ಆ್ಯಪ್ನಗರ

ಕೋವಿಡ್ ಕಿಟ್ ತಯಾರಿಸಿ ಮಗುವಿಗೆ ಜನ್ಮವಿತ್ತ ಮಿನಾಲ್ ಬೋಸ್ಲೆ: ಸುಂದರ ಭವಿಷ್ಯಕ್ಕಾಗಿ ಪ್ರಾರ್ಥಿಸಿದ ದೇಶ

ದೇಶ ಕರೆದಾಗ ಓ ಎನ್ನದವರು ಯಾರಿದ್ದಾರೆ ಹೇಳಿ?. ಸಂಕಷ್ಟದ ಸಮಯದಲ್ಲಿ ತಮ್ಮೆಲ್ಲಾ ವೈಯಕ್ತಿಕ ಬೇಕು-ಬೇಡಗಳನ್ನು ಬದಿಗೆ ಸರಿಸಿ ದೇಶಕ್ಕಾಗಿ ದುಡಿಯುವುದು ಭಾರತೀಯರ ಗುಣ. ಅದರಂತೆ ದೇಶದ ಮೊದಲ ಕೋವಿಡ್-19 ಕಿಟ್ ತಯಾರಕಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಮಿನಾಲ್ ಬೋಸ್ಲೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪುಣೆಯ ಮೈಲ್ಯಾಬ್ ಡಿಸ್ಕವರಿ ಎಂಬ ಸಂಸ್ಥೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮುಖ್ಯಸ್ಥೆಯಾಗಿರುವ ಮಿನಾಲ್ ಬೋಸ್ಲೆ, ಕೋವಿಡ್-19 ಕಿಟ್ ತಯಾರಿಕೆಯಲ್ಲಿ ತೊಡಗಿದ್ದ ತಂಡದ ನೇತೃತ್ವ ವಹಿಸಿದ್ದರು. ತಮ್ಮ ಮಗುವಿಗೆ ಜನ್ಮ ನೀಡುವ ಒಂದು ದಿನ ಮುಂಚೆಯಷ್ಟೇ ಮಿನಾಲ್ ಬೋಸ್ಲೆ ಕೋವಿಡ್ ಕಿಟ್ ತಯಾರಿಸುವಲ್ಲಿ ಯಶಸ್ವಿಯಾಗಿದ್ದರು.

Vijaya Karnataka Web 29 Mar 2020, 6:40 pm

Vijaya Karnataka Web know more about minal bhosale indias first covid 19 kit maker who gave birth to baby girl
ಕೋವಿಡ್ ಕಿಟ್ ತಯಾರಿಸಿ ಮಗುವಿಗೆ ಜನ್ಮವಿತ್ತ ಮಿನಾಲ್ ಬೋಸ್ಲೆ: ಸುಂದರ ಭವಿಷ್ಯಕ್ಕಾಗಿ ಪ್ರಾರ್ಥಿಸಿದ ದೇಶ

ಕಿಟ್ ತಯಾರಿಕೆಗೆ ಹಗಲಿರುಳೂ ದುಡಿದ ಧೀರೆ!

ಮಾರಕ ಕೊರೊನಾ ವೈರಸ್ ವಿರುದ್ಧ ಒಂದಾಗಿ ಹೋರಾಡೋಣ ಎಂಬ ಪ್ರಧಾನಿ ಮೋದಿ ಕರೆಗೆ ಇಡೀ ದೇಶ ಓಗೊಟ್ಟಿದೆ. ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಿರ್ದಿಷ್ಟ ಕೊಡುಗೆಗಳನ್ನು ನೀಡುವ ಮೂಲಕ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ದೇಶದ ಮೊದಲ ಕೋವಿಡ್-19 ಕಿಟ್ ತಯಾರಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಿನಾಲ್ ಬೊಸ್ಲೆ ಮುದ್ದಾದ ಹೆಣ್ಣು ಮಗವಿಗೆ ಜನ್ಮ ನೀಡಿದ್ದು, ಗರ್ಭವತಿಯಾದಾಗಲೂ ನಿರಂತರವಾಗಿ ಕೆಲಸ ಮಾಡಿದ ಆಕೆಯ ಕರ್ತವ್ಯ ನಿಷ್ಠೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೋವಿಡ್-19 ಕಿಟ್ ತಯಾರಿಸಲು ಭಾರತ ಸರ್ಕಾರದಿಂದ ಅನುಮತಿ ಪಡೆದಿದ್ದ ಮೈಲ್ಯಾಬ್ ಡಿಸ್ಕವರಿ, ಕಿಟ್ ತಯಾರಿಕಾ ತಂಡದ ನೇತೃತ್ವವನ್ನು ಮಿನಾಲ್ ಬೋಸ್ಲೆ ಅವರಿಗೆ ನೀಡಿತ್ತು.

ಗರ್ಭವತಿಯಾಗಿದ್ದರೂ ವೈಯಕ್ತಿಕ ಹಿತಸಕ್ತಿ ಮರೆತು ದುಡಿದ ಮಿನಾಲ್!

ಗರ್ಭವತಿಯಾಗಿದ್ದ ಮಿನಾಲ್, ತಮ್ಮ ವೈಯಕ್ತಿಕ ತೊಂದರೆಗಳನ್ನು ಲೆಕ್ಕಿಸದೇ ಕೋವಿಡ್-19 ಕಿಟ್ ತಯಾರಿಕೆಯಲ್ಲಿ ಹಗಲಿರುಳೂ ಶ್ರಮಿಸಿದರು. ಅದರಂತೆ ಕಿಟ್ ತಯಾರಿಸಿ ಒಂದು ದಿನವಾದ ಮೇಲೆ ಮಿನಾಲ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಕೇವಲ 2 ರಿಂದ 2-30 ಗಂಟೆಯಲ್ಲಿ ಕೊರೊನಾ ವೈರಸ್ ಪರೀಕ್ಷೆಯನ್ನು ನಡೆಸುವ ಈ ಕಿಟ್ ಸದ್ಯ ಅತ್ಯಂತ ವೇಗವಾಗಿ ಪರೀಕ್ಷೆ ನಡೆಸುವ ಸಾಧನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ಯಾಥೋ ಡಿಟೆಕ್ಟ್ ಎಂಬ ಕೋವಿಡ್-19 ಕಿಟ್ ತಯಾರಿಸಿರುವ ಮಿನಾಲ್ ಬೋಸ್ಲೆ ನೇತೃತ್ವದ ತಂಡವನ್ನು ಖುದ್ದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಶ್ಲಾಘಿಸಿದ್ದಾರೆ.

ಕೋವಿಡ್ ಕಿಟ್ ತಯಾರಿಸಿದ ದೇಶದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ!

ಕೋವಿಡ್-19 ಕಿಟ್ ತಯಾರಿಸುವ ನೇತೃತ್ವವಹಿಸಿದ್ದ ಮೈಲ್ಯಾಬ್ಸ್ ಡಿಸ್ಕವರಿ ಸಂಸ್ಥೆಯ ತಂಡ, ಮೊಟ್ಟ ಮೊದಲ ಮೇಡ್ ಇನ್ ಇಂಡಿಯಾ ಕಿಟ್ ತಯಾರಿಸಿತ್ತು. ಈ ಮೂಲಕ ಇದು ಕೋವಿಡ್-19 ಪರೀಕ್ಷಾ ಕಿಟ್‍ಗಳನ್ನು ತಯಾರಿಸಿ ಮಾರಾಟ ಮಾಡಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆ ಪಡೆದಿದೆ. ಮಿನಾಲ್ ಬೋಸ್ಲೆ ನೇತೃತ್ವದ ತಂಡ ತಯಾರಿಸಿದ್ದ ಕೋವಿಡ್-19 ಕಿಟ್ ಮಾರ್ಚ್ 18 ರಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಅದರ ಮರುದಿನವೇ ಅಂದರೆ ಮಾರ್ಚ್ 19 ರಂದು ಮಿನಾಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮಿನಾಲ್ ಕುಟುಂಬದ ಭವಿಷ್ಯ ಚೆನ್ನಾಗಿರಲಿ ಎಂದು ಹಾರೈಸಿದ ದೇಶವಾಸಿಗಳು!

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಿನಾಲ್ ಬೋಸ್ಲೆ, ದೇಶಕ್ಕೆ ನನ್ನ ಅಗತ್ಯವಿರುವುದನ್ನು ಮನಗಂಡು, ಗರ್ಭಧಾರಣೆ ಸಮಯದಲ್ಲೂ ನಿರಂತರವಾಗಿ ಕೆಲಸ ಮಾಡಿ ಕಿಟ್ ತಯಾರಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ಸಂತಸವಾಗಿದೆ ಎಂದು ಹೇಳಿದ್ದಾರೆ. ಸದ್ಯ ದೇಶಾದ್ಯಂತ ಮಿನಾಲ್ ಹಾಗೂ ಆಕೆಯ ತಂಡದ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಗರ್ಭಿಣಿಯಾಗಿರುವುದನ್ನೂ ಲೆಕ್ಕಿಸದೇ ದೇಶದ ಒಳಿತಿಗಾಗಿ ದುಡಿದ ಮಿನಾಲ್ ಬೋಸ್ಲೆ ಅವರಿಗೆ ಧನ್ಯವಾದದ ಮಹಾಪೂರವೇ ಹರಿದು ಬರುತ್ತಿದೆ. ಅಲ್ಲದೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಮಿನಾಲ್ ಅವರ ಭವಿಷ್ಯ ಸುಂದರವಾಗಿರಲಿ ಎಂದು ಎಲ್ಲರೂ ಹಾರೈಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ