ಆ್ಯಪ್ನಗರ

ತೇಜ್‌ ಪ್ರತಾಪ್‌-ಐಶ್ವರ್ಯಾ ರಾಯ್ ಅದ್ಧೂರಿ ನಿಶ್ಚಿತಾರ್ಥ

ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಹಾಗೂ ಬಿಹಾರದ ಮಾಜಿ ಸಚಿವರ ಚಂದ್ರಿಕಾ ಪ್ರಸಾದ್‌ ರೈ ಪುತ್ರಿ ಐಶ್ವರ್ಯ ರೈ ನಿಶ್ಚಿತಾರ್ಥ ಬುಧವಾರ ಪಟನಾದ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು

Vijaya Karnataka Web 18 Apr 2018, 9:52 pm
ಪಟನಾ: ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಹಾಗೂ ಬಿಹಾರದ ಮಾಜಿ ಸಚಿವರ ಚಂದ್ರಿಕಾ ಪ್ರಸಾದ್‌ ರೈ ಪುತ್ರಿ ಐಶ್ವರ್ಯ ರೈ ನಿಶ್ಚಿತಾರ್ಥ ಬುಧವಾರ ಪಟನಾದ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು.
Vijaya Karnataka Web lalu prasads elder son tej pratap yadav engaged to aishwarya rai
ತೇಜ್‌ ಪ್ರತಾಪ್‌-ಐಶ್ವರ್ಯಾ ರಾಯ್ ಅದ್ಧೂರಿ ನಿಶ್ಚಿತಾರ್ಥ


ಎರಡೂ ಕುಟುಂಬದ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು, ಆದರೆ ಲಾಲು ಪ್ರಸಾದ್‌ ಯಾದವ್‌ ಜೈಲಿನಲ್ಲಿರುವ ಕಾರಣ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ.

ಸುಮಾರು 200 ಮಂದಿ ಸಮ್ಮುಖದಲ್ಲಿ ತೇಜ್‌ ಪ್ರತಾಪ್‌ ಮತ್ತು ಐಶ್ವರ್ಯಾ ರೈ ಪರಸ್ಪರ ಉಂಗುರ ಬದಲಾಯಿಸಿಕೊಂಡರು. ಮೇ 12 ರಂದು ಪಟನಾದ ಪಶು ವೈದ್ಯಕೀಯ ಕಾಲೇಜಿನ ಮೈದಾನದಲ್ಲಿ ಇಬ್ಬರ ವಿವಾಹ ಮಹೋತ್ಸವ ನಡೆಯಲಿದೆ. ದಿಲ್ಲಿ, ಕೋಲ್ಕೊತಾ ಮತ್ತು ಬೆಂಗಳೂರಿನಿಂದ ತರಿಸಲಾದ ಹೂವುಗಳಿಂದ ಹೋಟೆಲ್‌ ಅನ್ನು ಸಿಂಗರಿಸಿದ್ದು ವಿಶೇಷವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ