ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್ನ ತೃತೀಯಲಿಂಗಿಗಳಾದ ಜಿಯಾ ಮತ್ತು ಜಹಾದ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದೇಶದ ಇತಿಹಾಸದಲ್ಲಿಯೇ ಇದು ಮೊದಲ ಪ್ರಕರಣ ಎನ್ನಲಾಗಿದ್ದು, ಈ ಜೋಡಿ ಮಾರ್ಚ್ನಲ್ಲಿ ಮಗುವನ್ನು ಸ್ವಾಗತಿಸುವ ಸಾಧ್ಯತೆ ಇದೆ. ಮೂರು ವರ್ಷಗಳಿಂದ ಲಿವಿಂಗ್ ಟುಗೆದರ್ನಲ್ಲಿ ಇದ್ದ ಈ ಜೋಡಿ, ಇನ್ಸ್ಟಾಗ್ರಾಂನಲ್ಲಿ ತಮ್ಮ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಲಿಂಗ ಪರಿವರ್ತನೆ ಮಾಡಿಕೊಂಡು ಗಂಡಾಗಿದ್ದರೂ, ಹೆಣ್ತನದ ಅಂಶಗಳನ್ನು ಉಳಿಸಿಕೊಂಡಿದ್ದ ತೃತೀಯಲಿಂಗಿ, ತನ್ನಂತೆಯೇ ಪುರುಷನಿಂದ ಮಹಿಳೆಯಾಗಿ ಬದಲಾಗಿದ್ದ ಸಂಗಾತಿಯಿಂದ ಗರ್ಭ ಧರಿಸಿರುವುದು ವಿಶೇಷ.
"ನಾನು ಅಥವಾ ನನ್ನ ದೇಹ ಹುಟ್ಟುವಾಗ ಮಹಿಳೆಯಾಗಿರಲಿಲ್ಲ. ಮಗುವೊಂದು ನನ್ನನ್ನು 'ಅಮ್ಮಾ' ಎಂದು ಕರೆಯುವುದು ಕೇಳಿಸಿಕೊಳ್ಳಲು ನನ್ನೊಳಗೆ ಹೆಣ್ತನದ ಕನಸು ಬರುತ್ತಿತ್ತು. ನಾನು ತಾಯಿಯಾಗುವ ಕನಸು ಕಂಡಂತೆ, ಆತ (ಜಹಾದ್) ಕೂಡ ತಂದೆಯಾಗುವ ಕನಸು ಕಂಡಿದ್ದ. ಇಂದು ಎಂಟು ತಿಂಗಳ ಜೀವವೊಂದು ಆತನ ಸಂಪೂರ್ಣ ಒಪ್ಪಿಗೆಯೊಂದಿಗೆ ಹೊಟ್ಟೆಯೊಳಗೆ ಓಡಾಡಿಕೊಂಡಿದೆ" ಎಂದು ಜಿಯಾ ಬರೆದುಕೊಂಡಿದ್ದಾಳೆ.
ಜಿಯಾ ಜನಿಸಿದ್ದು ಗಂಡಾಗಿ. ಬಳಿಕ ಮಹಿಳೆಯಾಗಿ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಳು. ಜಹಾದ್ ಹೆಣ್ಣಾಗಿ ಹುಟ್ಟಿ, ಗಂಡಾಗಿ ಲಿಂಗ ಪರಿವರ್ತನೆ ಮಾಡಿಕೊಂಡಿದ್ದ. ಮಹಿಳೆಯಿಂದ ಪುರುಷನಾಗಿ ಬದಲಾಗುವ ಪ್ರಕ್ರಿಯೆಯಲ್ಲಿ ಜಹಾದ್ನ ಗರ್ಭಕೋಶ ಮತ್ತು ಇತರೆ ಕೆಲವು ಅಂಗಾಂಗಗಳನ್ನು ತೆಗೆಯದ ಕಾರಣದಿಂದ ಜಿಯಾಳಿಂದ ಮಗುವನ್ನು ಪಡೆದುಕೊಳ್ಳುವುದು ಜಹಾದ್ಗೆ ಸಾಧ್ಯವಾಗಿದೆ.
"ಸಮಯ ನಮ್ಮಿಬ್ಬರನ್ನೂ ಜತೆಗೂಡಿಸಿದೆ. ಈಗ ಮೂರು ವರ್ಷ ಕಳೆದಿದೆ. ತಾಯಿಯಾಗುವ ನನ್ನ ಕನಸಿನಂತೆ, ಅಪ್ಪನಾಗುವ ಆತನ ಕನಸಿನಂತೆ ಮತ್ತು ನಮ್ಮಿಬ್ಬರ ಬಯಕೆಯು ನಮ್ಮಲ್ಲಿ ಒಂದೇ ಚಿಂತನೆ ಮೂಡಿಸಿದೆ. ಇಂದು ಎಂಟು ತಿಂಗಳ ಜೀವನ್, ಆತನ ಹೊಟ್ಟೆಯೊಳಗೆ ಸಂಪೂರ್ಣ ಸಹಮತದೊಂದಿಗೆ ಓಡಾಡುತ್ತಿದೆ. ನಮ್ಮ ಬಯಕೆಗಳು ಈಡೇರಲು ನಮ್ಮ ನಿರ್ಧಾರವನ್ನು ಅದು ಬೆಂಬಲಿಸುತ್ತಿದೆ" ಎಂದು ಹೇಳಿಕೊಂಡಿರುವ ಜಿಯಾ, "ಈವರೆಗೂ ಗೊತ್ತಿರುವಂತೆ ಇದು ಭಾರತದ ಮೊದಲ ಟ್ರಾನ್ಸ್ ಮ್ಯಾನ್ ಗರ್ಭಧಾರಣೆ" ಎಂದು ತಿಳಿಸಿದ್ದಾಳೆ.
ಜಿಯಾ ಮತ್ತು ಜಹಾದ್ ಅವರ ಇನ್ಸ್ಟಾಗ್ರಾಂ ಪೋಸ್ಟ್ಗೆ ಸಾವಿರಾರು ಲೈಕ್ ಮತ್ತು ಕಾಮೆಂಟ್ಗಳು ಬಂದಿವೆ. ಇಬ್ಬರೂ ಪ್ರೆಗ್ನೆನ್ಸಿ ಫೋಟೋಶೂಟ್ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅನೇಕರು ಅವರನ್ನು ಅಭಿನಂದಿಸಿದ್ದರೆ, ಇದು ಕೆಟ್ಟ ಪರಂಪರೆ ಎಂದೂ ಕೆಲವರು ಟೀಕಿಸಿದ್ದಾರೆ.