ಆ್ಯಪ್ನಗರ

ಶಬರಿಮಲೆ ಪ್ರಕರಣದಲ್ಲಿ ಉಲ್ಟಾ ಹೊಡೆದ ದೇವಸ್ವಂ ಮಂಡಳಿ ವಕೀಲ

ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಮರುಪರಿಶೀಲನಾ ಅರ್ಜಿಗಳ ವಿಚಾರಣೆ

Vijaya Karnataka 13 Nov 2018, 10:17 am
ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯ ಮುನ್ನಾದಿನ ತಿರುವಾಂಕೂರು ದೇವಸ್ಥಾನ ಮಂಡಳಿಯ (ಟಿಡಿಬಿ) ವಕೀಲರು ಯೂ ಟರ್ನ್‌ ಹೊಡೆದಿದ್ದು, ಅರ್ಜಿದಾರರ ಪರ ವಾದಿಸುವುದಾಗಿ ತಿಳಿಸಿದ್ದಾರೆ.
Vijaya Karnataka Web Shabarimala


ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಪೀಠವು 42 ಮರು ಪರಿಶೀಲನಾ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡಿದ್ದು, ಮಧ್ಯಾಹ್ನ 3 ರಿಂದ ವಿಚಾರಣೆ ಆರಂಭಿಸಲಿದೆ. ಹೀಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ಟಿಡಿಬಿ ಪರ ವಾದಿಸಬೇಕಿದ್ದ ಹಿರಿಯ ವಕೀಲ ಸಿ.ಆರ್ಯಮ ಸುಂದರಂ ಈಗ ಅರ್ಜಿದಾರರಲ್ಲಿ ಒಬ್ಬರಾಗಿರುವ 'ನಾಯರ್‌ ಸೇವಾ ಸಮಿತಿ' ಪರ ವಾದಿಸಲಿದ್ದಾರೆ. ಅವರ ಈ ದಿಢೀರ್‌ ನಿರ್ಧಾರದಿಂದಾಗಿ ಹಿರಿಯ ವಕೀಲ ಶೇಖರ್‌ ನಫಾಡೆ ಇನ್ನುಮುಂದೆ ಟಿಡಿಬಿಯನ್ನು ಕೋರ್ಟ್‌ನಲ್ಲಿ ಪ್ರತಿನಿಧಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಸುಂದರಂ ಈ ಹಿಂದೆ ಬಿಸಿಸಿಐ ಪರವಾಗಿ ಹಲವು ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ. ಇವರು ಚೆನ್ನೈ ಮೂಲದ ಪ್ರಖ್ಯಾತ ವಕೀಲ ಸಿ.ಪಿ.ರಾಮಸ್ವಾಮಿ ಅವರ ಪುತ್ರರಾಗಿದ್ದಾರೆ.

ಸರ್ವಪಕ್ಷ ಸಭೆ?: ಎರಡು ತಿಂಗಳ ವಾರ್ಷಿಕ ಯಾತ್ರೆಗೆ ನವೆಂಬರ್‌ 17ರಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆಯಲಿದ್ದು, ಮತ್ತೆ ಅಹಿತಕರ ಘಟನೆಗಳು ಜರುಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಕೇರಳ ಸರಕಾರ ಸರ್ವಪಕ್ಷ ಸಭೆ ಕರೆದು ಚರ್ಚಿಸಲು ಚಿಂತನೆ ನಡೆಸಿದೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಮುಜರಾಯಿ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ