ಆ್ಯಪ್ನಗರ

ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಮ್ದಾರ್ ಶಾಗೆ 'ಆರ್ಡರ್ ಆಫ್ ಆಸ್ಟ್ರೇಲಿಯಾ' ಗರಿ

ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಶಾ ಅವರಿಗೆ ಆಸ್ಟ್ರೇಲಿಯಾದ ಶ್ರೇಷ್ಠ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಆರ್ಡರ್ ಆಫ್ ಆಸ್ಟ್ರೇಲಿಯಾ' ಒಲಿದಿದೆ.

Vijaya Karnataka Web 18 Jan 2020, 5:09 pm
ಬೆಂಗಳೂರು: ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಶಾ ಅವರಿಗೆ ಆಸ್ಟ್ರೇಲಿಯಾದ ಶ್ರೇಷ್ಠ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಆರ್ಡರ್ ಆಫ್ ಆಸ್ಟ್ರೇಲಿಯಾ' ಒಲಿದಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಿರಣ್‌ ಮಜುಮ್ದಾರ್‌ ಶಾ ಅವರ ಶ್ರಮವನ್ನು ಗುರುತಿಸಿರುವ ಆಸ್ಟ್ರೇಲಿಯಾ ಸರಕಾರ ಅತ್ಯುನ್ನ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಮಜುಮ್ದಾರ್‌ ಅವರು ವಾಣಿಜ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಭಾರತ - ಆಸ್ಟ್ರೇಲಿಯ ನಡುವಿನ ಸಂಬಂಧ ವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
Vijaya Karnataka Web Kiran Mazumdar-Shaw
ಆಸ್ಟ್ರೇಲಿಯಾದ ಭಾರತೀಯ ರಾಯಭಾರಿ ಹರಿಂದರ್‌ ಸಿಂಗ್‌ ಸಿದು ಮತ್ತು ಕಿರಣ್ ಮಜುಮ್ದಾರ್‌ ಶಾ


ಕಿರಣ್ ಮಜುಮ್ದಾರ್‌ ಶಾ ಅವರನ್ನು ಆರ್ಡರ್‌ ಆಫ್‌ ಆಸ್ಟ್ರೇಲಿಯಾದ ಜನರಲ್ ಡಿವಿಸನ್‌ ಸದಸ್ಯೆಯಾಗಿ ಆಸ್ಟ್ರೇಲಿಯಾದ ಭಾರತೀಯ ರಾಯಭಾರಿ ಹರಿಂದರ್‌ ಸಿಂಗ್‌ ಸಿದು ನೇಮಕ ಮಾಡಿದ್ದಾರೆ. ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆಯುತ್ತಿರುವ ಭಾರತೀಯರ ಪೈಕಿ ಮಜುಮ್ದಾರ್‌ ಶಾ ಅವರು ನಾಲ್ಕನೆಯವರು. ಈ ಮೊದಲು ಕ್ರಿಕೆಟರ್‌ ಸಚಿನ್‌ ತೆಂಡೂಲ್ಕರ್‌ (2012), ಭಾರತದ ಅಟಾರ್ನಿ ಜನರಲ್‌ ಸೋಲಿ ಜಹಾಂಗಿರ್‌ ಸೊರಬ್ಜಿ (2006), ಮದರ್‌ ತೆರೇಸಾ (1982) ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ