ಆ್ಯಪ್ನಗರ

ಸಾಮಾಜಿಕ ಜಾಲತಾಣಗಳ ಜತೆ ಆಧಾರ್‌ ಜೋಡಣೆ; ಎಲ್ಲ ಅರ್ಜಿ ಸುಪ್ರೀಂಗೆ ವರ್ಗಾವಣೆ

ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾಗಳಲ್ಲಿ ನಕಲಿ ಖಾತೆಗಳ ಹಾವಳಿ ಹೆಚ್ಚುತ್ತಿದ್ದು ಇದರಿಂದ ನಕಲಿ ಸುದ್ದಿ ಹರಡಿ ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡುವ ಪ್ರಯತ್ನಗಳು ನಡೆಯುತ್ತಿವೆ.

Vijaya Karnataka Web 22 Oct 2019, 8:24 pm
ಹೊಸದಿಲ್ಲಿ: ಫೇಸ್‌ಬುಕ್‌, ವಾಟ್ಸಾಪ್‌ ಸೇರಿ ಸಾಮಾಜಿಕ ಜಾಲತಾಣಗಳ ಖಾತೆಯೊಂದಿಗೆ ಆಧಾರ್‌ ನಂಬರ್‌ ಜೋಡಿಸುವ ಕುರಿತು ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ವಿಚಾರಣೆಗೆ ಬಾಕಿ ಇರುವ ಎಲ್ಲ ಅರ್ಜಿಗಳು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ವರ್ಗಾವಣೆಯಾಗಿವೆ.
Vijaya Karnataka Web ಸಾಮಾಜಿಕ ಜಾಲತಾಣ
ಸಾಮಾಜಿಕ ಜಾಲತಾಣ


ಧರ್ಮ, ವ್ಯಕ್ತಿಯ ಕುರಿತು ನಿಂದನಾತ್ಮಕ ಹೇಳಿಕೆಗಳನ್ನು ಪ್ರಕಟಿಸುವುದು ಹಾಗೂ ದೇಶ ವಿರೋಧಿ ಚುಟವಟಿಕೆಗಳನ್ನು ಹೆಚ್ಚಿಸಲು ಬಳಸಿಕೊಳ್ಳಲಾಗುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಲು ಪ್ರತಿ ಸೋಷಿಯಲ್‌ ಮಿಡಿಯಾ ಅಕೌಂಟ್‌ಗೆ ಕಡ್ಡಾಯವಾಗಿ ಆಧಾರ್‌ ಜೋಡಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ತಮಿಳುನಾಡು, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿದ್ದವು.

ಒಂದೇ ವಿಷಯದ ಕುರಿತು ವಿವಿಧ ಹೈಕೋರ್ಟ್‌ಗಳು ಭಿನ್ನ ತೀರ್ಪು ನೀಡಿದಲ್ಲಿ ಗೊಂದಲಕ್ಕೆ ಕಾರಣವಾಗುವ ಕಾರಣ ಈ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕೆಂದು ಆಗ್ರಹಿಸಿ ಫೇಸ್‌ಬುಕ್‌ ಸುಪ್ರೀಂ ಮೊರೆ ಹೋಗಿತ್ತು.

ಈ ಮನವಿ ಆಲಿಸಿದ ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತಾ ಹಾಗೂ ಅನಿರುದ್ಧ್‌ ಬೋಸ್‌ ಅವರನ್ನೊಳಗೊಂಡ ಪೀಠವು, ಸೋಷಿಯಲ್‌ ಮಿಡಿಯಾ ಅಕೌಂಟ್‌ಗಳಿಗೆ ಆಧಾರ್‌ ಜೋಡಿಸುವ ಕುರಿತು ಹೈಕೋರ್ಟ್‌ಗಳಲ್ಲಿ ದಾಖಲಾಗಿರುವ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸ್ವಯಂ ವರ್ಗಾಯಿಸಿಕೊಂಡಿದ್ದು, ಮುಂಬರುವ ಜನವರಿಯಲ್ಲಿ ಸೂಕ್ತ ನ್ಯಾಯಪೀಠ ಇವುಗಳ ವಿಚಾರಣೆ ನಡೆಸಲಿದೆ ಎಂದು ಹೇಳಿದೆ.

ಸಾಮಾಜಿಕ ಜಾಲತಾಣಗಳ ನಿಯಂತ್ರಣ ಮಾರ್ಗಸೂಚಿ ರಚನೆ ಸಂಬಂಧ 2020ರ ಜನವರಿಗೂ ಕಾಲಾವಕಾಶ ನೀಡುವಂತೆ ಕೇಂದ್ರ ಸರಕಾರ ಸುಪ್ರೀಂ ನ್ಯಾಯಪೀಠವನ್ನು ಕೋರಿಕೊಂಡಿದೆ. ಪ್ರತಿಯೊಬ್ಬರ ಜಾಲತಾಣಗಳ ಖಾತೆಗಳ ಮೇಲೆ ನಿಗಾ ಇರಿಸುವುದು ತುಂಬಾ ಸಂಕೀರ್ಣತೆಯಿಂದ ಕೂಡಿದ್ದು, ಇವುಗಳ ನಿಯಂತ್ರಣ ಕುರಿತ ಮಾರ್ಗಸೂಚಿ ರಚನೆಗೆ ಇನ್ನಷ್ಟು ಸಮಯಾವಕಾಶ ಬೇಕಿದೆ. ಜನವರಿಯೊಳಗೆ ಸಿದ್ಧಪಡಿಸಲಾಗುವುದು ಎಂದು ಕೇಂದ್ರ ಸರಕಾರ ಅಫಿಡವಿಟ್‌ನಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ