ಆ್ಯಪ್ನಗರ

ಉಡುಗೊರೆಯಾಗಿ ನೀಡಿದ ಕೊಹೀನೂರ್ ವಜ್ರ ತರಲಾಗೋಲ್ಲ: ಕೇಂದ್ರ ಸರಕಾರ

ಸುಮಾರು 1,331 ಕೋಟಿ ರೂ. ಮೌಲ್ಯದ ಕೊಹಿನೂರ್ ವಜ್ರವನ್ನು ಕದ್ದಿದ್ದಾಗಲಿ ಅಥವಾ ಒತ್ತಾಯವಾಗಿ ಇಂಗ್ಲೆಂಡ್‌ಗೆ ತೆಗೆದುಕೊಂಡು ಹೋಗಿರದ ಕಾರಣ ಅದು ನಮ್ಮದೆಂದು ಹೇಳಲಾಗುವುದಿಲ್ಲವೆಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಸೋಮವಾರ ಸ್ಪಷ್ಟಪಡಿಸಿದೆ.

ಏಜೆನ್ಸೀಸ್ 18 Apr 2016, 3:35 pm
ಹೊಸದಿಲ್ಲಿ: ಸುಮಾರು 1,331 ಕೋಟಿ ರೂ. ಮೌಲ್ಯದ ಕೊಹಿನೂರ್ ವಜ್ರವನ್ನು ಕದ್ದಿದ್ದಾಗಲಿ ಅಥವಾ ಒತ್ತಾಯವಾಗಿ ಇಂಗ್ಲೆಂಡ್‌ಗೆ ತೆಗೆದುಕೊಂಡು ಹೋಗಿರದ ಕಾರಣ ಅದು ನಮ್ಮದೆಂದು ಹೇಳಲಾಗುವುದಿಲ್ಲವೆಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಸೋಮವಾರ ಸ್ಪಷ್ಟಪಡಿಸಿದೆ.
Vijaya Karnataka Web kohinoor diamond not stolen gifted to uk centre tells supreme court
ಉಡುಗೊರೆಯಾಗಿ ನೀಡಿದ ಕೊಹೀನೂರ್ ವಜ್ರ ತರಲಾಗೋಲ್ಲ: ಕೇಂದ್ರ ಸರಕಾರ


ಸರಕಾರದ ಪರವಾಗಿ ಕೋರ್ಟ್ ಮುಂದೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್, ಇದು ಸಂಸ್ಕೃತಿ ಸಚಿವಾಲಯದ ನಿಲುವಾಗಿದ್ದು, 105 ಕ್ಯಾರೇಟ್ ಕೊಹಿನೂರ್ ವಜ್ರವನ್ನು ಈಸ್ಟ್ ಇಂಡಿಯಾ ಕಂಪನಿಗೆ ಮಹಾರಾಜ ರಂಜಿತ್ ಸಿಂಗ್ ಉಡುಗೊರೆಯಾಗಿ ನೀಡಿರುವುದಾಗಿ ತಿಳಿಸಿದ್ದಾರೆ.

ಪಂಜಾಬ್‌ನ ಬ್ರಿಟಿಷ್ ಗೌರ್ನರ್ ಆಗಿದ್ದ ಮಾರ್ಕ್ವೆಸ್ ಡಾಲ್‌ಹೌಸಿ 1850ರಲ್ಲಿ ಈ ವಜ್ರವನ್ನು ರಾಣಿ ವಿಕ್ಟೋರಿಯಾಗೆ ಉಡುಗೊರೆಯಾಗಿ ನೀಡಬೇಕೆಂದು ಪಂಜಾಬ್‌ ಮಹಾರಾಜನಿಗೆ ಒತ್ತಡ ಹೇರಿದ್ದ, ಎನ್ನಲಾಗಿದೆ. ಒಟ್ಟಾರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಆರು ವಾರಗಳೊಳಗೆ ವಿಸ್ತೃತ ವರದಿ ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ಸರಕಾರಕ್ಕೆ ತಿಳಿಸಿದೆ.

ಅಖಿಲ ಭಾರತ ಮಾನವ ಹಕ್ಕು ಮತ್ತು ಸಾಮಾಜಿಕ ನ್ಯಾಯ ಮಂಡಳಿ, ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿ ತರುವ ಸಂಬಂಧ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಸಿದ ಕೋರ್ಟ್ ಏ.9ರಂದು ಕೇಂದ್ರ ಸರಕಾರಕ್ಕೆ ಈ ಬಗ್ಗೆ ನಿಲುವು ಪ್ರಕಟಿಸಲು ಹೇಳಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ