ತಿಗೆ ಮಾ.22ರಂದು ಕೊರೊನಾ ಇರುವುದು ತಿಳಿದುಬಂದಿತ್ತು. ಈ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರುವ 84 ಮಂದಿ ಪ್ರಸ್ತುತ ನಿಗಾದಲ್ಲಿದ್ದಾರೆ.

Vijaya Karnataka Web 29 Mar 2020, 8:06 am
ತಿರುವನಂತಪುರಂ: ಕೊರೊನಾ ವೈರಸ್‌ ಸೋಂಕು ಬಾಧಿಸಿ ಚಿಕಿತ್ಸೆಯಲ್ಲಿದ್ದ 69 ವರ್ಷದ ಕೊಚ್ಚಿಯ ಮಟ್ಟಂಚ್ಚೇರಿ ನಿವಾಸಿಯೊಬ್ಬರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಇದು ಕೇರಳದಲ್ಲಿ ಮೊದಲ ಬಲಿಯಾಗಿದೆ.
Vijaya Karnataka Web coronavirus


ಇವರು ಮಾ.16ರಂದು ದುಬೈಯಿಂದ ಆಗಮಿಸಿದ್ದರು. ಮಾ.22ರಂದು ಕೊರೊನಾ ಪಾಸಿಟಿವ್‌ ದೃಢಗೊಂಡಿದ್ದು, ಬಳಿಕ ಐಸೋಲೇಶನ್‌ ವಾರ್ಡ್‌ನಲ್ಲಿ ಚಿಕಿತ್ಸೆಯಲ್ಲಿದ್ದರು. ಸೋಂಕಿತರು ವಿಮಾನ ನಿಲ್ದಾಣದಿಂದ ಮನೆಗೆ ಬಂದಾಗ ಅವರ ಜತೆಗಿದ್ದ ಟ್ಯಾಕ್ಸಿ ಚಾಲಕನಿಗೂ ಈಗ ಕೊರೊನಾ ಪಾಸಿಟಿವ್‌ ದೃಢಗೊಂಡಿದೆ. ಟ್ಯಾಕ್ಸಿ ಚಾಲಕನ ಸಂಪರ್ಕ ಹೊಂದಿದ್ದ 30 ಮಂದಿ, ಮೃತಪಟ್ಟ ವ್ಯಕ್ತಿ ವಾಸವಾಗಿದ್ದ ಫ್ಲ್ಯಾಟ್‌ನಲ್ಲಿರುವ ಜನರನ್ನು ಸದ್ಯ ನಿಗಾದಲ್ಲಿರಿಸಲಾಗಿದೆ.

ಶನಿವಾರ ಕಟ್ಟುನಿಟ್ಟಿನ ಸುರಕ್ಷೆಯೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮೃತದೇಹವನ್ನು ಮುಟ್ಟಲು ಮತ್ತು ಸಂಬಂಧಿಕರಿಗೆ ಹತ್ತಿರದಿಂದ ವೀಕ್ಷಿಸಲು ಸ್ಥಳೀಯ ಆರೋಗ್ಯ ಅಧಿಕಾರಿಗಳು ಅವಕಾಶ ನೀಡಲಿಲ್ಲ. ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಪತ್ನಿ, ಮಕ್ಕಳಿಗೆ ವಿಡಿಯೋ ಮೂಲಕ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಈ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರುವ 84 ಮಂದಿ ಪ್ರಸ್ತುತ ನಿಗಾದಲ್ಲಿದ್ದಾರೆ.

ಬಾಗಲಕೋಟೆಯಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿ ನಮಾಜ್‌ ಮಾಡುತ್ತಿದ್ದ 19 ಮಂದಿ ಬಂಧನ


ಕೇರಳದಲ್ಲಿ ಈವರೆಗೆ 182 ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ 169 ಪ್ರಕರಣಗಳು ಸದ್ಯ ಚಾಲ್ತಿಯಲ್ಲಿದೆ. 12 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ