ಆ್ಯಪ್ನಗರ

ಲಾಲು ರ್ಯಾಲಿಯಲ್ಲಿ ಅಖಿಲೇಶ್‌ ಭಾಗಿ, ಬಿಎಸ್ಪಿ ನಡೆ ಅಸ್ಪಷ್ಟ

ಲಾಲೂ ಪ್ರಸಾದ್‌ ಯಾದವ್‌ ಅವರ ಆರ್‌ಜೆಡಿ ಪಕ್ಷ ದ ವತಿಯಿಂದ ಪಟನಾದಲ್ಲಿ ಭಾನುವಾರ ಹಮ್ಮಿಕೊಂಡಿರುವ 'ಬಿಜೆಪಿ ಭಗಾವೋ, ದೇಶ್‌ ಬಚಾವೋ' ರಾರ‍ಯಲಿಯಲ್ಲಿ ಸಮಾಜವಾದಿ ಪಕ್ಷ ...

Agencies 22 Aug 2017, 5:03 am

ಲಖನೌ

ಲಾಲೂ ಪ್ರಸಾದ್‌ ಯಾದವ್‌ ಅವರ ಆರ್‌ಜೆಡಿ ಪಕ್ಷ ದ ವತಿಯಿಂದ ಪಟನಾದಲ್ಲಿ ಭಾನುವಾರ ಹಮ್ಮಿಕೊಂಡಿರುವ 'ಬಿಜೆಪಿ ಭಗಾವೋ, ದೇಶ್‌ ಬಚಾವೋ' ರ್ಯಾಲಿ ಸಮಾಜವಾದಿ ಪಕ್ಷ ದ ನಾಯಕ ಅಖಿಲೇಶ್‌ ಯಾದವ್‌ ಭಾಗವಹಿಸಲಿದ್ದಾರೆ. ಆದರೆ ಬಿಎಸ್‌ಪಿ ನಾಯಕಿ ಮಾಯಾವತಿ ಮಾತ್ರ ಇನ್ನೂ ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಣಿಯಲು ಏಕಚಿಂತನೆಯ ಪಕ್ಷ ಗಳ ಬೃಹತ್‌ ಮೈತ್ರಿ ಸಾಧಿಸುವ ಯತ್ನ ಈ ರಾರ‍ಯಲಿಯದು. ಇದಕ್ಕಾಗಿ ಲಾಲು ಎಸ್‌ಪಿ ಹಾಗೂ ಬಿಎಸ್‌ಪಿ ಅಧ್ಯಕ್ಷ ರಿಗೆ ಆಹ್ವಾನ ನೀಡಿದ್ದಾರೆ.

''ಪಕ್ಷಾಧ್ಯಕ್ಷ ಅಖಿಲೇಶ್‌ ಆ.27ರಂದು ಪಟನಾಕ್ಕೆ ಭೇಟಿ ನೀಡಿ, ಲಾಲೂ ಪ್ರಸಾದ್‌ ಹಮ್ಮಿಕೊಂಡಿರುವ ರಾರ‍ಯಲಿಯಲ್ಲಿ ಭಾಗವಹಿಸಲಿದ್ದಾರೆ,'' ಎಂದು ಎಸ್‌ಪಿ ವಕ್ತಾರ ರಾಜೇಂದ್ರ ಚೌಧರಿ ತಿಳಿಸಿದ್ದಾರೆ.

ಆದರೆ, ಬಿಜೆಪಿಯೇತರ ನಾಯಕರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್‌ನಲ್ಲಿ ತಮ್ಮ ಫೋಟೋ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಎಸ್ಪಿ ನಾಯಕಿ, ಇದು 'ಕುಚೋದ್ಯ ಹಾಗೂ ತಪ್ಪು' ಎಂದಿದ್ದಾರೆ. ಜೊತೆಗೆ ಪಕ್ಷ ಕ್ಕಿನ್ನೂ ಟ್ವಿಟ್ಟರ್‌ ಖಾತೆಯೇ ಇಲ್ಲವಾಗಿದ್ದು, ಮಾಧ್ಯಮಗಳಲ್ಲಿ ಪೋಸ್ಟರ್‌ ನೋಡಿ ಬರುತ್ತಿರುವ ಸುದ್ದಿಗಳು ಸುಳ್ಳು ಎಂದಿದ್ದಾರೆ. ಹೀಗಾಗಿ, ರಾರ‍ಯಲಿಯಲ್ಲಿ ಮಾಯಾವತಿ ಭಾಗವಹಿಸುವುದು ಇನ್ನೂ ಖಚಿತವಿಲ್ಲ.

ಪೋಸ್ಟರ್‌ನಲ್ಲಿ ಸೋನಿಯಾಗಾಂಧಿ, ಅಖಿಲೇಶ್‌, ತೇಜಸ್ವಿ ಯಾದವ್‌, ಲಾಲು, ಮಮತಾ ಬ್ಯಾನರ್ಜಿ ಹಾಗೂ ಮಾಯಾವತಿಯ ಫೋಟೋಗಳಿದ್ದು, ಬಿಎಸ್ಪಿ ಲೋಗೋ ಬಳಸಲಾಗಿದೆ. ಹಾಗೂ 'ಸಾಮಾಜಿಕ ನ್ಯಾಯದ ವಿಷಯದಲ್ಲಿ ಪ್ರತಿಪಕ್ಷ ಗಳೆಲ್ಲ ಒಂದೇ,' ಎಂದು ಬರೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ