ಆ್ಯಪ್ನಗರ

ರಸ್ತೆ ದಾಟುತ್ತಿದ್ದ ಮಗುವಿಗೆ ವಾಹನ ಡಿಕ್ಕಿ: ಆರೋಪಿ ಉಪನ್ಯಾಸಕಿ ಸೆರೆ

ತಾಯಿ ಜತೆ ರಸ್ತೆ ದಾಟುತ್ತಿದ್ದ ಮೂರೂವರೆ ವರ್ಷದ ಮಗುವಿಗೆ ಎಸ್‌ಯುವಿ ವಾಹನವನ್ನು ಗುದ್ದಿ ಬೀಳಿಸಿ ಸಾವಿಗೆ ಕಾರಣವಾದ ಉಪನ್ಯಾಸಕಿಯನ್ನು ಸಾಯಿದಾಬಾದ್‌ ಪೊಲೀಸರು ಬಂಧಿಸಿದ್ದಾರೆ.

Vijaya Karnataka Web 29 Jun 2018, 11:49 am
ಹೈದರಾಬಾದ್‌: ತಾಯಿ ಜತೆ ರಸ್ತೆ ದಾಟುತ್ತಿದ್ದ ಮೂರೂವರೆ ವರ್ಷದ ಮಗುವಿಗೆ ಎಸ್‌ಯುವಿ ವಾಹನವನ್ನು ಗುದ್ದಿ ಬೀಳಿಸಿ ಸಾವಿಗೆ ಕಾರಣವಾದ ಉಪನ್ಯಾಸಕಿಯನ್ನು ಸಾಯಿದಾಬಾದ್‌ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web arrest woman


ಕಿಂಡರ್‌ ಗಾರ್ಟನ್‌ ಶೇಖ್‌ ರಹಮಾನ್‌ ಅಲಿ ತಾಯಿ ಜತೆ ದಿಲ್‌ಕುಶ್‌ ನಗರದಲ್ಲಿ ರಸ್ತೆ ದಾಟುತ್ತಿರುವಾಗ ಸಿದ್ದಾರ್ಥ್‌ ಜ್ಯೂನಿಯರ್‌ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಅವರು ಎಸ್‌ಯುವಿ ವಾಹನವನ್ನು ಹಿಂದಿನಿಂದ ಗುದ್ದಿಸಿ ಮಗುವನ್ನು ಬೀಳಿಸಿದ್ದರು. ಗಾಯಗೊಂಡ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ.

ಉಪನ್ಯಾಸಕಿ ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು, ಅಲ್ಲಿಂದ ಬಿಡುಗಡೆಯಾದ ಬಳಿಕ ಪೊಲೀಸರು ಬಂಧಿಸಿದ್ದು, ಅವರಿಗೆ ಜಾಮೀನು ಸಿಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ