ಆ್ಯಪ್ನಗರ

ಮೋದಿ ಸರಕಾರದ ವಿರುದ್ಧ ಎಡಪಕ್ಷಗಳ ಗುಡುಗು

ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸರಕಾರ ಪ್ರಜಾಪ್ರಭುತ್ವ ವಿರೋಧಿ ನಿಲುವು ತಳೆದಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ‍್ಯದರ್ಶಿ ಸೀತಾರಾಂ ಯೆಚೂರಿ ಕಿಡಿಕಾರಿದರು.

Vijaya Karnataka 4 Feb 2019, 5:00 am
ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ರಾರ‍ಯಲಿಯ ಬೆನ್ನಲ್ಲೇ ಕೋಲ್ಕೊತಾದಲ್ಲಿ ಸಮಾವೇಶ ನಡೆಸಿರುವ ಸಿಪಿಐ(ಎಂ) ಕೇಂದ್ರ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದೆ. ಹಾಗೆಯೇ, ರಾಜ್ಯದಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಡಳಿತದ ವಿರುದ್ಧವೂ ಕೆಂಡಕಾರಿದೆ.
Vijaya Karnataka Web sitaram yechuri


ಕೋಲ್ಕೊತಾದ ಬ್ರಿಗೇಡ್‌ ಪರೇಡ್‌ ಗ್ರೌಂಡ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ‍್ಯದರ್ಶಿ ಸೀತಾರಾಂ ಯೆಚೂರಿ, ''ಪ್ರಧಾನಿ ಮೋದಿ ಸರಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅಭಿವೃದ್ಧಿಯ ನೆಪದಲ್ಲಿ ಬಡವರನ್ನು ನಿರ್ಲಕ್ಷಿಸಿ ಕಾರ್ಪೊರೇಟ್‌ ಉದ್ಯಮಿಗಳನ್ನು ಬೆಳೆಸಿದೆ. ಬಣ್ಣದ ಮಾತುಗಳಿಂದ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಕೋಮುಗಳ ಮಧ್ಯೆ ದ್ವೇಷ ಹುಟ್ಟುಹಾಕುವ, ಉದ್ಯಮಿಗಳನ್ನು ಓಲೈಸುವ ಇಂತಹ ಕಾವಲುಗಾರ (ಚೌಕಿದಾರ್‌) ನಮಗೆ ಬೇಕಾಗಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ,'' ಎಂದು ಜನತೆಗೆ ಕರೆ ನೀಡಿದರು.

''ಕೇಂದ್ರ ಸರಕಾರ ಸಿಬಿಐ, ಜಾರಿ ನಿರ್ದೇಶನಾಲಯ, ಆರ್‌ಬಿಐ ಎಲ್ಲವನ್ನೂ ತನ್ನ ಮೂಗಿನ ನೇರಕ್ಕೆ ಬಳಸಿಕೊಳ್ಳುತ್ತಿದೆ. ಮತಗಳ ಮೇಲೆ ಕಣ್ಣಿಟ್ಟು ಮಧ್ಯಂತರ ಬಜೆಟ್‌ ಮಂಡಿಸಿದೆ. ರೈತರ, ಕಾರ್ಮಿಕರ ಹಾಗೂ ಶ್ರೀಸಾಮಾನ್ಯರ ಬಗ್ಗೆ ಮೋದಿ ಅವರಿಗೆ ಕಿಂಚಿತ್ತೂ ಕಳಕಳಿ ಇಲ್ಲ,'' ಎಂದು ಜರಿದರು. ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸರಕಾರ ಪ್ರಜಾಪ್ರಭುತ್ವ ವಿರೋಧಿ ನಿಲುವು ತಳೆದಿದೆ ಎಂದು ಕಿಡಿಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ