ಆ್ಯಪ್ನಗರ

ಗುಪ್ತಚರ ಇಲಾಖೆ ಟ್ರೇಸ್‌ ಮಾಡಲಾಗದ ಮೊಬೈಲ್‌ ಅಭಿವೃದ್ಧಿಪಡಿಸಿದ ಲಷ್ಕರೆ ಉಗ್ರರು!

ಪಾಕಿಸ್ತಾನ ಮೂಲದ ಉಗ್ರ ಹಫೀಸ್‌ ಸಯೀದ್‌ ನೇತೃತ್ವದ ಲಷ್ಕರೆ ತಯ್ಯಬಾ ಸಂಘಟನೆಯ ವಿದ್ಯಾರ್ಥಿ ವಿಭಾಗವು ಗುಪ್ತಚರ ಇಲಾಖೆಯೂ ಬೇಧಿಸಲಾಗದಂತಹ ಮೊಬೈಲ್‌ ಫೋನ್‌ಗಳನ್ನು ಅಭಿವೃದ್ಧಿಪಡಿಸಿರುವ ವಿಷಯ ಬೆಳಕಿಗೆ ಬಂದಿದೆ.

Vijaya Karnataka Web 24 May 2018, 5:30 am
ಹೊಸದಿಲ್ಲಿ: ಪಾಕಿಸ್ತಾನ ಮೂಲದ ಉಗ್ರ ಹಫೀಸ್‌ ಸಯೀದ್‌ ನೇತೃತ್ವದ ಲಷ್ಕರೆ ತಯ್ಯಬಾ ಸಂಘಟನೆಯ ವಿದ್ಯಾರ್ಥಿ ವಿಭಾಗವು ಗುಪ್ತಚರ ಇಲಾಖೆಯೂ ಬೇಧಿಸಲಾಗದಂತಹ ಮೊಬೈಲ್‌ ಫೋನ್‌ಗಳನ್ನು ಅಭಿವೃದ್ಧಿಪಡಿಸಿರುವ ವಿಷಯ ಬೆಳಕಿಗೆ ಬಂದಿದೆ. ಲಷ್ಕರ್‌ ಸಂಘಟನೆಯ ಸದಸ್ಯರೊಂದಿಗೆ ಆಂತರಿಕ ಸಂವಹನ ಮಾಡುವುದಕ್ಕಾಗಿಯೇ ಈ ಮೊಬೈಲ್‌ ಅನ್ನು ತಯಾರಿಸಲಾಗಿದೆ ಎಂದು ವಿಚಾರಣೆ ವೇಳೆ ಬಂಧಿತ ಲಷ್ಕರೆ ಉಗ್ರನೊಬ್ಬ ಬಾಯ್ಬಿಟ್ಟಿದ್ದಾನೆ.
Vijaya Karnataka Web terror


ಅಲ್‌ ಮೊಹಮ್ಮದೀಯ ಸ್ಟೂಡೆಂಟ್ಸ್‌(ಎಎಂಎಸ್‌) ವಿದ್ಯಾರ್ಥಿ ಸಂಘಟನೆ ಈ ಮೊಬೈಲ್‌ ಅನ್ನು ತಯಾರಿಸಿದ್ದು, ನಿರ್ದಿಷ್ಟ ಚಿಪ್‌ನ್ನು ಮೊಬೈಲ್‌ಗೆ ಅಳವಡಿಕೆ ಮಾಡಿದ ಕೂಡಲೇ ಮೊಬೈಲ್‌ ಹತ್ತಿರದಲ್ಲೇ ಇರುವ ಟವರ್‌ನೊಂದಿಗೆ ಸಂಪರ್ಕ ಸಾಧಿಸುತ್ತದೆ. ಈ ಮೊಬೈಲ್‌ ಹ್ಯಾಂಡ್‌ಸೆಟ್‌ನಿಂದ ಮಾಡಿದ ಕರೆಗಳನ್ನು ಗುಪ್ತಚರ ಇಲಾಖೆ ಯಾವುದೇ ರೀತಿಯಲ್ಲೂ ಪತ್ತೆ ಮಾಡುವುದಕ್ಕೆ ಸಾಧ್ಯವಿಲ್ಲ, ಒಂದು ವೇಳೆ ಗುಪ್ತಚರ ಇಲಾಖೆ ಮೊಬೈಲ್‌ ಕರೆಯನ್ನು ಪತ್ತೆ ಮಾಡಲು ಯತ್ನಿಸಿದರೆ ತಕ್ಷ ಣವೇ ಕರೆ ಕಡಿತಗೊಳ್ಳುತ್ತದೆ.

ಅಂಡರ್‌ಗ್ರೌಂಡ್‌ನಲ್ಲಿ ತರಬೇತಿ: ಅಷ್ಟೇ ಅಲ್ಲ, ಎಲ್‌ಇಟಿ ಸಂಘಟನೆಯು ಉಗ್ರರಿಗೆ ಅಂಡರ್‌ಗ್ರೌಂಡ್‌ ಶಿಬಿರಗಳಲ್ಲಿ ತರಬೇತಿ ನೀಡುತ್ತದೆ ಎಂದು ಮುಲ್ತಾನ್‌ ಮೂಲದ ಎಲ್‌ಇಟಿ ಭಯೋತ್ಪಾದಕ ಜೈಬುಲ್ಲಾ ಎನ್‌ಐಎ ವಿಚಾರಣೆ ವೇಳೆ ಹೇಳಿದ್ದಾನೆ. ಇಂತಹ 7 ಕ್ಯಾಂಪ್‌ಗಳನ್ನು ಎಲ್‌ಇಟಿ ನಡೆಸುತ್ತಿದೆ. ಒಂದೊಂದು ಕ್ಯಾಂಪ್‌ನಲ್ಲೂ ಪ್ರತ್ಯೇಕ ವಿಷಯದ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ಬಂಧಿತ ಮಾಹಿತಿ ನೀಡಿದ್ದಾನೆ. ಮಾ. 3ರಂದು ಭಾರತಕ್ಕೆ ನುಸುಳಿದ್ದ ಈತನನ್ನು ಕುಪ್ವಾರದಲ್ಲಿ ಏ. 07ರಂದು ಬಂಧಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ