ಆ್ಯಪ್ನಗರ

ಪ್ರವಾಹ ಪರಿಹಾರ ನಿಧಿ: ಪಾಕೆಟ್‌ ಮನಿಯನ್ನು ದಾನ ಮಾಡಿದ ವಿದ್ಯಾರ್ಥಿಗೆ ಸಿಎಂ ಪಿಣರಾಯಿ ಶ್ಲಾಘನೆ

ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳೆದ ನಾಲ್ಕು ವರ್ಷದಿಂದ ಪಾಕೆಟ್‌ ಮನಿಯನ್ನು ದಾನ ಮಾಡುತ್ತಿರುವ ವಿದ್ಯಾರ್ಥಿಯನ್ನು ಸಾಮಾಜಿಕ ತಾಣದಲ್ಲಿ ಕೊಂಡಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್‌.

Indiatimes 14 Aug 2019, 12:30 pm
ಕೊಚ್ಚಿ: ಕರ್ನಾಟಕದಂತೆ ಭಾರಿ ಮಳೆ, ಪ್ರವಾಹದಿಂದ ಕಂಗೆಟ್ಟಿರುವ ಕೇರಳದಲ್ಲಿ ಸಂತ್ರಸ್ತರ ನೆರವಿಗೆ ರಾಜ್ಯ ಸರಕಾರ ಟೊಂಕ ಕಟ್ಟಿ ಶ್ರಮಿಸುತ್ತಿದೆ. ಲಕ್ಷಾಂತರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
Vijaya Karnataka Web Pinaray Vijayan Web


ಪ್ರವಾಹದಿಂದ ಕಂಗೆಟ್ಟ ಮಂದಿಯ ನೆರವಿಗೆ ರಾಷ್ಟ್ರಾದ್ಯಂತ ಸ್ಪಂದನೆ ವ್ಯಕ್ತವಾಗುತ್ತಿದೆ. ಪೋಷಕರು ನೀಡಿದ ಪಾಕೆಟ್‌ ಮನಿಯನ್ನೇ ವಿದ್ಯಾರ್ಥಿಗಳು ಪರಿಹಾರ ನಿಧಿಗೆ ನೀಡುತ್ತಿದ್ದಾರೆ. ಮಗಳ ಮದುವೆಗೆ, ಮಗನ ಚಿಕಿತ್ಸೆ ಹೀಗೆ ನಾನಾ ಕಾರಣಗಳಿಗೆ ಕೂಡಿದ್ದ ಹಣವನ್ನು ಕಣ್ಣುಮುಚ್ಚಿ ಪ್ರವಾಹ ಪರಿಹಾರ ನಿಧಿಗೆ ನೀಡುತ್ತಿದ್ದಾರೆ.

ಕೇರಳದ ತಿರುವನಂತಪುರದ 9ನೇ ತರಗತಿಯ ಆದರ್ಶ್‌ ಆರ್‌ಎ ಎಂಬ ವಿದ್ಯಾರ್ಥಿಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸಾಮಾಜಿಕ ತಾಣಗಳಲ್ಲಿ ಶ್ಲಾಘನೆ ಮಾಡಿದ್ದಾರೆ. ಆದರ್ಶ್‌ ಕಳೆದ ನಾಲ್ಕು ವರ್ಷಗಳಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪಾಕೆಟ್‌ ಮನಿಯನ್ನು ದಾನ ಮಾಡುತ್ತಿರುವ ಬಗ್ಗೆ ಸಿಎಂ ಉಲ್ಲೇಖಿಸಿದ್ದಾರೆ.

2016ರಲ್ಲಿ ಪುತ್ತಿಂಗಲ್‌ ದೇವಸ್ಥಾನದಲ್ಲಿ ಅಗ್ನಿ ದುರಂತ ನಡೆದ ಸಂದರ್ಭ ಆದರ್ಶ್‌ ಮೊದಲ ಬಾರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಾನ ಮಾಡಿದ್ದನು. ಆದರ್ಶ್‌ ಜತೆಗೆ ನಿಂತಿರುವ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿರುವ ಪಿಣರಾಯಿ ವಿಜಯನ್‌ ಆದರ್ಶ ವಿದ್ಯಾರ್ಥಿ ಎಂದು ಶ್ಲಾಘಿಸಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿ ಬಗ್ಗೆ ನಕಾರಾತ್ಮಕ ವಿಚಾರಗಳನ್ನು ಹರಿಯ ಬಿಡುತ್ತಿರುವವರ ವಿರುದ್ಧ ಈ ಪೋಸ್ಟ್‌ನ ಮೂಲಕ ನಯವಾಗಿ ತಿವಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ