ಆ್ಯಪ್ನಗರ

ಅಂಧ ವೃದ್ದರೊಬ್ಬರನ್ನ ಹತ್ತಿಸಲು ಓಡಿ ಹೋಗಿ ಬಸ್‌ ನಿಲ್ಲಿಸಿದ ಮಹಿಳೆ! ವಿಡಿಯೋ ವೈರಲ್‌

ಕೇರಳದ ಮಹಿಳೆಯೊಬ್ಬರ ಕಾರ್ಯಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಂಧ ವೃದ್ಧರೊಬ್ಬರು ಸಾರ್ವಜನಿಕ ಸಾರಿಗೆ ಬಸ್‌ ಹತ್ತಲು ದೌಡಾಯಿಸುತ್ತಿದ್ದರೂ ಗಮನಿಸದೆ ಮುಂದಕ್ಕೆ ಸಾಗಿದ ಬಸ್‌ ಅನ್ನು ಕೇರಳ ಮಹಿಳೆಯೊಬ್ಬರು ಅಡ್ಡಗಟ್ಟಿ ತಡೆದಿದ್ದಾರೆ. ಬಳಿಕ ಅಂಧ ವೃದ್ಧರ ಕೈ ಹಿಡಿದು ಬಸ್‌ ತನಕ ಕರೆದುಕೊಂಡು ಹೋಗಿ ಹತ್ತಿಸಿರುವ ಘಟನೆ ನಡೆದಿದೆ.

Indiatimes 10 Jul 2020, 6:58 am
ತಿರುವನಂತಪುರಂ: ಅಂಧ ವೃದ್ಧರೊಬ್ಬರು ಸಾರ್ವಜನಿಕ ಸಾರಿಗೆ ಬಸ್‌ ಹತ್ತಲು ದೌಡಾಯಿಸುತ್ತಿದ್ದರೂ ಗಮನಿಸದೆ ಮುಂದಕ್ಕೆ ಸಾಗಿದ ಬಸ್‌ ಅನ್ನು ಕೇರಳ ಮಹಿಳೆಯೊಬ್ಬರು ಅಡ್ಡಗಟ್ಟಿ ತಡೆದಿದ್ದಾರೆ. ಬಳಿಕ ಅಂಧ ವೃದ್ಧರ ಕೈ ಹಿಡಿದು ಬಸ್‌ ತನಕ ಕರೆದುಕೊಂಡು ಹೋಗಿ ಹತ್ತಿಸಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಮಹಿಳೆಯ ಮಾನವೀಯತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
Vijaya Karnataka Web Blind-Man-Bus-1_5f06e01026bf4


ಅಂಧ ವೃದ್ಧರಿಗೆ ನೆರವಾದ ಮಹಿಳೆ ತಿರುವಳ್ಳಾದ ಜವಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಸುಪ್ರಿಯಾ ಎಂದು ಗುರುತಿಸಲಾಗಿದೆ. ಘಟನೆಯ ವಿಡಿಯೊವನ್ನು ಚಿತ್ರೀಕರಿಸಿದ ದಾರಿಹೋಕರೊಬ್ಬರನ್ನು ಜೊಶುವಾ ಎಂದು ಕೂಡ ಪತ್ತೆ ಮಾಡಲಾಗಿದೆ. ಅವರೇ ವಿಡಿಯೊವನ್ನು ಜಾಲತಾಣಗಳಲ್ಲಿ ಹರಿಬಿಟ್ಟರು ಎಂದು ತಿಳಿದುಬಂದಿದೆ. 41 ಸೆಕೆಂಡ್‌ಗಳ ಈ ವಿಡಿಯೊ ತುಣುಕನ್ನು ಕೆಲವೇ ಗಂಟೆಯಲ್ಲಿ6.2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.


ಸುಪ್ರಿಯಾ ಅವರ ವಿಡಿಯೊ ಹೆಚ್ಚು ವೈರಲ್‌ ಆಗಲು ಶುರುವಾಗಿದ್ದು ತಮಿಳುನಾಡು ತಿರುಪಥೂರ್‌ ಎಸ್‌ಪಿ ವಿಜಯ್‌ ಕುಮಾರ್‌ ಅವರು ವಿಡಿಯೊವನ್ನು ತಮ್ಮ ಟ್ಬಿಟರ್‌ ಖಾತೆಯಲ್ಲಿ ಹಂಚಿಕೊಂಡ ನಂತರ. ''ಈ ಜಗತ್ತನ್ನು ಬದುಕಲು ಒಂದು ಉತ್ತಮ ಸ್ಥಳವಾಗಿ ಈ ಮಹಿಳೆ ಮಾಡಿ ತೋರಿಸಿದ್ದಾರೆ. ಕರುಣೆ ತುಂಬ ಸುಂದರ,'' ಎಂದು ಎಸ್‌ಪಿ ವಿಜಯ್‌ ಕುಮಾರ್‌ ಮೆಚ್ಚುಗೆ ಟ್ವೀಟ್‌ ಮಾಡಿದ್ದಾರೆ.

ಆಯುರ್ವೇದ ಸಂಶೋಧನೆಗೆ ಅಮೆರಿಕ ನೆರವು: ಕೊರೊನಾ ಔಷಧ ಆವಿಷ್ಕಾರಕ್ಕೆ ಸಾಥ್‌!

ವಿಡಿಯೋದಲ್ಲಿ ಸುಪ್ರಿಯಾ ಅವರು, ಚಲಿಸುತ್ತಿರುವ ಬಸ್ಸನ್ನ ನಿಲ್ಲಿಸಲು ಓಡಿ ಹೋಗುತ್ತಾರೆ. ಹೇಗಾದರೂ ಬಸ್ಸನ್ನ ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆ. ನಂತರ ಬಸ್‌ ಸ್ಟ್ಯಾಂಡ್‌ ಬಳಿ ಉಳಿದಿರುವ ವೃದ್ದರೊಬ್ಬರನ್ನ ಮೆಲ್ಲ ಕೈಹಿಡಿದುಕೊಂಡು ಬಂದು, ನಂತರ ಬಸ್‌ಗೆ ಹತ್ತಿಸಿಕಳುಹಿಸುತ್ತಾರೆ. ನಂತರ ಬಸ್‌ ತೆರಳುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ