ಆ್ಯಪ್ನಗರ

ನಕಲಿ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

ಕೊಲ್ಲಂನ ಫಾತಿಮಾ ಮಾತಾ ನ್ಯಾಷನಲ್‌ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿ ರಾಖಿ ಕೃಷ್ಣ(19), ಕೇರಳ ಎಕ್ಸ್‌ಪ್ರೆಸ್‌ ರೈಲಿಗೆ ಹಾರಿ ಪ್ರಾಣಬಿಟ್ಟಿದ್ದಾಳೆ. ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿ ಬಿದ್ದಿದ್ದ ಯುವತಿ, ಚಲಿಸುತ್ತಿರುವ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

TIMESOFINDIA.COM 30 Nov 2018, 3:05 pm
[This story originally published in Times of India on nov 29, 2018]
Vijaya Karnataka Web suicide


ಕೊಲ್ಲಂ: ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿ ಬಿದ್ದಿದ್ದ 19 ವರ್ಷದ ಯುವತಿ ಚಲಿಸುತ್ತಿರುವ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕೊಲ್ಲಂನ ಫಾತಿಮಾ ಮಾತಾ ನ್ಯಾಷನಲ್‌ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿ ರಾಖಿ ಕೃಷ್ಣ, ಕೇರಳ ಎಕ್ಸ್‌ಪ್ರೆಸ್‌ ರೈಲಿಗೆ ಹಾರಿ ಪ್ರಾಣಬಿಟ್ಟಿದ್ದಾಳೆ.

ಸೆಮೆಸ್ಟರ್‌ ಪರೀಕ್ಷೆಯಲ್ಲಿ ನಕಲು ಹೊಡೆಯುವ ವೇಳೆ, ಅಧ್ಯಾಪಕರಿಗೆ ಗೊತ್ತಾಗಿದೆ. ಅಧ್ಯಾಪಕರು ರಾಖಿಯನ್ನು ಪರೀಕ್ಷೆಗಳಲ್ಲಿ ದುಷ್ಕೃತ್ಯ ತಡೆಯುವ ದಳಕ್ಕೆ ಒಪ್ಪಿಸಿದ್ದಾರೆ. ಪೋಷಕರನ್ನು ಕಾಲೇಜಿಗೆ ಕರೆತರುವಂತೆ ಕಾಲೇಜು ಅಧ್ಯಾಪಕ ವರ್ಗ ತಾಕೀತು ಮಾಡಿದೆ. 12 ಗಂಟೆಗೆ ಕಾಲೇಜಿನಿಂದ ಹೊರಹೋಗಿದ್ದಳು ಎಂದು ತಿಳಿದು ಬಂದಿದೆ. ಕಾಲೇಜಿನಲ್ಲಿ ಅವಳು ಕಾಣದ ವೇಳೆ, ಅಧ್ಯಾಪಕ ವೃಂದ ಎಲ್ಲೆಡೆ ಹುಡುಕಾಡಿದ್ದಾರೆ. ಕೆಲ ಸಮಯದ ಬಳಿಕ ಹುಡುಗಿಯ ಶವ ರೈಲ್ವೆ ಹಳಿ ಮೇಲೆ ಸಿಕ್ಕಿರುವುದಾಗಿ ಕಾಲೇಜಿಗೆ ಮಾಹಿತಿ ಬಂದಿದೆ.

ತಿರುವನಂತಪುರ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ರಾಖಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಕೊಲ್ಲಂನ ಪೂರ್ವ ವಿಭಾಗದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾನೂನು ಪ್ರಕಾರ ಕ್ರಮಗಳನ್ನು ಕೈಗೊಳ್ಳಾಗುತ್ತಿದೆ. ಆರಂಭಿಕ ತನಿಖೆಯ ಪ್ರಕಾರ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ. ರಾಖಿ ಕುಟುಂಬದಿಂದ ಅಥವಾ ಸ್ನೇಹಿತರಿಂದ ಏನಾದರೂ ದೂರುಗಳು ಬಂದಿಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಕೊಲ್ಲಂ ಪೊಲೀಸ್‌ ಆಯುಕ್ತ ಪಿ ಕೆ ಮಧು ಹೇಳಿಕೆ ನೀಡಿದ್ದಾರೆ.

ತಂದೆ ರಾಧಾಕೃಷ್ಣನ್‌, ತಾಯಿ ಶ್ರೀಜಾತಾ ಹಾಗೂ ಸಹೋದರ ರಾಹುಲ್‌ ಕೃಷ್ಣ ಅವರನ್ನು ರಾಖಿ ಅಗಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ