ಆ್ಯಪ್ನಗರ

ಕಾಂಗ್ರೆಸ್ ಹೈಕಮಾಂಡ್ ಸಭೆಯ ನಿರ್ಧಾರಗಳೇ ಸೋರಿಕೆ?! ಮೀಟಿಂಗ್‌ನಲ್ಲಿ ಮೊಬೈಲ್ ಬ್ಯಾನ್ ಮಾಡಿದ ಸೋನಿಯಾ!

ಹುಬ್ಬಳ್ಳಿಯ ಸಭೆಯೊಂದರಲ್ಲಿ ಸಿಎಂ ಯಡಿಯೂರಪ್ಪ ಆಡಿದ್ದಾರೆ ಎನ್ನಲಾದ ಮಾತುಗಳೇ ಈಗ ‘ಆಡಿಯೋ ಬಾಂಬ್’ ಸ್ವರೂಪ ಪಡೆದುಕೊಂಡಿದೆ. ಮೊಬೈಲ್ ಇದ್ದಲ್ಲಿ ಮಾಹಿತಿ ಸೋರಿಕೆ ಖಚಿತ ಅನ್ನೋ ಮಾತುಗಳಿವೆ. ಈ ಮೊಬೈಲ್ ಮಾಹಿತಿ ಸೋರಿಕೆ ಬಿಸಿ ಕಾಂಗ್ರೆಸ್ ಹೈಕಮಾಂಡ್‌ಗೂ ಸಖತ್ತಾಗೇ ತಟ್ಟಿದೆ!

TIMESOFINDIA.COM 4 Nov 2019, 8:40 pm
ಹೊಸ ದಿಲ್ಲಿ: ಸಿಎಂ ಯಡಿಯೂರಪ್ಪ ಆಡಿಯೋ ಬಾಂಬ್ ವಿವಾದ ಇನ್ನೂ ಚರ್ಚೆಯಲ್ಲಿರುವಾಗಲೇ, ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಂಡಿದೆ! ತಮ್ಮ ಪಕ್ಷದ ಸಭೆಗಳಿಗೆ ಮೊಬೈಲ್ ಫೋನ್ ನಿಷೇಧ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾತುಕತೆ ನಡೆಯುವ ವೇಳೆ ಮೊಬೈಲ್ ಫೋನ್‌ ಬಳಕೆಯಿಂದ ಅಡಚಣೆಯಾಗುತ್ತೆ, ಮಾಹಿತಿ ಸೋರಿಕೆಯಾಗಲೂಬಹುದು. ಹೀಗಾಗಿ, ನಮ್ಮ ಸಭೆಗಳಲ್ಲಿ ಮೊಬೈಲ್ ನಿಷೇಧಿಸೋಣ ಎಂದು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದೆ.
Vijaya Karnataka Web leaking of information sonia gandhi ban mobile in congress party meeting
ಕಾಂಗ್ರೆಸ್ ಹೈಕಮಾಂಡ್ ಸಭೆಯ ನಿರ್ಧಾರಗಳೇ ಸೋರಿಕೆ?! ಮೀಟಿಂಗ್‌ನಲ್ಲಿ ಮೊಬೈಲ್ ಬ್ಯಾನ್ ಮಾಡಿದ ಸೋನಿಯಾ!


ಪ್ರಿಯಾಂಕ ಗಾಂಧಿ ಫೋನ್ ಹ್ಯಾಕ್ ! ಕಳ್ಳಗಿವಿಯ ಹಿಂದೆ ಯಾರಿದ್ದಾರೆ ಗೊತ್ತಾ?

ಇತ್ತೀಚೆಗಷ್ಟೇ ನಡೆದ ಹಿರಿಯ ನಾಯಕರ ಸಭೆ ವೇಳೆ ಮೊಬೈಲ್ ತರದಂತೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಪಕ್ಷದ ಹಿರಿಯ ನಾಯಕರಿಗೇ ತಾಕೀತು ಮಾಡಿದ್ದರು ಎಂದು ಮೂಲಗಳು ತಿಳಿಸಿವೆ. ಮುಂಬರುವ ದಿನಗಳಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲೂ ಮೊಬೈಲ್ ಫೋನ್ ನಿಷೇಧ ಮಾಡಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಪಕ್ಷದ ಹಿರಿಯ ನಾಯಕರನ್ನು ಮತ್ತಷ್ಟು ಪ್ರಾಮಾಣಿಕರನ್ನಾಗಿಸೋದು ಹಾಗೂ ಮಾಹಿತಿ ಸೋರಿಕೆಯನ್ನು ತಡೆಯೋದು ಈ ನಿರ್ಧಾರದ ಹಿಂದಿನ ಉದ್ದೇಶ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, ಸಭೆಯಲ್ಲಿ ಚರ್ಚೆಯಾಗುವ ವಿಷಯಗಳು, ಕೈಗೊಳ್ಳುವ ತೀರ್ಮಾನಗಳ ಗೌಪ್ಯತೆ ಕಾಪಾಡಲು ಮೊಬೈಲ್ ಬ್ಯಾನ್ ಅತ್ಯಗತ್ಯ ಎಂದು ಕಾಂಗ್ರೆಸ್ ಹೈಕಮಾಂಡ್ ಅಭಿಪ್ರಾಯಪಟ್ಟಿದೆ.

ಇಸ್ರೇಲ್ ಸಂಸ್ಥೆಯಿಂದ ವಾಟ್ಸಪ್ ಹ್ಯಾಕ್; ಸುರಕ್ಷಾ ಕ್ರಮದ ಮಾಹಿತಿ ಕೇಳಿದ ಕೇಂದ್ರ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳು ಹಾಗೂ ವಿವಿಧ ಘಟಕಗಳ ಮುಖ್ಯಸ್ಥರ ಜೊತೆ ಶನಿವಾರವಷ್ಟೇ ಸೋನಿಯಾ ಗಾಂಧಿ ಸಾರಥ್ಯದಲ್ಲಿ ಸಭೆ ನಡೆದಿತ್ತು. ಕೇಂದ್ರ ಸರ್ಕಾರದ ವಿರುದ್ಧ ನವೆಂಬರ್ 5 ರಿಂದ 15ರವರೆಗೂ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಈ ಸಂದರ್ಭದಲ್ಲಿ ಕಾರ್ಯತಂತ್ರ ರೂಪಿಸಲಾಗಿತ್ತು. ದೇಶದ ಆರ್ಥಿಕ ಹಿಂಜರಿತ, ಆರ್‌ಸಿಇಪಿ, ರೈತರ ಆತ್ಮಹತ್ಯೆ ಪ್ರಕರಣಗಳು, ನಿರುದ್ಯೋಗ ಸೇರಿದಂತೆ ಹಲವು ವಿಚಾರಗಳನ್ನು ಸರಣಿ ಪ್ರತಿಭಟನೆ ವೇಳೆ ದೇಶಾದ್ಯಂತ ಬಿಂಬಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದ್ರೆ, ಸಭೆಯಲ್ಲಿ ತೆಗೆದುಕೊಳ್ಳುತ್ತಿದ್ದ ಪ್ರತಿಯೊಂದು ನಿರ್ಣಯವೂ ಆ ಕ್ಷಣವೇ ಹೊರಗಡೆ ಸೋರಿಕೆಯಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ! ಸಭೆ ವೇಳೆ ಕೆಲವು ಹಿರಿಯ ಕಾಂಗ್ರೆಸ್ ನಾಯಕರೇ ತಮ್ಮ ಮೊಬೈಲ್ ಫೋನ್‌ಗಳನ್ನು ನೋಡುತ್ತಾ ಕುಳಿತಿದ್ದರು.

ಹಾಗೆ ನೋಡಿದ್ರೆ, ರಾಜ್ಯದಲ್ಲೂ ಈಗ ಮೊಬೈಲ್ ಫೋನ್ ಹಾಗೂ ಆಡಿಯೋ ರೆಕಾರ್ಡಿಂಗ್‌ ವಿಚಾರವೇ ಸಾಕಷ್ಟು ಸದ್ದು ಮಾಡ್ತಿದೆ. ಹುಬ್ಬಳ್ಳಿಯಲ್ಲಿ ನಡೆದ ಸಭೆಯೊಂದರಲ್ಲಿ ಸಿಎಂ ಯಡಿಯೂರಪ್ಪ ಆಡಿದ್ದಾರೆ ಎನ್ನಲಾದ ಮಾತುಗಳೇ ಈಗ ‘ಆಡಿಯೋ ಬಾಂಬ್’ ಸ್ವರೂಪ ಪಡೆದುಕೊಂಡಿದೆ. ಸುಪ್ರೀಂ ಅಂಗಳ ತಲುಪಿದೆ! ತೀರ್ಪಿನ ನಿರೀಕ್ಷೆಯಲ್ಲಿದ್ದ ಅನರ್ಹ ಶಾಸಕರ ಎದೆ ಬಡಿತವನ್ನೂ ಹೆಚ್ಚಿಸಿದೆ.

ಆಡಿಯೋ ಲೀಕ್‌ನಿಂದ ಕಂಗೆಟ್ಟ ಅನರ್ಹರು! ಕಾಡ್ತಿದೆ ರಾಜಕೀಯ ಭವಿಷ್ಯದ ಚಿಂತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ